ETV Bharat / state

ಹಾಸನದಲ್ಲಿ ಮಂಗಗಳ ಸಾವು ಪ್ರಕರಣ : ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಬೇಸರ

ಮಂಗಗಳಿಗೆ ವಿಷ ಹಾಕಿ ಕೊಂದ ಪ್ರಕರಣದಲ್ಲಿ ಅರಣ್ಯಾಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕಾನೂನು ಪ್ರಕ್ರಿಯೆ ನಡೆಸುವಲ್ಲಿ ವಿಫಲರಾಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಹೈಕೋರ್ಟ್ ಹೇಳಿದೆ.

high-court-on-monkeys-death-in-hassan
ಹಾಸನದಲ್ಲಿ ಮಂಗಗಳ ಸಾವು ಪ್ರಕರಣ : ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಬೇಸರ
author img

By

Published : Aug 18, 2021, 1:15 AM IST

ಬೆಂಗಳೂರು : ಹಾಸನದ ಚೌಡೇನಹಳ್ಳಿ ಬಳಿ ಮಂಗಗಳಿಗೆ ವಿಷ ಹಾಕಿ ಕೊಂದ ಪ್ರಕರಣದಲ್ಲಿ ತಪ್ಪಿಸ್ಥರ ವಿರುದ್ದ ಸೂಕ್ತ ಕ್ರಿಮಿನಲ್ ಕ್ರಮ ಜರುಗಿಸುವಲ್ಲಿ ಮೇಲ್ನೋಟಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಮಂಗಗಳ ಸಾವಿನ ಘಟನೆ ಬಗ್ಗೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಡಿಸಿಎಫ್ ಬಸವರಾಜ ಹಾಜರಾಗಿ, ಅಪರಾಧ ದಂಡ ಪ್ರಕ್ರಿಯಾ ಸಂಹಿತೆ 1976ರ ಸೆಕ್ಷನ್ 200ರ ಅಡಿ ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ತನಿಖೆ ಮುಂದುವರಿಸಲು ದೂರು ದಾಖಲಿಸಲಾಗಿತ್ತು. ಅವರ ಸಲಹೆ ಮೇರೆಗೆ ದೂರನ್ನು ಪರಿಷ್ಕರಿಸಲಾಗಿದೆ ಎಂದರು.

ಹೇಳಿಕೆಯಲ್ಲಿ ಗೊಂದಲ ಇದೆ ಎಂದ ಪೀಠ, ಡಿಸಿಎಫ್ ಸಲ್ಲಿಸಿರುವ ಮೆಮೋ ಸ್ಪಷ್ಟವಾಗಿಲ್ಲ. ಅರಣ್ಯಾಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕಾನೂನು ಪ್ರಕ್ರಿಯೆ ನಡೆಸುವಲ್ಲಿ ವಿಫಲರಾಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದಿತು. ಅಲ್ಲದೇ, ಕೋರ್ಟ್​​ ಜುಲೈ 30ರಂದು ಘಟನೆಯನ್ನು ಅಮಾನವೀಯ ಎಂದು ಹೇಳಿದ್ದರೂ ಸಹ ಅರಣ್ಯಾಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ.

ಲಘುವಾಗಿ ಪರಿಗಣಿಸಿರುವುದು ದುರದೃಷ್ಟಕರ. ಹೀಗಾಗಿ ಅರಣ್ಯ ಇಲಾಖೆ ಕಾರ್ಯದರ್ಶಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವ ಬಗ್ಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಆ.26ಕ್ಕೆ ಮುಂದೂಡಿತು.

ಇದನ್ನೂ ಓದಿ: ರಾಜಧಾನಿ ಗಲಭೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಎನ್​ಐಎಗೆ ಹೈಕೋರ್ಟ್ ನಿರ್ದೇಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.