ETV Bharat / state

ಹಿಮ್ಸ್​ ಆಸ್ಪತ್ರೆಯಲ್ಲಿ ಮಾದರಿ ಮಳೆ ನೀರು ಕೊಯ್ಲು.. ಇಲ್ಲಿದೆ 10 ಲಕ್ಷ ಲೀ. ಟ್ಯಾಂಕ್​ - undefined

ಜೀವಜಲ ಅಮೂಲ್ಯವಾದದ್ದು. ಹನಿ ನೀರನ್ನು ಸಂರಕ್ಷಿಸೋಣ ಎಂಬ ನಿಟ್ಟಿನಲ್ಲಿ ಹಾಸನದ ಹಿಮ್ಸ್ ಸಂಸ್ಥೆ, ಮಳೆನೀರು ಕೊಯ್ಲು ಮೂಲಕ ಲಕ್ಷಾಂತರ ಲೀಟರ್ ನೀರಿನ ಸಂರಕ್ಷಣೆ, ಮರುಬಳಕೆ ಮಾಡುವ ಮೂಲಕ ಇತರರಿಗೂ ಮಾದರಿಯಾಗಿದೆ.

ಮಳೆ ನೀರಿಗೆ ಮಹತ್ವದ ಹಿಮ್ಸ್
author img

By

Published : May 6, 2019, 9:30 PM IST

ಹಾಸನ: ಹನಿ ನೀರಿಗೂ ಹಾಹಾಕಾರ ಎದುರಾಗಿರುವ ಪರಿಸ್ಥಿತಿಯಲ್ಲಿ ಬಿದ್ದ ಮಳೆ ನೀರನ್ನು ವೈಜ್ಞಾನಿಕ ರೀತಿಯಲ್ಲಿ ಮಳೆನೀರು ಸಂಗ್ರಹ ವಿಧಾನ ಅಳವಡಿಸಿಕೊಂಡು ಇತರೆ ಸಂಸ್ಥೆಗಳಿಗೆ ಮಾದರಿಯಾಗಿದೆ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ- ಹಿಮ್ಸ್.

ಬೇಸಿಗೆ ಬಂತೆಂದರೆ ಸಾಕು, ನೀರಿನ ಹಾಹಾಕಾರ ಎಲ್ಲೆಡೆ ಕೇಳಿ ಬರುವಂತೆ ಜಿಲ್ಲಾಸ್ಪತ್ರೆಯಲ್ಲೂ ಕಂಡು ಬರುತ್ತಿತ್ತು. ನಿತ್ಯ ಸಾವಿರಾರು ರೋಗಿಗಳು ಬರುವ ಆಸ್ಪತ್ರೆಯಲ್ಲಿ ನೀರಿಲ್ಲ ಎಂದರೆ ಸಮಸ್ಯೆ ಏನು ಎಂದು ಆಲಿಸುವುದು ಇರಲಿ, ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಎಂದು ಆಕ್ರೋಶ ವ್ಯಕ್ತಪಡಿಸಿದ ದಿನಗಳೂ ಇವೆ. ಎಷ್ಟೇ ಕೊಳವೆಬಾವಿ ಕೊರೆಸಿದರೂ ಅಂತರ್ಜಲ ಸಮಸ್ಯೆಯಿಂದ ಅಷ್ಟೇ ಬೇಗ ಬತ್ತಿಹೋಗುತ್ತಿತ್ತು. ಟ್ಯಾಂಕರ್ ಮೂಲಕ ನೀರು ತರಿಸಿ ಹಾಕಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಯಿತು. ಏನೆಲ್ಲಾ ಕಸರತ್ತು ನಡೆಸಿದರೂ, ಮುಂಜಾನೆಯೇ ರೋಗಿಗಳಿಂದ ಮುಖ ತೊಳೆಯಲು, ದೈನಂದಿನ ಕ್ರಿಯೆಗೆ ನೀರಿಲ್ಲ ಎಂಬ ಕೂಗು ಕೇಳಿಬರತೊಡಗಿತ್ತು.

