ETV Bharat / state

ಬ್ಯೂಟಿ ಪಾರ್ಲರ್​​ ಒಡತಿಯ ಪತಿಗೆ ಕೊರೊನಾ ದೃಢ.. ಪಾರ್ಲರ್​​​ಗೆ ಭೇಟಿ ನೀಡಿದವರಿಗೆ ಆತಂಕ - Sakleshpur Taluk

ಪಟ್ಟಣದ ಮಲ್ಲಿಕಾರ್ಜುನ ನಗರ ಬಡಾವಣೆಯ ವ್ಯಕ್ತಿಗೆ ಕೊರೊನಾ ಸೋಂಕು ದೃಢವಾಗಿದೆ. ಈತನ ಪತ್ನಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದು, ಇಬ್ಬರೂ ಒಟ್ಟಿಗೆ ತೆರಳಿ ಪರೀಕ್ಷೆಗಾಗಿ ಗಂಟಲು ದ್ರವ ನೀಡಿದ್ದರು. ಇದೀಗ ಪತಿಯ ವರದಿ ಪಾಸಿಟಿವ್​ ಬಂದಿದೆ.

Husband Infected from coronavirus who's wife runs beauty parlour in city
ಬ್ಯೂಟಿ ಪಾರ್ಲರ್​​ ಒಡತಿಯ ಪತಿಗೆ ಕೊರೊನಾ ದೃಢ...ಪಾರ್ಲರ್​​​ಗೆ ಭೇಟಿ ನೀಡಿದವರಿಗೆ ಆತಂಕ
author img

By

Published : Jul 6, 2020, 8:50 PM IST

ಸಕಲೇಶಪುರ (ಹಾಸನ): ಪಟ್ಟಣದಲ್ಲಿ ಮತ್ತೊಂದು ಕೊರೊನಾ ಪ್ರಕರಣ ಕಂಡುಬಂದಿದ್ದು, ಇದರಿಂದಾಗಿ ಪಟ್ಟಣದ ಜನ ಆತಂಕಕ್ಕೆ ಒಳಗಾಗಿದ್ದಾರೆ.

ಪಟ್ಟಣದಲ್ಲಿ ಬ್ಯೂಟಿಪಾರ್ಲರ್ ಇಟ್ಟುಕೊಂಡಿರುವ ಮಹಿಳೆಯೋರ್ವರ ಪತಿಗೆ ಸೋಂಕು ದೃಢಪಟ್ಟಿದೆ. 58 ವರ್ಷದ ಪತಿಗೆ ಕೊರೊನಾ ದೃಢವಾಗಿದ್ದು, ಪತ್ನಿಯ ವರದಿ ನೆಗಟಿವ್ ಬಂದಿದೆ. ಪತಿ-ಪತ್ನಿ ಇಬ್ಬರೂ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ತೆರಳಿ ಪರೀಕ್ಷೆಗಾಗಿ ಗಂಟಲು ದ್ರವ ಮಾದರಿ ನೀಡಿದ್ದರು. ಇದೀಗ ವರದಿ ಬಂದಿದ್ದು ಪತಿಗೆ ಕೊರೊನಾ ದೃಢಪಟ್ಟಿದೆ.

ಬ್ಯೂಟಿ ಪಾರ್ಲರ್​​ ಒಡತಿಯ ಪತಿಗೆ ಕೊರೊನಾ ದೃಢ...ಪಾರ್ಲರ್​​​ಗೆ ಭೇಟಿ ನೀಡಿದವರಿಗೆ ಆತಂಕ

ಈ ಹಿನ್ನೆಲೆಯಲ್ಲಿ ಪಟ್ಟಣದ ಮಲ್ಲಿಕಾರ್ಜುನ ನಗರ ಬಡಾವಣೆಯಲ್ಲಿರುವ ಸೋಂಕಿತನ ಮನೆಯನ್ನು ಸೀಲ್​​ಡೌನ್ ಮಾಡಲಾಗಿದೆ. ಕಳೆದ 2 ದಿನಗಳ ಹಿಂದೆಯಷ್ಟೆ ಇದೇ ಬಡಾವಣೆಯ ವರ್ತಕರೊಬ್ಬರ ಪತ್ನಿಗೆ ಕೊರೊನಾ ಪಾಸಿಟಿವ್ ಕಂಡುಬಂದ ಹಿನ್ನೆಲೆ ಆ ಮನೆಯನ್ನು ಸೀಲ್​​​ಡೌನ್ ಮಾಡಲಾಗಿತ್ತು.

ಇದೀಗ ಮತ್ತೊಮ್ಮೆ ಇದೇ ಬಡಾವಣೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಬಡಾವಣೆಯ ನಿವಾಸಿಗಳನ್ನು ಆತಂಕಕ್ಕೆ ದೂಡಿದೆ. ಸೋಂಕಿತನ ಪತ್ನಿಗೆ ನೆಗೆಟಿವ್ ಕಂಡುಬಂದಿದ್ದು ಮತ್ತೊಮ್ಮೆ ಆಕೆಯ ಪರೀಕ್ಷೆ ಮಾಡಲಾಗುತ್ತಿದೆ. ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿಯನ್ನು ಪರಿಶೀಲನೆ ಮಾಡಲಾಗುತ್ತಿದೆ. ಅಲ್ಲದೆ ಮನೆಯವರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ಇನ್ನೂ ಸೋಂಕಿತನ ಪತ್ನಿಗೆ ನೆಗೆಟಿವ್ ಬಂದಿದ್ದರೂ ಸಹ ಆಕೆಯ ಬ್ಯೂಟಿಪಾರ್ಲರ್​​ಗೆ ಭೇಟಿ ನೀಡಿದ್ದ ಮಹಿಳೆಯರಲ್ಲಿ ಆತಂಕ ಮನೆ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.