ಹಾಸನ: ಶಾಸಕ ಪ್ರೀತಂ ಗೌಡ ಮನೆ ಮೇಲೆ ನಡೆದ ಕಲ್ಲು ತೂರಾಟ ಹಿನ್ನೆಲೆಯಲ್ಲಿ ಅವರ ಮನೆಗೆ ಮಾಜಿ ಸಚಿವ ಎ.ಮಂಜು ಹಾಗೂ ಬಾಗೂರು ಮಂಜೇಗೌಡ ಭೇಟಿ ನೀಡಿದ್ದರು.
ಆದರೆ ಎ.ಮಂಜು ಹಾಗೂ ಬಾಗೂರು ಮಂಜೇಗೌಡ ಭೇಟಿ ನೀಡಿದ್ದ ವೇಳೆ ಪ್ರೀತಂ ಗೌಡ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಶಾಸಕರ ತಾಯಿ ಜೊತೆ ಕೆಲಕಾಲ ಮಾತನಾಡಿದರು. ಇನ್ನು ಬಿಜೆಪಿ ಶಾಸಕರ ಮನೆಗೆ ಕಾಂಗ್ರೆಸ್ ಮುಖಂಡರು ದಿಢೀರ್ ಭೇಟಿ ನೀಡಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ.
![undefined](https://s3.amazonaws.com/saranyu-test/etv-bharath-assests/images/ad.png)
ಈ ಹಿಂದೆ ಎ.ಮಂಜು ಬಿಜೆಪಿ ಸೇರುವ ಗುಸು ಗುಸು ಜಿಲ್ಲೆಯಲ್ಲಿ ಹರಿದಾಡಿತ್ತು. ಇದೀಗ ಅವರ ಭೇಟಿಯು ಇನ್ನಷ್ಟು ಊಹಾಪೋಹಗಳಿಗೆ ಕಾರಣವಾಗಿದೆ. ಅಲ್ಲದೆ ಕೆಲ ದಿನಗಳಿಂದ ಮಂಜು ಅವರು ಪದೇ ಪದೇ ಜೆಡಿಎಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇನ್ನೊಂದೆಡೆ ಇದೊಂದು ಸಹಜ ಭೇಟಿ ಎಂಬ ಮಾತೂ ಕೂಡ ಕೇಳಿಬಂದಿದೆ.