ಈ ಎಲ್ಲ ಸಮಸ್ಯೆಗೆ ಮುಕ್ತಿ ದೊರಕಿಸಬೇಕು ಎಂಬ ದೃಢ ನಿರ್ಧಾರ ಮಾಡಿದ್ದರ ಫಲವಾಗಿಯೇ ಮಳೆನೀರು ಕೊಯ್ಲು ಯೋಜನೆ ಸದ್ಭಳಕೆ ಮಾಡಿಕೊಂಡ ಪರಿಣಾಮವಾಗಿ ಪ್ರಸ್ತುತ ನಿಟ್ಟುಸಿರು ಬಿಡುವಂತಾಗಿದೆ ಎನ್ನುತ್ತಾರೆ ಹಿಮ್ಸ್ ನಿರ್ದೇಶಕ ಡಾ.ರವಿಕುಮಾರ್.

ಮಳೆ ನೀರಿಗೆ ಮಹತ್ವದ ಹಿಮ್ಸ್

ವೈದ್ಯ ಕಾಲೇಜು, ಆಸ್ಪತ್ರೆ ಹಾಗೂ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ನಿತ್ಯ 4ರಿಂದ ಐದು ಲಕ್ಷ ಲೀಟರ್ ನೀರಿನ ಅಗತ್ಯವಿದ್ದು, 2017 ರಿಂದ ಈವರೆಗೆ ಲಕ್ಷಾಂತರ ಲೀಟರ್ ಮಳೆನೀರನ್ನು ಸಂರಕ್ಷಿಸಿ, ಶೌಚಾಲಯ, ಉದ್ಯಾನವನಕ್ಕೆ ಬಳಕೆ ಮಾಡಲಾಗುತ್ತಿದೆ. ಮಳೆನೀರು ಕೊಯ್ಲಿನಿಂದ ಅಂತರ್ಜಲಮಟ್ಟ ವೃದ್ಧಿಸಿ, ಕೊಳವೆಬಾವಿ ನೀರು ಹಾಗೂ ನಗರಸಭೆಯಿಂದ ಸರಬರಾಜಾಗುವ ನೀರು, ಕುಡಿಯಲು ಹಾಗೂ ಮತ್ತಿತರ ಅಗತ್ಯತೆಗೆ ಬಳಸಲಾಗುತ್ತಿದೆ.

10 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಾಣ...

10 ಲಕ್ಷ ಲೀಟರ್ ಸಾಮರ್ಥ್ಯದ ನೀರು ಸಂಗ್ರಹ ಟ್ಯಾಂಕ್​ ಅನ್ನು ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ ನಿರ್ಮಿಸಲಾಗಿದ್ದು,19.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ 10 ಲಕ್ಷ ಲೀಟರ್ ನೀರನ್ನು 3 ತಿಂಗಳು ಉಪಯೋಗಿಸಬಹುದು‌. ಸಂಸ್ಥೆಯ ಆವರಣದಲ್ಲಿ ಮಳೆ ನೀರು ಸಂಗ್ರಹದ ಜೊತೆಗೆ ಎಸ್.ಟಿ. ಪಿ ಪ್ಲಾಂಟ್ ಪ್ರಾರಂಭಿಸಿ ಮೂರು ವರ್ಷಗಳಿಂದ ಶೌಚಾಲಯದ ನೀರು ಪೋಲಾಗದಂತೆ ಮರುಬಳಕೆ ಮಾಡಿ ಉದ್ಯಾನವನಕ್ಕೆ ಬಳಸಲಾಗುತ್ತಿದೆ. ಕಾಲೇಜು, ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಇಕೋ ಕ್ಲಬ್ ಎಂಬ ಸಂಘವನ್ನು ಕಟ್ಟಿಕೊಂಡು, ಅದಕ್ಕೆ ಅವರೇ ಹಣ ಸಂಗ್ರಹಿಸಿ ಸಂಘದ ವತಿಯಿಂದ ಉದ್ಯಾನವನ ನಿರ್ಮಾಣ ಮಾಡಿ ಅದನ್ನು ಅವರೇ ಅಭಿವೃದ್ಧಿಪಡಿಸುತ್ತಿದ್ದಾರೆ.

ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ. ಹಿಂದೆಲ್ಲಾ ನೀರಿನ ಸಮಸ್ಯೆ ಸೃಷ್ಟಿಯಾಗುತ್ತಿತ್ತು. ಈ ಸಮಸ್ಯೆ ನಿವಾರಣೆಗೆ ಮಳೆನೀರು ಕೊಯ್ಲು ವರದಾನವಾಗಿದ್ದು, ಸರಕಾರ ಹಾಗೂ ಜಿಲ್ಲಾಡಳಿತದ ಸಹಕಾರದಿಂದ ನೀರಿನ ಸಮಸ್ಯೆ ತಪ್ಪಿದಂತಾಗಿದೆ. ಹತ್ತು ಲಕ್ಷ ಲೀಟರ್ ಸಂಗ್ರಹ ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಿದ್ದು, ಹನಿನೀರು ವ್ಯರ್ಥ ಮಾಡದಂತೆ ಸದ್ಭಳಕೆ ಮಾಡಿಕೊಳ್ಳಲಾಗುತ್ತಿದೆ.

Intro:ಮಳೆ ನೀರಿಗೆ ಮಹತ್ವದ ನೀಡಿದ‌ ಹಾಸನದ ಹಿಮ್ಸ್ ಸಂಸ್ಥೆ‌

ಹಾಸನ: ಹನಿ ನೀರಿಗೂ ಹಾಹಾಕಾರ ಎದುರಾಗಿರುವ ಪರಿಸ್ಥಿತಿಯಲ್ಲಿ ಬಿದ್ದ ಮಳೆ ನೀರನ್ನು ವೈಜ್ಞಾನಿಕ ರೀತಿಯಲ್ಲಿ ಮಳೆನೀರು ಸಂಗ್ರಹ ವಿಧಾನ ಅಳವಡಿಸಿಕೊಂಡು ಇತರೆ ಸಂಸ್ಥೆಗಳಿಗೂ ಮಾದರಿಯಾಗಿದೆ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ(ಹಿಮ್ಸ್).
ಹೌದು.. ಜೀವಜಲ ಅಮೂಲ್ಯವಾದದ್ದು.ಹನಿ ನೀರನ್ನು ಸಂರಕ್ಷಿಸೋಣ ಎಂಬ ನಿಟ್ಟಿನಲ್ಲಿ ನಗರದ ಹಿಮ್ಸ್ ಮಳೆನೀರು ಕೊಯ್ಲು ಮೂಲಕ ಲಕ್ಷಾಂತರ ಲೀಟರ್ ನೀರಿನ ಸಂರಕ್ಷಣೆ, ಮರುಬಳಕೆ ಮಾಡುವ ಮೂಲಕ ಇತರರಿಗೂ ಮಾದರಿಯಾಗಿದೆ.
ಬೇಸಿಗೆ ಬಂತೆಂದರೆ ಸಾಕು ನೀರಿನಹಾಹಾಕಾರ ಎಲ್ಲೆಡೆ ಕೇಳಿಬರುವಂತೆ ಜಿಲ್ಲಾಸ್ಪತ್ರೆಯಲ್ಲೂ ಕಂಡು ಬರುತ್ತಿತ್ತು.ನಿತ್ಯ ಸಾವಿರಾರು ರೋಗಿಗಳು ಬರುವ ಆಸ್ಪತ್ರೆಯಲ್ಲಿ ನೀರಿಲ್ಲ ಎಂದರೆ ಸಮಸ್ಯೆ ಏನು ಎಂದು ಆಲಿಸುವುದು ಇರಲಿ, ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಎಂದು ಆಕ್ರೋಶ ವ್ಯಕ್ತಪಡಿಸಿದ ದಿನಗಳು ಇವೆ. ಎಷ್ಟೇ ಕೊಳವೆಬಾವಿ ಕೊರೆಸಿದರೂ ಅಂತರ್ಜಲ ಸಮಸ್ಯೆಯಿಂದ ಅಷ್ಟೇಬೇಗ ಬತ್ತಿಹೋಗುತ್ತಿತ್ತು. ಟ್ಯಾಂಕರ್ ಮೂಲಕ ನೀರು ತರಿಸಿ ಹಾಕಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಯಿತು. ಏನೆಲ್ಲ ಕಸರತ್ತು ನಡೆಸಿದರೂ, ಮುಂಜಾನೆಯೇ ರೋಗಿಗಳಿಂದ ಮುಖ ತೊಳೆಯಲು, ದೈನಂದಿನ ಕ್ರಿಯೆಗೆ ನೀರಿಲ್ಲ ಎಂಬ ಕೂಗು ಕೇಳಿಬರತೊಡಗಿತ್ತು. ಈ ಎಲ್ಲ ಸಮಸ್ಯೆಗೆ ಮುಕ್ತಿ ದೊರಕಿಸಬೇಕು ಎಂಬ ದೃಢ ನಿರ್ಧಾರ ಮಾಡಿದರ ಫಲವಾಗಿಯೇ ಮಳೆನೀರು ಕೊಯ್ಲು ಯೋಜನೆ ಸದ್ಭಳಕೆ ಮಾಡಿಕೊಂಡ ಪರಿಣಾಮವಾಗಿ ಪ್ರಸ್ತುತ ನಿಟ್ಟುಸಿರು ಬಿಡುವಂತಾಗಿದೆ ಎನ್ನುತ್ತಾರೆ ಹಿಮ್ಸ್ ನಿರ್ದೇಶಕ ಡಾ.ರವಿಕುಮಾರ್.
ವೈದ್ಯ ಕಾಲೇಜು, ಆಸ್ಪತ್ರೆ ಹಾಗೂ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ನಿತ್ಯ ೪ರಿಂದ ಐದು ಲಕ್ಷ ಲೀಟರ್ ನೀರಿನ ಅಗತ್ಯವಿದ್ದು,೨೦೧೭ ರಿಂದ ಈವರೆಗೆ ಲಕ್ಷಾಂತರ ಲೀಟರ್ ಮಳೆನೀರನ್ನು ಸಂರಕ್ಷಿಸಿ, ಶೌಚಾಲಯ, ಉದ್ಯಾನವನಕ್ಕೆ ಬಳಕೆ ಮಾಡಲಾಗುತ್ತಿದೆ. ಮಳೆನೀರು ಕೊಯ್ದಿನಿಂದ ಅಂತರ್ಜಲಮಟ್ಟ ವೃದ್ಧಿಸಿ ಕೊಳವೆಬಾವಿ ನೀರು ಹಾಗೂ ನಗರಸಭೆಯಿಂದ ಸರಬರಾಜು ಆಗುವ ನೀರು ಕುಡಿಯಲು ಮತ್ತಿತರ ಅಗತ್ಯತೆಗೆ ಬಳಸಲಾಗುತ್ತಿದೆ.
೧೦ ಲಕ್ಷ ಲೀಟರ್ ಸಾಮರ್ಥ್ಯ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ ನಿರ್ಮಿಸಲಾಗಿದ್ದು ೧೯.೫೦ ಲಕ್ಷ ರೂ. ವೆಚ್ಚದಲ್ಲಿ ನೀರು ಸಂಗ್ರಹ ಟ್ಯಾಂಕ್ ನಿರ್ಮಿಸಲಾಗಿದ್ದು, ೧೦ ಲಕ್ಷ ಲೀಟರ್ ಮಳೆ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ.೧೦ ಲಕ್ಷ ಲೀಟರ್ ನೀರನ್ನು ೩ ತಿಂಗಳು ಉಪಯೋಗಿಸಬಹುದು‌. ಸಂಸ್ಥೆಯ ಆವರಣದಲ್ಲಿ ಮಳೆ ನೀರು ಸಂಗ್ರಹದ ಜೊತೆಗೆ ಎಸ್.