ETV Bharat / state

ಅವನ್ಯಾವನೋ ಕರೆಯೋ... ಡಿಸಿ ಎದುರೇ ಅಧಿಕಾರಿಗೆ ಏಕವಚನದಲ್ಲಿ ರೇವಣ್ಣ ವಾಗ್ದಾಳಿ

author img

By

Published : Apr 26, 2022, 10:37 AM IST

ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಬಳಿ ಟ್ರಕ್ ಟರ್ಮಿನಲ್ ಕಾಮಗಾರಿ ಮಾಡಲು ಒಪ್ಪಿಗೆ ಕೊಟ್ಟ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಆರ್. ಗಿರೀಶ್ ಎದುರೇ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

hd-revanna-shouts-at-officers-infront-of-dc-in-hasan
ಅವನ್ಯಾವನೋ ಕರೆಯೋ. . . ಡಿಸಿ ಎದುರೇ ಅಧಿಕಾರಿಗೆ ಏಕವಚನದಲ್ಲಿ ಹೌಹಾರಿದ ಹೆಚ್.ಡಿ. ರೇವಣ್ಣ.

ಹಾಸನ: ತಾಲೂಕಿನ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಬಳಿ ಟ್ರಕ್ ಟರ್ಮಿನಲ್ ಕಾಮಗಾರಿ ಮಾಡಲು ಒಪ್ಪಿಗೆ ಕೊಟ್ಟ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಆರ್. ಗಿರೀಶ್ ಎದುರೇ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಘಟನೆ ನಡೆದಿದೆ. ನಗರದ ಹೊರವಲಯದಲ್ಲಿರುವ ಹೇಮಗಂಗೋತ್ರಿ ಕಾಲೇಜು ಬಳಿ ನಿರ್ಮಾಣವಾಗುತ್ತಿರುವ ಟ್ರಕ್ ಟರ್ಮಿನಲ್ ವಿರೋಧಿಸಿ 20 ದಿನದಿಂದ ಕಾಲೇಜಿನ ವಿದ್ಯಾರ್ಥಿಗಳು, ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ, ಕಾಮಗಾರಿ ನಿಲ್ಲಿಸಲಾಗಿತ್ತು. ಈಗ ಮತ್ತೆ ಕಾಮಗಾರಿ ಪ್ರಾರಂಭವಾದ ಹಿನ್ನಲೆಯಲ್ಲಿ ಕಾಮಗಾರಿಗೆ ಒಪ್ಪಿಗೆ ನೀಡಿರುವ ಅಧಿಕಾರಿ ವಿರುದ್ಧ, ಜಿಲ್ಲಾಧಿಕಾರಿ ಕಚೇರಿಯಲ್ಲಿ ತಾಲೂಕು ಪಂಚಾಯಿತಿ ಇಒ ಯಶವಂತ್​​​ಗೆ ಮಾಜಿ ಸಚಿವ ರೇವಣ್ಣ ಏಕವಚನದಲ್ಲಿಯೇ ಹರಿಹಾಯ್ದಿದ್ದಾರೆ.

ಡಿಸಿ ಎದುರೇ ಅಧಿಕಾರಿಗೆ ಏಕವಚನದಲ್ಲಿ ಹೌಹಾರಿದ ಹೆಚ್.ಡಿ. ರೇವಣ್ಣ.

"ಏಯ್ ಸ್ನಾತಕೋತ್ತರ ಕೇಂದ್ರದ ಬಳಿ ಟ್ರಕ್ ಟರ್ಮಿನಲ್ ಆಗ್ತಿದೆ. ಈ ಬಗ್ಗೆ ನೀನು ಸರ್ಕಾರಕ್ಕೆ ಪತ್ರ ಬರೀಬೇಕಲ್ವಾ? ನೀನು ದನ ಕಾಯೋನು. ಏಯ್ ದನ ಮೇಯಿಸೋದು ಬಿಟ್ಟು ನಿನ್ಯಾವನು ಇಒ ಅಂತಾರೆ ! ಇಒ ಆಗಿದ್ದೀಯ ನೀನು, ದನಗಳ ಡಾಕ್ಟ್ರು ನೀನು? ನಾನು ತಂದಾಕಿದವನು ಇಲ್ಲಿಗೆ ನಿನ್ನ. ದನಕ್ಕೆ ಇಂಜೆಕ್ಷನ್ ಕೊಡೋನು ನೀನು. ನನ್ನತ್ರ ನಿನ್ನೆ ಹೇಳ್ದೆ ನೀನು, ಡಿಸಿಯನ್ನೆ ಅಲ್ಲಾಡುಸ್ತಾವ್ರೆ, ನಾನೇನು ಮಾಡ್ಲಿ ಅಂದೆ. ದನಕ್ಕೆ ಇಂಜೆಕ್ಷನ್ ಕೊಡೊ ನಿನಗೇನು ಗೊತ್ತಿದೆ. ಏಯ್ ನೀನು ದನ ಕಾಯೋಕೆ ಹೋಗು" ಎಂದು ರೇವಣ್ಣ ಸಿಡಿಮಿಡಿಗೊಂಡರು.

