ETV Bharat / state

ತಮ್ಮ ಜಮೀನಿಗೆ ಓಡಾಡಲು ನುಗು ಅಭಯಾರಣ್ಯದ ದಾರಿ ಬಳಕೆಗೆ ಅನುಮತಿ ನೀಡಿ; ಸಚಿವ ಜಾರ್ಜ್​ ಪುತ್ರನಿಂದ ಹೈಕೋರ್ಟ್​ಗೆ​​ ಅರ್ಜಿ - MINISTER KJ GEORGE SON HIGH COURT

ಜಮೀನಿಗೆ ಪ್ರವೇಶಿಸಲು ನುಗು ಅಭಯಾರಣ್ಯದಲ್ಲಿ ಹಾದು ಹೋಗುವ ರಸ್ತೆ ಮಾರ್ಗವನ್ನು ಬಳಕೆ ಮಾಡದಂತೆ ನಿರ್ಬಂಧಿಸಿರುವ ಆದೇಶ ರದ್ದು ಮಾಡುವಂತೆ ಕೋರಲಾಗಿದೆ.

minister-kj-george-son-appeals-to-the-court-for-grant-permission-to-use-nugu-forest-route
ಹೈ ಕೋರ್ಟ್​ (ಸಾಂದರ್ಭಿಕ ಚಿತ್ರ)
author img

By ETV Bharat Karnataka Team

Published : Nov 15, 2024, 5:21 PM IST

ಬೆಂಗಳೂರು: ತಮ್ಮ ಖಾಸಗಿ ಜಮೀನಿಗೆ ಓಡಲಾಡಲು ನುಗು ಅಭಯಾರಣ್ಯದಲ್ಲಿ ರಸ್ತೆ ಮಾರ್ಗ ಬಳಕೆಗೆ ಅನುಮತಿ ನೀಡಬೇಕು ಎಂದು ಕೋರಿ ಇಂಧನ ಸಚಿವ ಕೆ.ಜೆ ಜಾರ್ಜ್ ಪುತ್ರ ರಾಣಾ ಜಾರ್ಜ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಮೈಸೂರು ಜಿಲ್ಲೆಯ ಎಚ್‌ಡಿ ಕೋಟೆ ತಾಲೂಕಿನ ಸರಗೂರು ಹೋಬಳಿಯ ಶಂಬುಗೌಡನಹಳ್ಳಿ ಮತ್ತು ಲಕ್ಕಸೋಗೆ ಗ್ರಾಮಗಳಲ್ಲಿ ರಾಣಾ ಜಾರ್ಜ್​ ಖಾಸಗಿ ಜಮೀನನ್ನು ಹೊಂದಿದ್ದಾರೆ. ಈ ಜಮೀನಿಗೆ ಪ್ರವೇಶಿಸಲು ನುಗು ಅಭಯಾರಣ್ಯದಲ್ಲಿ ಹಾದು ಹೋಗುವ ರಸ್ತೆ ಮಾರ್ಗವನ್ನು ಬಳಕೆ ಮಾಡದಂತೆ ನಿರ್ಬಂಧಿಸಿ 2024ರ ಮಾರ್ಚ್​ 5ರಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಆದೇಶವನ್ನು ರದ್ದು ಮಾಡಬೇಕು ಎಂದು ಕೋರಿ ಅವರು ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ನ್ಯಾಯಪೀಠ, ಈ ಕುರಿತಂತೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಯ ಪ್ರಧಾನ ಅರಣ್ಯಸಂರಕ್ಷಣಾಧಿಕಾರಿ ಹೆಡಿಯಾಲ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ನ್ಯಾಯಾಲಯವು ನೋಟಿಸ್ ಜಾರಿ ಮಾಡಿ, ವಿಚಾರಣೆ ನವೆಂಬರ್ 29ಕ್ಕೆ ಮುಂದೂಡಿತು.

