ETV Bharat / state

ಹಾಸನದಲ್ಲಿ ನಡೆಯುತ್ತೆ ಹೆಬ್ಬಾರಮ್ಮನ ಜಾತ್ರೆ, ಈಚಲ ಗರಿಯಿಂದ ತಯಾರಿಸ್ತಾರೆ ನೈವೇದ್ಯ

ಹಾಸನ ಜಿಲ್ಲೆಯಲ್ಲಿ ವಿಶೇಷವಾಗಿ ಹೆಬ್ಬಾರಮ್ಮನ ಜಾತ್ರೆ ನಡೆಯುತ್ತದೆ.. ಸಾವಿರಾರು ಭಕ್ತರು ಇಲ್ಲಿ ಸೇರಿವುದರೊಂದಿಗೆ ದೇವಿಗೆ ನೈವೇದ್ಯವನ್ನು ಸಮರ್ಪಿಸಲಾಗುತ್ತದೆ.

author img

By

Published : Apr 24, 2019, 7:28 PM IST

ಹಾಸನ: ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಸಮೀಪದ ಹೊನ್ನೇನಹಳ್ಳಿ ಗ್ರಾಮದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದ ಹೆಬ್ಬಾರಮ್ಮನ ಜಾತ್ರಾ ಮಹೋತ್ಸವ ಜರುಗಿತು.
ಜಾತ್ರೆಯಲ್ಲಿ ನೂರಾರು ಭಕ್ತರು ಮಡಿಕೆಯಲ್ಲಿ ಅನ್ನ ಮಾಡಿ ಮಡೆಯನ್ನ ತಯಾರಿಸಿ ದೇವರಿಗೆ ನೈವೇದ್ಯ ಸಮರ್ಪಿಸಿದರು.
ಒಂದು ವಾರದಿಂದ ಜಾತ್ರೆ ನಡೆಯುತ್ತಿದ್ದು, ಹೊನ್ನೇನಹಳ್ಳಿ ಗ್ರಾಮದಿಂದ ಹಿರೀಸಾವೆಗೆ ದೇವರನ್ನ ತರಲಾಯಿತು.

ಇನ್ನು ಮಡೆಯ ಅನ್ನವನ್ನು ತಯಾರಿಸಲು ಹೆಬ್ಬಾರಮ್ಮನ ಭಕ್ತರು ಒಂದು ದಿನ ಮೊದಲೇ ಹಸಿ ಈಚಲು ಗರಿಯನ್ನು ಸಂಗ್ರಹಿಸುವುದು ವಿಶೇಷ. ಮಡೆ ತಯಾರಾದ ನಂತರ ಎಲ್ಲವನ್ನೂ ಒಂದು ಕಡೆಯಿಟ್ಟು, ಈ ಮಡೆಗಳಿಗೆ ವಿವಿಧ ಪುಷ್ಪಗಳು ಮತ್ತು ಅಡಿಕೆ ಹೊಂಬಾಳೆಯಿಂದ ಅಲಂಕಾರ ಮಾಡಿ, ಸಂಜೆ ಹಿರೀಸಾವೆ ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹೆಬ್ಬಾರಮ್ಮ ದೇವರ ಹಿಂದೆ ಮೆರವಣಿಗೆ ಮಾಡುವುದು ಜಾತ್ರೆಯ ವಿಶೇಷ.
ಇತ್ತೀಚಿನ ದಿನಗಳಲ್ಲಿ ಈಚಲ ಮರಗಳ ಸಂಖ್ಯೆ ಕಡಿಮೆಯಾಗಿದ್ದು, ಹತ್ತಾರು ಕಿ.ಮೀ. ಸುತ್ತಿ ಭಕ್ತರು ಈಚಲು ಗರಿಯನ್ನು ಸಂಗ್ರಹಿಸಿ ಮಡೆಯನ್ನ ಬೇಯಿಸಿ ದೇವಿಗೆ ಸಮರ್ಪಿಸುವುದು ವಿಶೇಷ.

ಇನ್ನು ಸುತ್ತಮತ್ತಲ ಗ್ರಾಮಸ್ಥರುಗಳು ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ರಂಗಕುಣಿತ, ದೊಳ್ಳು ಕುಣಿತ, ಕೋಲಾಟ ಸೇರಿದಂತೆ ಓಕಳಿ ಎರಚುವ ಮೂಲಕ ಜನರಿಗೆ ಮನರಂಜನೆ ನೀಡಿದ್ರು.

Intro:ಹೆಬ್ಬಾರಮ್ಮನ ಮೆರವಣಿಗೆಗೆ ವಿಶೇಷ ಮಡೆ ತಯಾರಿ:
ಹಿರೀಸಾವೆ ಹೋಬಳಿಯ ಹೊನ್ನೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಚೌಡೇಶ್ವರಿ ಹಬ್ಬದ ನಿಮಿತ್ತ ಭಕ್ತರು ಈಚಲ ಗರಿಯ ಬೆಂಕಿಯಿಂದ ಮಡೆ (ಮಡೆ ಅನ್ನ) ತಯಾರಿಸಿದರು
 
ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಸಮೀಪದ ಹೊನ್ನೇನಹಳ್ಳಿ ಗ್ರಾಮದಲ್ಲಿ ಸಾವಿರಾರು ಭಕ್ತರುಗಳ ನಡುವೆ ವೈಭವದ ಹೆಬ್ಬಾರಮ್ಮನ ಜಾತ್ರಾ ಮಹೋತ್ಸವ ಜರುಗಿತು. ಮಹೋತ್ಸವದಲ್ಲಿ ನೂರಾರು ಭಕ್ತರುಗಳು   ಮಡಿಕೆಯಲ್ಲಿ ಅನ್ನ ಮಾಡುವ ಮೂಲಕ ಮಡೆಯನ್ನ ತಯಾರಿಸಿ ದೇವರಿಗೆ ನೈವೇದ್ಯ ಸಮರ್ಪಿಸಿದ್ರು.  
 
