ETV Bharat / state

ಹೆಚ್ಚುತ್ತಿರುವ ವಿಶ್ವವಿದ್ಯಾಲಯಗಳಿಂದ ಮೈಸೂರು ವಿವಿ ತನ್ನ ಹಿರಿಮೆ ಕಳೆದುಕೊಳ್ಳುತ್ತಿದೆ: ಸಚಿವ ಮಾಧುಸ್ವಾಮಿ

ರಾಜ್ಯದಲ್ಲಿ ಸಾಕಷ್ಟು ವಿಶ್ವವಿದ್ಯಾಲಯಗಳು ಹುಟ್ಟಿಕೊಂಡ ಬಳಿಕ ಮೈಸೂರು ವಿಶ್ವವಿದ್ಯಾಲಯ ತನ್ನ ಹಿರಿಮೆ ಕಳೆದುಕೊಳ್ಳುತ್ತಿದೆ. ಆದ್ರೆ ಗ್ರಾಮೀಣ ಭಾಗದ ಮುದುಡಿ ಹೋಗುತ್ತಿದ್ದ ಪ್ರತಿಭೆಗಳಿಗೆ ಹೇಮಗಂಗೋತ್ರಿ ಛಾಪು ಮೂಡಿಸಲಿಕ್ಕೆ ಸಹಾರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು.

hemagangotri-master-degree-silver-jubilee-ceremony

author img

By

Published : Feb 27, 2020, 9:10 PM IST

ಹಾಸನ: ರಾಜ್ಯದಲ್ಲಿ ಸಾಕಷ್ಟು ವಿಶ್ವವಿದ್ಯಾಲಯಗಳು ಹುಟ್ಟಿಕೊಂಡ ಬಳಿಕ ಮೈಸೂರು ವಿಶ್ವವಿದ್ಯಾಲಯ ತನ್ನ ಹಿರಿಮೆ ಕಳೆದುಕೊಳ್ಳುತ್ತಿದೆ. ಆದ್ರೆ ಗ್ರಾಮೀಣ ಭಾಗದ ಮುದುಡಿ ಹೋಗುತ್ತಿದ್ದ ಪ್ರತಿಭೆಗಳಿಗೆ ಹೇಮಗಂಗೋತ್ರಿ ಛಾಪು ಮೂಡಿಸಲಿಕ್ಕೆ ಸಹಾರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು.

ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಬೆಳ್ಳಿ ಹಬ್ಬದ ಉದ್ಘಾಟನಾ ಸಮಾರಂಭ

ಮೈಸೂರು ವಿಶ್ವವಿದ್ಯಾಲಯದ ಅಡಿಯಲ್ಲಿ ನಡೆಯುತ್ತಿರುವ ಹಾಸನದ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಬೆಳ್ಳಿ ಹಬ್ಬ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಹಿಂದೆ ಉಪಕುಲಪತಿಗಳಾಗಿದ್ದ ಮಾದಯ್ಯನವರ ಇಚ್ಛಾಶಕ್ತಿಯಿಂದ ಹೇಮಗಂಗೋತ್ರಿ ಹಾಸನದಲ್ಲಿ ಪ್ರಾರಂಭಗೊಂಡು ಯಶಸ್ವಿ 28 ವರ್ಷಗಳನ್ನ ಪೂರೈಸಿದೆ. ಇವತ್ತು ತಾಂತ್ರಿಕ ಶಿಕ್ಷಣಕ್ಕೆ ಸಾಕಷ್ಟು ಮಹತ್ವ ನೀಡಲಾಗುತ್ತಿದೆ. ಆದ್ರೆ ಹಿಂದೆ ಅದಕ್ಕೆ ಮಹತ್ವ ಇರಲಿಲ್ಲ. ತಾಂತ್ರಿಕ ಶಿಕ್ಷಣ ಸಿಗದಿದ್ದ ಪಕ್ಷದಲ್ಲಿ ಸಾಮಾನ್ಯ ಶಿಕ್ಷಣಕ್ಕೆ ಗಮನ ಹರಿಸಿದ ಹಿನ್ನೆಲೆಯಲ್ಲಿ ಪದವಿ ಶಿಕ್ಷಣವನ್ನ ನಾವೇ ಅದ್ರ ಸ್ಥಿತಿಯನ್ನ ಕೆಳ ಹಂತಕ್ಕೆ ತಂದುಬಿಟ್ಟೆವಾ ಎಂದು ಬೇಸರ ವ್ಯಕ್ತಪಡಿಸಿದ್ರು.

ಕೆಲವು ದಿನಗಳ ಹಿಂದೆ ತಮಿಳುನಾಡಿನ ಯಾವುದೋ ವಿಶ್ವವಿದ್ಯಾಲಯದಿಂದ ಆಯ್ಕೆಯಾಗಿ ಬಂದ ಉಪನ್ಯಾಸಕರುಗಳ ಹುದ್ದೆಗಳ ಪಟ್ಟಿಯನ್ನ ತಡೆ ಹಿಡಿಯಲಾಗಿತ್ತು. ಅದನ್ನ ನಾನು ವಿಚಾರಣೆ ಮಾಡಿದಾಗ ಮುಖ್ಯ ಕಾರ್ಯದರ್ಶಿಗಳು ಇವರು ಪರೀಕ್ಷೆ ಬರೆದಿರುವುದಕ್ಕೆ ಕುರುಹುಗಳೇ ಸಿಗುತ್ತಿಲ್ಲ ಎಂದರು. ಆಗ ನಾನಗನಿಸಿದ್ದು ಶಿಕ್ಷಣದ ವ್ಯವಸ್ಥೆ ಏನಾಗುತ್ತಿದೆ ಎಂದು. ಇಂದು ನೀವುಗಳು ವಿದ್ಯೆಯಲ್ಲಿ ಹೆಚ್ಚು ಶಕ್ತಿ ಹೊಂದಬೇಕು. ವಿದ್ಯೆಯೆಂಬ ಶಿಕ್ತಿಯನ್ನ ಬೆಳೆಸಿಕೊಂಡಾಗ ಮಾತ್ರ ನೀವು ಏನಾದ್ರು ಸಾಧಿಸಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.