ಟಿ. ಪಿ ಪ್ಲಾಂಟ್ ಪ್ರಾರಂಭಿಸಿ ಮೂರು ವರ್ಷಗಳಿಂದ ಶೌಚಾಲಯದ ನೀರು ಪೋಲಾಗದಂತೆ ಮರುಬಳಕೆ ಮಾಡಿ ಉದ್ಯಾನವನಕ್ಕೆ ಬಳಸಲಾಗುತ್ತಿದೆ. ಕಾಲೇಜು, ಆಸ್ಪತ್ರೆ ವೈದ್ಯಕೀಯ ಹಾಗೂ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿವರ್ಗದವರು ಇಕೋ ಕ್ಲಬ್ ಎಂಬ ಸಂಘವನ್ನು ಕಟ್ಟಿಕೊಂಡು, ಅದಕ್ಕೆ ಅವರೇ ಹಣ ಸಂಗ್ರಹಿಸಿ ಸಂಘದ ವತಿಯಿಂದ ಉದ್ಯಾನವನ ನಿರ್ಮಾಣವಾಗಿದ್ದು ಅದನ್ನು ಅವರೇ ಅಭಿವೃದ್ದಿ ಪಡಿಸುತ್ತಿದ್ದಾರೆ.
ಸಂಸ್ಥೆಗೆ ಸೇರಿದ ೩೪ ಎಕರೆ ವಿಸ್ತೀರ್ಣದ ಆಸ್ಪತ್ರೆ ಜಾಗದಲ್ಲಿ ಸ್ವತಃ ಅವರೇ ಹಣ ಸಂಗ್ರಹಿಸಿ ಉದ್ಯಾನವನ ನಿರ್ಮಿಸಿದ್ದಾರೆ.ಅಲ್ಲಿಗೂ ನೀರು ಸದ್ಭಳಕೆ ಮಾಡಿಕೊಳ್ಳಲಾಗುತ್ತಿದೆ. ನಿತ್ಯ ನಾಲ್ಕರಿಂದ ಐದು ಲಕ್ಷ ಲೀಟರ್ ನೀರನ್ನು ಒದಗಿಸಲಾಗುತ್ತಿದ್ದು, ಅಷ್ಟರ ಮಟ್ಟಿಗೆ ನೀರಿನ ಸಮಸ್ಯೆ ಬೇಸಿಗೆಯಲ್ಲೂ ತಪ್ಪಿದೆ ಎಂಬುದೇ ನೆಮ್ಮದಿಯ ಸಂಗತಿ ಎನ್ನುತ್ತಾರೆ.
ವೈದ್ಯಕೀಯ ಕಾಲೇಜು, ಆಸ್ಪತ್ರೆಯಲ್ಲಿ ಹಿಂದೆಲ್ಲ ನೀರಿನ ಸಮಸ್ಯೆ ಎಂಬುದಕ್ಕಿಂತ ಹಾಹಾಕಾರ ಸೃಷ್ಟಿಯಾಗುತ್ತಿತ್ತು. ಈ ಸಮಸ್ಯೆ ನಿವಾರಣೆಗೆ ಮಳೆನೀರು ಕೊಯ್ಲು ವರದಾನವಾಗಿದ್ದು, ಸರಕಾರ, ಜಿಲ್ಲಾಡಳಿತದ ಸಹಕಾರದಿಂದ ನೀರಿನ ಸಮಸ್ಯೆ ತಪ್ಪಿದಂತಾಗಿದೆ. ಹತ್ತು ಲಕ್ಷ ಲೀಟರ್ ಸಂಗ್ರಹ ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಿದ್ದು,ಹನಿನೀರು ವ್ಯರ್ಥ ಮಾಡದಂತೆ ಸದ್ಭಳಕೆ ಮಾಡಿಕೊಳ್ಳಲಾಗುತ್ತಿದೆ.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಹಾಸನ‌. Body:0Conclusion:0

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.