​ಈ ವೇಳೆ, ಡಿಸಿ ಸೂಚನೆಯಂತೆ ಕೆಲಸ ಮಾಡಿರುವುದಾಗಿ ಹೇಳಿದ ಇಒ ಮಾತಿಗೆ ಮತ್ತಷ್ಟು ಗರಂ ಆದ ರೇವಣ್ಣ, 'ಡಿಸಿ, ಮನೆಗೆ ನುಗ್ಗು ಅಂತಾನೆ ನುಗ್ಗುತ್ತೀಯಾ ನೀನು? ಪಂಚಾಯಿತಿ ಲೈಸೆನ್ಸ್ ತೆಗೆದುಕೊಳ್ಳದೇ ಯಾವುದೇ ಬಿಲ್ಡಿಂಗ್ ಕೊಡೋಕೆ ನಿನಗೇನು ಅಧಿಕಾರ ಇದೆ. ಹೇಗೆ ಅಲ್ಲಿ ಕಟ್ಟಲು ಬಿಟ್ಟೆ' ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಹೇಳಿದ್ದು, ಕೆಲಸ ನಿಲ್ಲಿಸುವುದಾಗಿ ಉತ್ತರಿಸಿದ್ದಾರೆ. ಜಿಲ್ಲಾ ಮಂತ್ರಿಗಳು ಬರಲಿ, ಕುಳಿತು ಮಾತನಾಡೋಣ ಎಂದಿದ್ದು, ಏನಾದರೂ ನಿಲ್ಲಿಸದಿದ್ರೆ ಅಲ್ಲಿ ಆಗುವ ಘಟನೆಗಳಿಗೆ ಜಿಲ್ಲಾಡಳಿತವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.

ಟ್ರಕ್ ಟರ್ಮಿನಲ್ ಕಾಮಗಾರಿ ಬಗ್ಗೆ ಮಾತನಾಡುತ್ತಿರುವ ಮಾಜಿ ಸಚಿವ ಹೆಚ್ .ಡಿ ರೇವಣ್ಣ

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಒಳ್ಳೆ ಕೆಲಸ ಮಾಡಿದರೇ ನನ್ನ ಅಭ್ಯಂತರವಿಲ್ಲ. 2015ರಲ್ಲಿ ಯೂನಿವರ್ಸಿಟಿಗೆ ಅರ್ಜಿ ಹಾಕಲಾಗಿದೆ. ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಬಳಿಯೇ ಮಹಿಳಾ ಹಾಸ್ಟೆಲ್ ಕೂಡ ಇದ್ದು, ಈ ಭಾಗದಲ್ಲಿ ನಾಲ್ಕು ಹಳ್ಳಿಗಳು ಇದೆ. ಇಲ್ಲಿ ಬಿಜೆಪಿ ಮುಖಂಡರ ಕಾಲೇಜು ಇದ್ದು, ಹೆಣ್ಣು ಮಕ್ಕಳು ಓಡಾಡುವ ಜಾಗದಲ್ಲಿ ಇಂತಹ ಕಾಮಗಾರಿ ಮಾಡಲು ಅವಕಾಶ ಕೊಟ್ಟವರು ಯಾರು? ಬೇರೆ ಕಡೆ ಮಾಡಿದರೇ ನಮ್ಮ ವಿರೋಧ ಏನಿಲ್ಲ. ಆಲೂರಲ್ಲಿ ಮಾಡುವುದಾಗಿ ಹಿಂದೇನೆ ಹೇಳಿದ್ದರು. ಅಲ್ಲಿ ಮಾಡಲಿ ನಾವೇನು ತಡೆಯುವುದಿಲ್ಲ ಎಂದು ಹೇಳಿದ್ದಾರೆ.

ಓದಿ : ರಾಜ್ಯದಲ್ಲಿ ಲೋಡ್​ ಶೆಡ್ಡಿಂಗ್​.. ಪವರ್​ ಕಟ್​ನಿಂದ ಕಂಗಾಲಾದ ಧೋನಿ ಪತ್ನಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.