ETV Bharat / state

ಕಲ್ಲುಕೋರೆಯಲ್ಲಿ ಸಿಲುಕಿದ್ದ ಬಾಣಂತಿಗೆ 'ಹೆಲ್ಪಿಂಗ್​ ಹ್ಯಾಂಡ್'​ ನೆರವು: ಇದು ಈಟಿವಿ ಭಾರತ ಫಲಶೃತಿ - ಕೊರೊನಾ ವೈರಸ್​

ಕಲ್ಲು ಕೊರೆಯಲ್ಲಿ ಸಿಲುಕಿಕೊಂಡಿದ್ದ ಗರ್ಭಿಣಿಯರು, ಮತ್ತು ಓರ್ವ ಬಾಣಂತಿಯ ಕುರಿತ ಈಟಿವಿ ಭಾರತ ವರದಿಗೆ ಸ್ಪಂದಿಸಿರುವ 'ಹೆಲ್ಪಿಂಗ್​ ಹ್ಯಾಂಡ್'​ ಎಂಬ ಸಂಸ್ಥೆ, ಅವರಿಗೆ ಬೇಕಾದಂತಹ ದಿನಸಿ ಪದಾರ್ಥಗಳು ಸೇರಿದಂತೆ ಬಟ್ಟೆ ಮತ್ತು ಮಗುವಿಗೆ ಅವಶ್ಯಕವಿರುವ ನ್ಯಾಪ್ಕಿನ್ ಹಾಗೂ ಪರಿಕರಗಳನ್ನು ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.

helping-hand-organization-aid-for-hassan-postpartum
ಕೊರೆಯಲ್ಲಿ ಸಿಲುಕಿದ್ದ ಬಾಣಂತಿ
author img

By

Published : Apr 19, 2020, 11:44 AM IST

ಹಾಸನ: ಈಟಿವಿ ಭಾರತ ವರದಿ ಬಾಣಂತಿಯ ಬಾಳಿಗೆ ಬೆಳಕಾಗಿದೆ. ವರದಿಗೆ ಸ್ಪಂದಿಸಿರುವ ಖಾಸಗಿ ಸಂಸ್ಥೆಯೊಂದು ಲಾಕ್​ಡೌನ್ ಹಿನ್ನಲೆ ಜಿಲ್ಲೆಯಲ್ಲಿ ಕಲ್ಲುಕೋರೆಯಲ್ಲಿ ಸಿಲುಕಿಕೊಂಡಿದ್ದ ಬಾಣಂತಿಗೆ ಬೇಕಾದ ಬಟ್ಟೆ, ಆಹಾರ, ತಾತ್ಕಾಲಿಕ ವಸತಿ ನೀಡುವ ಮೂಲಕ ಮಾನವೀಯತೆ ಮೆರೆದಿದೆ.

ಕಲ್ಲುಕೋರೆಯಲ್ಲಿ ಸಿಲುಕಿದ್ದ ಬಾಣಂತಿಗೆ 'ಹೆಲ್ಪಿಂಗ್​ ಹ್ಯಾಂಡ್'​ ನೆರವು

ಹೊಟ್ಟೆಗೆ ಹಿಟ್ಟಿಲ್ಲದೇ ಎದೆಯಲ್ಲಿ ಹಾಲು ಬರುತ್ತಿಲ್ಲರೀ... ಕರುಳು ಹಿಂಡುವಂತಿದೆ ಈ ಬಡಪಾಯಿಗಳ ಬದುಕು 'ಎಂಬ ಶೀರ್ಷಿಕೆಯಡಿ ವಿಸ್ತೃತ ವರದಿಯನ್ನ ಈಟಿವಿ ಭಾರತ ಬಿತ್ತರಿಸಿತ್ತು. ಲಾಕ್ ಡೌನ್ ಹಿನ್ನಲೆಯಲ್ಲಿ ಉತ್ತರ ಕರ್ನಾಟಕದಿಂದ ಕಲ್ಲುಕೋರೆಯಲ್ಲಿ ಕೆಲಸಕ್ಕೆಂದು ಬಂದಿದ್ದ ಸುಮಾರು 490 ಮಂದಿ ಸಿಲುಕಿಕೊಂಡಿದ್ದರು. ಅದರಲ್ಲಿ 9 ಮಂದಿ ಗರ್ಭಿಣಿಯರು ಹಾಗೂ ಓರ್ವ ಬಾಣಂತಿ ಸಿಲುಕಿಕೊಂಡಿದ್ದರು. ಇವರ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರ ಗಮನಕ್ಕೆ ತರುವಲ್ಲಿ ಈಟಿವಿ ಭಾರತ ಯಶಸ್ವಿಯಾಗಿದೆ.

ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಗುರುರಾಜ್ ನೇತೃತ್ವದ ಹೆಲ್ಪಿಂಗ್ ಹ್ಯಾಂಡ್​ ಎಂಬ ಸಂಸ್ಥೆ ವತಿಯಿಂದ ಶ್ರವಣಬೆಳಗೊಳದ ಸರ್ಕಾರಿ ಆಸ್ಪತ್ರೆಯ ಸಹಯೋಗದೊಂದಿಗೆ ಆರೋಗ್ಯ ತಪಾಸಣೆ ಮತ್ತು ಬಾಣಂತಿಯರಿಗೆ ಹಾಗೂ ಗರ್ಭಿಣಿಯರಿಗೆ ಬೇಕಾದಂತಹ ದಿನಸಿ ಪದಾರ್ಥಗಳು ಸೇರಿದಂತೆ ಬಟ್ಟೆ ಮತ್ತು ಮಗುವಿಗೆ ಬೇಕಾದಂತಹ ನ್ಯಾಪ್ಕಿನ್ ಹಾಗೂ ಪರಿಕರಗಳನ್ನು ನೀಡುವ ಮೂಲಕ ಅವರಿಗೆ ಸಹಾಯ ಹಸ್ತ ಚಾಚಲಾಗಿದೆ.

ಈಟಿವಿ ಭಾರತ ವರದಿಗೆ ಸ್ಪಂದಿಸಿ ಬಡಪಾಯಿಗಳ ಬದುಕಿಗೆ ನೆರವಾದ ಹೆಲ್ಪಿಂಗ್​ ಹ್ಯಾಂಡ್​ ಸಂಸ್ಥೆಗೆ ಧನ್ಯವಾದ ತಿಳಿಸುತ್ತೇವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.