ಅಭಯಾರಣ್ಯ ಸಮೀಪದಲ್ಲಿ ರಾಣಾ ಜಾರ್ಜ್​ ಖಾಸಗಿ ಆಸ್ತಿ: ನುಗು ಅಭಯಾರಣ್ಯದಲ್ಲಿ ಹಾದು ಹೋಗುವ ಶಂಬುಗೌಡನಹಳ್ಳಿ ಮತ್ತು ಲಕ್ಕಸೋಗೆಯಲ್ಲಿಯ ವಿವಿಧ ಸರ್ವೇ ಸಂಖ್ಯೆಗಳಲ್ಲಿ ರಾಣಾ ಜಾರ್ಜ್​ ಆಸ್ತಿ ಇದೆ. ಇದು ನುಗು ಅಭಯಾರಣ್ಯದ ವ್ಯಾಪ್ತಿಯಲ್ಲಿದೆ. ಹಾಲಿ ಪ್ರಕರಣದಲ್ಲಿ ರಾಣಾ ಜಾರ್ಜ್ ಅವರ ಜಮೀನು ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುತ್ತದೆ. ಈ ಜಮೀನಿಗೆ ತೆರಳಲು ಮಣ್ಣಿನ ರಸ್ತೆಯನ್ನೇ ಆಶ್ರಯಿಸಬೇಕಿದ್ದು, ಅದು ಅರಣ್ಯ ಇಲಾಖೆಯ ವಶದಲ್ಲಿದೆ. ರಾಣಾ ಅವರ ಜಮೀನಿಗೆ ತೆರಳಲು ಇನ್ನೊಂದು ರಸ್ತೆ ಇದ್ದು, ಮಾನ್ಸೂನ್ ಅಥವಾ ನುಗು ಜಲಾಶಯದಲ್ಲಿ ನೀರಿನ ಮಟ್ಟ 100 ಅಡಿಗಿಂತ ಹೆಚ್ಚಾದಾಗ ಅಲ್ಲಿ ಓಡಾಡಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆ ದಾರಿ ಬಳಸದೇ ವಿಧಿಯಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

ಅಭಯಾರಣ್ಯದ ವ್ಯಾಪ್ತಿಯಲ್ಲಿ ಭೂಮಿ ಹೊಂದಿರುವವರಿಗೆ ಓಡಾಡಲು ವನ್ಯಜೀವಿ ಸಂರಕ್ಷಣಾ ಕಾಯಿದೆ ಸೆಕ್ಷನ್ 27(1)(ಸಿ) ಅಡಿ ವಿನಾಯಿತಿ ಇದೆ. ಈಗ ಅರಣ್ಯ ಇಲಾಖೆ ಅರ್ಜಿದಾರರು ತಮ್ಮ ಜಮೀನಿಗೆ ಸಂಜೆ 6ರಿಂದ ಬೆಳಗಿನ ಜಾವ 6ಗಂಟೆಯವರೆಗೆ ಅರಣ್ಯ ಇಲಾಖೆಯ ರಸ್ತೆಯಲ್ಲಿ ಓಡಾಡಲು ಕಾನೂನು ಬಾಹಿರವಾಗಿ ನಿರ್ಬಂಧಿಸಲಾಗಿದೆ.

ರಾಣಾ ಅವರು, ಅರಣ್ಯ ಇಲಾಖೆಯ ರಸ್ತೆಯನ್ನು ಬಳಕೆ ಮಾಡುವುದಕ್ಕೆ ಸಾರ್ವಜನಿಕರು ಆಕ್ಷೇಪಿಸಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿರುವುದನ್ನು ಆಧರಿಸಿ ಹೆಡಿಯಾಲ ವಲಯದ ಸಹಾಯಕ ಅರಣ್ಯಾ ಸಂರಕ್ಷಣಾಧಿಕಾರಿ ಓಡಾಟಕ್ಕೆ ನಿರ್ಬಂಧಿಸಿದ್ದಾರೆ. ಇಡೀ ಪ್ರದೇಶ ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿರುವ ಅಂಶ ಗೊತ್ತಿದ್ದು, ಇಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆ ನಡೆಸುತ್ತಿಲ್ಲ. ಹೀಗಾಗಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ರದ್ದುಪಡಿಸಿ, ದಿನದ 24 ಗಂಟೆಯೂ ತಮ್ಮ ಜಮೀನಿಗೆ ಓಡಾಲು ಅನುಮತಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.

ಇದನ್ನೂ ಓದಿ: ಬಿಎಂಟಿಸಿ 928 ಬಸ್‌ಗಳಲ್ಲಿ ಧ್ವನಿ ಪ್ರಕಟಣೆ: ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.