ಹಾಸನ: ಆಗಸ್ಟ್ 3ರಿಂದ ಪ್ರಾರಂಭವಾದ ಆಶ್ಲೇಷ ಮಳೆಯಿಂದ ಕೇವಲ ನಾಲ್ಕು ದಿನಗಳಲ್ಲಿ ಹಾಸನ ಜಿಲ್ಲೆಯ ಜೀವನಾಡಿಯಾಗಿರುವ ಹೇಮಾವತಿ ಜಲಾಶಯ ಭರ್ತಿಯಾಗಿದೆ.
ಈಟಿವಿ ಭಾರತ ಪ್ರತಿನಿಧಿಯಿಂದ ಪ್ರತ್ಯಕ್ಷ ವರದಿ ಸಕಲೇಶಪುರ ಮತ್ತು ಮೂಡಿಗೆರೆ ಭಾಗದಲ್ಲಿ ಸುರಿದ ಮಳೆಯಿಂದ ಹೇಮಾವತಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಆಗಸ್ಟ್ 8 ಮತ್ತು 9 ರಂದು ಎರಡು ದಿನಗಳ ಕಾಲ 25 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಬಿಡುವ ಮೂಲಕ ಡ್ಯಾಂ ಸಮತೋಲವನ್ನು ಕಾಪಾಡಿಕೊಳ್ಳಲಾಗಿತ್ತು. ಈಗ ಒಳಹರಿವಿನ ಪ್ರಮಾಣ ಕಡಿಮೆಯಾಗಿದ್ದು ಸತತ ಐದು ದಿನಗಳಿಂದ ಒಂದೇ ಸಮನಾದ ಹರಿವಿನ ಪ್ರಮಾಣ ಇದೆ. ಸದ್ಯ 36.5 ಟಿಎಂಸಿ ನೀರು ಶೇಖರಣೆಯಾದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಮತ್ತು ಸಣ್ಣ ನೀರಾವರಿ ಹಾಗೂ ಕಾನೂನು ಮತ್ತು ಸಂಸದೀಯ ಸಚಿವ ಜೆ ಸಿ ಮಾಧುಸ್ವಾಮಿ ಸೇರಿದಂತೆ ಜಿಲ್ಲೆಯ ಶಾಸಕರು ಹೇಮಾವತಿಯ ಜಲಾಶಯಕ್ಕೆ ಬಾಗಿನ ಅರ್ಪಿಸಿ, 5300 ಕ್ಯೂಸೆಕ್ಸ್ ನೀರನ್ನು ಅಧಿಕೃತವಾಗಿ ಇಂದಿನಿಂದ ಹೊರಬಿಡುವ ಕಾರ್ಯವನ್ನು ಮಾಡಲಾಯಿತು.
ಪ್ರವಾಸಿಗರಾದ ಯಶಸ್ವಿನಿ ಜೊತೆ ಚಿಟ್ ಚಾಟ್ ಮಂಡ್ಯ ಹಾಸನ ಮತ್ತು ತುಮಕೂರು ಭಾಗಗಳಿಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆಯ ಸಲುವಾಗಿ ಹಾಸನ ಜಿಲ್ಲೆಯ ಗೊರೂರು ಹೇಮಾವತಿ ನದಿಗೆ ಅಣೆಕಟ್ಟು ಕಟ್ಟಲಾಗಿದೆ. ಸತತವಾಗಿ ಮೂರು ವರ್ಷಗಳಿಂದ ಅವಧಿಗೂ ಮುನ್ನವೇ ಜಲಾಶಯ ಭರ್ತಿಯಾಗಿತ್ತು. ರೈತರು ಮೂರು ವರ್ಷಗಳಿಂದ ಉತ್ತಮ ಬೆಳೆ ಬೆಳೆಯುವ ಮೂಲಕ ಸಂತುಷ್ಟರಾಗಿದ್ದಾರೆ. ಇಂದು ಹೇಮಾವತಿ ಜಲಾಶಯದಿಂದ 5 ಕ್ರೆಸ್ಟ್ ಗೇಟ್ ಗಳ ಮೂಲಕ ನೀರನ್ನು ಹೊರಬಿಡಲಾಗಿದ್ದು, ನಮ್ಮ ಹಾಸನದ ಪ್ರತಿನಿಧಿ ಸುನಿಲ್ ಕುಂಬೇನಹಳ್ಳಿ ಜಲಾಶಯ ಸ್ಥಳದಿಂದ ವರದಿ ನೀಡಿದ್ದಾರೆ.