ETV Bharat / state

ಅರಸೀಕೆರೆ: ಅಕ್ರಮ ಸಂಬಂಧ ಹಿನ್ನೆಲೆ ಹೆಂಡತಿ-ಅತ್ತೆಯ ಬರ್ಬರ ಹತ್ಯೆ - Hassan murder story

ಹೆಂಡತಿ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಬುದ್ಧಿ ಹೇಳಿದ ಗಂಡನ ಮಾತು ಕೇಳದ ಹೆಂಡತಿ, ಆಕೆಗೆ ಹೆತ್ತ ತಾಯಿಯೇ ಅಕ್ರಮ ಸಂಬಂಧಕ್ಕೆ ಸಾಥ್​ ನೀಡಿದ ಕಾರಣ ಮನನೊಂದ ಗಂಡ ಆಕ್ರೋಶಗೊಂಡು ಇಬ್ಬರನ್ನೂ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಅರಸೀಕೆರೆ ತಾಲೂಕಿನ ರಂಗಾಪುರ ಗ್ರಾಮದಲ್ಲಿ ನಡೆದಿದೆ.

murder
murder
author img

By

Published : Jun 15, 2021, 10:20 AM IST

ಹಾಸನ: ಅಕ್ರಮ ಸಂಬಂಧ ಹಿನ್ನೆಲೆ ಹೆಂಡತಿ ಸೇರಿದಂತೆ ಅತ್ತೆಯನ್ನೂ ಕೊಲೆಗೈದಿರುವ ದಾರುಣ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಪೊಲೀಸ್ ಠಾಣಾ ವ್ಯಾಪ್ತಿಯ ರಂಗಾಪುರ ಗ್ರಾಮದಲ್ಲಿ ನಡೆದಿದೆ.

ಕೊಲೆಯಾದವರನ್ನು ಭಾರತಿ (55), ಮಂಜುಳಾ (28) ಎಂದು ಗುರುತಿಸಲಾಗಿದೆ. 5 ವರ್ಷಗಳ ಹಿಂದೆ ಜಾವಗಲ್ ಹೋಬಳಿಯ ಹರಳಹಳ್ಳಿ ಗ್ರಾಮದ ಭಾರತಿ ಎಂಬುವರ ಮಗಳಾದ ಮಂಜುಳಾ ಎಂಬುವರನ್ನು ಗಂಡಸಿ ಹೋಬಳಿಯ ರಂಗಾಪುರ ಗ್ರಾಮದ ಶ್ರೀಧರ್ ಎಂಬುವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಮದುವೆಯಾದ ಬಳಿಕ 2-3 ವರ್ಷಗಳ ಕಾಲ ದಂಪತಿ ಚೆನ್ನಾಗಿದ್ರು. ಆದರೆ ಲಾಕ್​ಡೌನ್ ಸಂದರ್ಭದಲ್ಲಿ ಮಂಜುಳಾ ಬೇರೆಯವರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡ ಹಿನ್ನೆಲೆಯಲ್ಲಿ ಮನನೊಂದ ಗಂಡ, ಹೆಂಡತಿಗೆ ಸಾಕಷ್ಟು ಬುದ್ಧಿವಾದ ಹೇಳಿದ್ದಾನೆ. ಆದರೆ ಗಂಡನ ಮಾತು ಕೇಳದ ಹೆಂಡತಿ ತನ್ನ ಅಕ್ರಮ ಸಂಬಂಧವನ್ನು ಮುಂದುವರಿಸಿಕೊಂಡಿದ್ದಾಳೆ ಎನ್ನಲಾಗಿದೆ.

hassan
ಆರೋಪಿ ಶ್ರೀಧರ್

ಆದರೆ ಅದಕ್ಕೆ ಹೆಂಡತಿಯ ತಾಯಿಯೂ ಕೂಡ ಸಾಥ್ ನೀಡಿದ್ದಳು ಎಂಬುದು ಶ್ರೀಧರ್​ಗೆ ಗೊತ್ತಾಗಿದೆ. ಹೀಗಾಗಿ ನಿನ್ನೆ ರಾತ್ರಿ ತನ್ನ ಹೆಂಡತಿ ಮತ್ತು ಅತ್ತೆಯನ್ನು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದಾನೆ.

ಇನ್ನು ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸಗೌಡ ಮತ್ತು ನಂದಿನಿ ನೇತೃತ್ವದ ತಂಡ ಆಗಮಿಸಿ, ಸ್ಥಳದಿಂದ ಕೆಲವು ಮಾಹಿತಿಗಳನ್ನು ಕಲೆಹಾಕಿದೆ. ಕೊಲೆಯಾದ ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದ್ದು, ಆರೋಪಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಈ ಸಂಬಂಧ ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ನಿನ್ನೆ ದೇಶದಲ್ಲಿ ಅತೀ ಕಡಿಮೆ ಸೋಂಕಿತರು ಪತ್ತೆ: 2,726 ಜನರು ಕೋವಿಡ್​ಗೆ ಬಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.