ETV Bharat / state

ಇಲ್ಲಿ ರೋಗಿಗಳಿಗೆ ಸಂಗೀತ ಥೆರಪಿ ಚಿಕಿತ್ಸೆ.. ಯಾವುದು ಈ ಹೈಟೆಕ್ ಸರ್ಕಾರಿ ಆಸ್ಪತ್ರೆ?

ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬೇಸರವಾಗದಂತೆ ಅಲ್ಲಿನ ಸಿಬ್ಬಂದಿ ಸ್ಪೀಕರ್ ಅಳವಡಿಸಿ ಹಾಡುಗಳನ್ನು ಪ್ಲೇ ಮಾಡಿ ರಂಜಿಸುತ್ತಾರೆ. ಆಸ್ಪತ್ರೆ ಸಿಬ್ಬಂದಿ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹೈಟೆಕ್ ಆಸ್ಪತ್ರೆ
ಹೈಟೆಕ್ ಆಸ್ಪತ್ರೆ
author img

By

Published : Jul 11, 2021, 7:57 AM IST

ಹಾಸನ: ಇತ್ತೀಚಿನ ದಿನಗಳಲ್ಲಿ ಕೋವಿಡ್​​ ಭೀತಿಗೊಳಗಾದವರಿಗೆ ವೈದ್ಯರು, ಸಿಬ್ಬಂದಿ ಡ್ಯಾನ್ಸ್ ಮಾಡಿ ರಂಜಿಸೋದು ನಿಮಗೆಲ್ಲ ಗೊತ್ತು. ಅದೇ ರೀತಿ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲೂ ರೋಗಿಗಳಿಗೆ ಬೇಸರವಾಗದಂತೆ ಸ್ಪೀಕರ್​ಗಳನ್ನು ಅಳವಡಿಸಿ ಹಾಡುಗಳನ್ನು ಪ್ಲೇ ಮಾಡಿ ರಂಜಿಸುತ್ತಾರೆ ಇಲ್ಲಿನ ಸಿಬ್ಬಂದಿ. ಈ ಸ್ಪೀಕರ್ ಅಳವಡಿಕೆಗೆ ಅಂದಾಜು 50 ಸಾವಿರ ರೂಪಾಯಿ ಖರ್ಚಾಗಿದೆ.

ಹಾಸನದ ಹಿಮ್ಸ್​ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಿಗುತ್ತೆ ಸಂಗೀತ ಥೆರಪಿ ಚಿಕಿತ್ಸೆ

ಸಾಮಾನ್ಯವಾಗಿ ಯಾವುದೇ ಗವರ್ನಮೆಂಟ್ ಆಸ್ಪತ್ರೆಗೆ ಹೋದ್ರೆ, ಸರಿಯಾದ ಸೌಕರ್ಯಗಳಿರಲ್ಲ ಅಂತಾ ರೋಗಿಗಳು ಮತ್ತು ಅವರ ಸಂಬಂಧಿಕರು ಆರೋಪಿಸ್ತಾರೆ. ಆದ್ರೆ, ಈ ಆಸ್ಪತ್ರೆ ಉತ್ತಮ ಸೌಲಭ್ಯಗಳನ್ನು ಹೊಂದಿದೆ. ಇಲ್ಲಿಗೆ ಬರುವ ರೋಗಿಗಳಿಗೆ, ಕೆಲಸ ಮಾಡುವ ಸಿಬ್ಬಂದಿಗೆ ಈ ಆಸ್ಪತ್ರೆ ಮನೆಯಂತೆ ಭಾಸವಾಗುತ್ತದೆಯಂತೆ.

ಇಡೀ ರಾಜ್ಯದಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಇದು ಹೈಟೆಕ್​ ಆಸ್ಪತ್ರೆ ಎಂದು ಬಿರುದು ಪಡೆದಿದೆ. ಸ್ವಚ್ಛತೆ ವಿಷಯದಲ್ಲೂ ಈ ಆಸ್ಪತ್ರೆ ನಂಬರ್ ಒನ್ ಆಗಿದೆ. ರೋಗಿಗಳಿಗೆ ಮ್ಯೂಸಿಕಲ್ ಥೆರಪಿ ಮೂಲಕ ಚಿಕಿತ್ಸೆ ನೀಡುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರಶಂಸೆ ವ್ಯಕ್ತವಾಗ್ತಿದೆ.

ಇದನ್ನೂ ಓದಿ:KRS ಡ್ಯಾಂ ಸುರಕ್ಷಿತವಾಗಿದೆ, ಈ ಹಿಂದೆಯೇ ರಿಪೇರಿ ಕೆಲಸ ಮಾಡಲಾಗಿದೆ: ಆರ್ .ಅಶೋಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.