ಹಾಸನ : ಕೌಟುಂಬಿಕ ಕಲಹದಿಂದ ಪತ್ನಿಯ ಮೇಲೆ ಅನುಮಾನಗೊಂಡು ಪತಿ ಹತ್ಯೆ ಮಾಡಿದ ಘಟನೆ ಹಾಸನದ ಎಸ್.ಎಂ.ಕೃಷ್ಣನಗರ ಬಡಾವಣೆ ಕಾಲೊನಿಯಲ್ಲಿ ನಡೆದಿದೆ.
ನಯನಾ (32) ಕೊಲೆಯಾದ ಮಹಿಳೆ. 16 ವರ್ಷಗಳ ಹಿಂದೆ ಲೋಹಿತ್ ಕುಮಾರ್ನೊಂದಿಗೆ ವಿವಾಹವಾಗಿತ್ತು. ನಯನಾಳನ್ನ ಪತಿ ಲೋಹಿತ್ ಕುತ್ತಿಗೆಗೆ ವೇಲ್ನಿಂದ ಬಿಗಿದು ಕೊಲೆ ಮಾಡಿದ್ದಾನೆ.
ಚಿತ್ರದುರ್ಗ ಮೂಲದ ಲೋಹಿತ್ ವಿವಾಹವಾದ ನಂತರ ಹಾಸನದಲ್ಲೇ ವಾಸವಾಗಿದ್ದು, ಯಾರೂ ಇಲ್ಲದ ಸಮಯದಲ್ಲಿ ವೇಲ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಹಾಸನದ ಎಸ್.ಎಂ.ಕೃಷ್ಣನಗರ ಬಡಾವಣೆಯ ಕಾಲೊನಿಯಲ್ಲಿ ಪೊಲೀಸರು ಸ್ಥಳ ಪರಿಶೀಲಿಸಿದ್ದು, ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.