ಬಳ್ಳಾರಿ: ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ, ಪತಿಯೊಬ್ಬ ಪತ್ನಿಯನ್ನು ಕುಡುಗೋಲಿಂದ ಕೊಚ್ಚಿ ಕೊಲೆಗೈದ ಹೃದಯ ವಿದ್ರಾವಕ ಘಟನೆ ಗಣಿನಾಡು ಬಳ್ಳಾರಿ ತಾಲೂಕಿನ ಇಬ್ರಾಂಹಿಪುರ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ.
![husband murdered his wife in bellary](https://etvbharatimages.akamaized.net/etvbharat/prod-images/5200910_thumbn.jpg)
ನೀಲಮ್ಮ(20) ಕೊಲೆಯಾದ ಮಹಿಳೆ. ಚಂದ್ರಶೇಖರ (26) ಪತ್ನಿಯನ್ನ ಕೊಲೆಗೈದ ಆರೋಪಿ. ಹೆಂಡತಿ ಹೊಲಕ್ಕೆ ಹೋಗು ಎಂದಿದ್ದಕ್ಕೆ ಕುಪಿತಗೊಂಡ ಚಂದ್ರಶೇಖರ, ಮನೆಯಲ್ಲಿದ್ದ ಕುಡುಗೋಲಿಂದ ನೀಲಮ್ಮಳ ಕುತ್ತಿಗೆಯನ್ನ ಕೊಚ್ಚಿ ಕೊಲೆ ಮಾಡಿದ್ದಾನೆ.
ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆ ಸಿಪಿಐ ಶ್ರೀನಿವಾಸ ಮನ್ನೆ ಹಾಗೂ ಪಿಎಸ್ಐ ವೈ.ಎಸ್.ಹನುಮಂತಪ್ಪ ಭೇಟಿ ನೀಡಿ, ಆರೋಪಿಯನ್ನ ಬಂಧಿಸಿದ್ದಾರೆ. ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.