ಒಂದು ವಾರದಿಂದ ಹಬ್ಬ ನಡೆಯುತ್ತಿದ್ದು, ಇಂದು ಬೆಳಗ್ಗೆ ಹೊನ್ನೇನಹಳ್ಳಿ ಗ್ರಾಮದಿಂದ ಹಿರೀಸಾವೆಗೆ ದೇವರನ್ನ ಕರೆತಂದ ಭಕ್ತರು ಕುಂಬಾರರ ಮನೆಯಿಂದ ಹೊಸ ಮಡಿಕೆಯನ್ನು ಬಿದಿರಿನ ಅಡ್ಡೆಯಲ್ಲಿ ಹೊತ್ತು, ಉಯ್ಯಾಲೆ ಕಂಬ ಮತ್ತು ದೊಡ್ಡ ರಥಕ್ಕೆ ಪ್ರದಕ್ಷಿಣೆ ಹಾಕಿ ಹೊನ್ನೇನಹಳ್ಳಿಗೆ ತೆರಳಿದರು. ಗ್ರಾಮದ ಹೊರಗೆ ಇರುವ ಮಲ್ಲೇಶ್ವರ ದೇವಸ್ಥಾನದ ಮುಂಭಾಗದದಲ್ಲಿ ದೇವರ ಮನೆತನದವರು ತಾತ್ಕಾಲಿಕವಾಗಿ ಮಣ್ಣಿನ ಒಲೆಯ ನಿರ್ಮಾಣ ಮಾಡಿ ಅಕ್ಕಿ ಮತ್ತು ಇತರ ಪದಾರ್ಥಗಳನ್ನು ಮಡಿಕೆಯಲ್ಲಿ ಹಾಕಿ, ಮಡಿಕೆಯ ಸುತ್ತ ಹಸಿ ಈಚಲು ಗರಿಗಳನ್ನು ಹರಡಿ, ಪೂಜೆ ಸಲ್ಲಿಸಿ, ಕರ್ಪೂರದಿಂದ ಬೆಂಕಿ ಹಚ್ಚಲಾಯಿತು.
 
ಇನ್ನು ಮಡೆಯ ಅನ್ನವನ್ನು ತಯಾರಿಸಲು ಹೆಬ್ಬಾರಮ್ಮನ ಭಕ್ತರು ಒಂದು ದಿನ ಮೊದಲೇ ಹಸಿ ಈಚಲು ಗರಿಯನ್ನು ಸಂಗ್ರಹಿಸಿರುತ್ತಾರೆ. ಮಡೆ ತಯಾರಾದ ನಂತರ ಎಲ್ಲವನ್ನೂ ಒಂದು ಕಡೆಯಿಟ್ಟು, ಈ ಮಡೆಗಳಿಗೆ ವಿವಿಧ ಪುಷ್ಪಗಳು ಮತ್ತು ಅಡಿಕೆ ಹೊಂಬಾಳೆಯಿಂದ ಅಲಂಕಾರ ಮಾಡಿ, ಸಂಜೆ ಹಿರೀಸಾವೆ ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹೆಬ್ಬಾರಮ್ಮ ದೇವರ ಹಿಂದೆ ಮೆರವಣಿಗೆ ಮಾಡುವುದು ಜಾತ್ರೆಯ ವಿಶೇಷ.
 
ಹೊನ್ನೇನಹಳ್ಳಿಯಲ್ಲಿ ನೂರಕ್ಕೂ ಹೆಚ್ಚು ದೇವಿಯ ಭಕ್ತರಿದ್ದಾರೆ. ಇಂದು 40 ಒಕ್ಕಲು ಮನೆಯವರು ಪ್ರತಿ ಮನೆಗೆ ಒಂದು ಗುಡಿ ಮಡೆ, ಇನ್ನೊಂದು ಬಿಡಿ ಮಡೆ ಎಂಬ 2 ಮಡೆಗಳನ್ನು ತಯಾರು ಮಾಡಿ. ಮಡೆಯನ್ನು ಹಸಿ ಈಚಲು ಗರಿಯಿಂದ ಬೇಯಿಸಲಾಗುತ್ತೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಈಚಲ ಮರಗಳ ಸಂಖ್ಯೆ ಕಡಿಮೆಯಾಗಿದ್ದು, ಹತ್ತಾರು ಕಿ.ಮೀ. ಸುತ್ತಿ ಭಕ್ತರು ಈಚಲು ಗರಿಯನ್ನು ಸಂಗ್ರಹಿಸಿ ಮಡೆಯನ್ನ ಬೇಸಿಸಿ ದೇವಿಗೆ ಸಮರ್ಪಿಸುವುದು ವಿಶೇಷ.
 
ಇನ್ನು ಸುತ್ತ ಮುತ್ತಲ ಹತ್ತಾರು ಗ್ರಾಮದ ಗ್ರಾಮಸ್ಥರುಗಳು ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ರಂಗಕುಣಿತ, ದೊಳ್ಳು ಕುಣಿತ, ಕೋಲಾಟ ಸೇರಿದಂತೆ ಓಕಳಿ ಎರಚುವ ಮೂಲಕ ಜನರಿಗೆ ಮನರಂಜನೆಯನ್ನ ನೀಡಿದ್ರು.  

Body:0

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.