ETV Bharat / state

ಮುಸ್ಲಿಂ ಸಮಾಜವನ್ನು ತುಳಿಯಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ: ಹೆಚ್ ಡಿ ರೇವಣ್ಣ - etv bharat kannada

ಜೆಡಿಎಸ್ ಪಕ್ಷವನ್ನು ಯಾರು ನಾಶ ಮಾಡಲು ಸಾಧ್ಯವಿಲ್ಲ, ದೇವೇಗೌಡರು 15-20 ವರ್ಷ ಸಾಕಿ ಬೆಳೆಸಿದ ಗಿಣಿಗಳು ಇವತ್ತು ಬೇರೆ ಕಡೆಗೆ ಹೋಗಿವೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದ್ದಾರೆ.

Revanna Pressmeet
ಹೆಚ್ ಡಿ ರೇವಣ್ಣ
author img

By

Published : Apr 4, 2023, 5:35 PM IST

Updated : Apr 4, 2023, 10:32 PM IST

ಮಾಜಿ ಸಚಿವ ಹೆಚ್ ಡಿ ರೇವಣ್ಣ

ಬೇಲೂರು (ಹಾಸನ): ಮುಸ್ಲಿಮರ ಕಠಿಣ ಉಪವಾಸದ ಸಂದರ್ಭದಲ್ಲಿ ಮೀಸಲಾತಿ ತೆಗೆದಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದರು. ಬೇಲೂರು ಚನ್ನಕೇಶವ ರಥೋತ್ಸವದಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳು ಮಾಡದ ಅಭಿವೃದ್ಧಿ ಕಾರ್ಯಗಳನ್ನು, ಅಲ್ಪಾವಧಿಯಲ್ಲಿ ಅಧಿಕಾರದಲ್ಲಿದ್ದ ಜೆಡಿಎಸ್ ಸರ್ಕಾರ ಮಾಡಿದೆ ಎಂದರು.

ದೇವೇಗೌಡರು ಮುಸ್ಲಿಮರಿಗೆ ಮೀಸಲಾತಿ ನೀಡುವ ಮೂಲಕ ಅವರ ಸಮಾಜಕ್ಕೆ ನ್ಯಾಯ ದೊರಕಿಸಿ ಕೊಟ್ಟಿದ್ದರು. ಆದರೆ ಮುಸ್ಲಿಂ ಸಮಾಜವನ್ನು ತುಳಿಯುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ. ಮುಸ್ಲಿಮರು ಇಂದು ಕಠಿಣ ಉಪವಾಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮೀಸಲಾತಿಯನ್ನ ತೆಗೆದು ಬೇರೆಯವರಿಗೆ ನೀಡಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಪಕ್ಷಗಳಿಂದ ತಂತ್ರಗಾರಿಕೆ- ರೇವಣ್ಣ.. ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಮುಗಿಸಬೇಕೆಂದು ಹಲವು ತಂತ್ರಗಾರಿಕೆ ನಡೆಸುತ್ತಿವೆ. ಆದರೆ, ಚನ್ನಕೇಶವನ ಆಶೀರ್ವಾದ ಮತ್ತು ದೇವೇಗೌಡರು ಇರುವ ತನಕ ಯಾರು ಏನು ಮಾಡಲು ಸಾಧ್ಯವಿಲ್ಲ ಎಂದ ಅವರು, ಮೊದಲು ಹಣ ಕೊಟ್ಟು ಪ್ರಚಾರ ಮಾಡಿಸಿಕೊಳ್ಳಬೇಕಿತ್ತು. ಆದರೆ ಇಂದು ಮಾಧ್ಯಮಗಳಲ್ಲಿ ನಮಗೆ ಉಚಿತವಾಗಿ ಪ್ರಚಾರ ಸಿಗುತ್ತಿದೆ. ಅದಕ್ಕೆ ಮಾಧ್ಯಮಗಳಿಗೆ ಧನ್ಯವಾದಗಳು ಎಂದು ನಿಮ್ಮ ಆಶೀರ್ವಾದದಿಂದ ಈ ಬಾರಿ ಜೆಡಿಎಸ್​ 120 ಸ್ಥಾನ ಗೆಲ್ಲಲಿ, ನಿಮಗೆ ದೇವರು ಒಳ್ಳೆಯದು ಮಾಡಲಿ ಎಂದರು.

ಬೇಲೂರು ಶಾಸಕ ಕೆ ಎಸ್ ಲಿಂಗೇಶ್ 750 ಕೋಟಿ ಹಣವನ್ನು ಲೂಟಿ ಹೊಡೆದಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಲಿಂಗೇಶ್ ಒಬ್ಬ ಪಾಪದ ಮನುಷ್ಯ. ಎರಡು ರಾಷ್ಟ್ರೀಯ ಪಕ್ಷಗಳು ಸಂಚು ರೂಪಿಸಿ ನಮ್ಮ ಪಕ್ಷದ ಶಾಸಕನನ್ನು ರಾಜಕೀಯವಾಗಿ ಮುಗಿಸಲು ನೋಡುತ್ತಿದ್ದಾರೆ. ಬೇಲೂರಿಗೆ ಶಾಸಕರಾಗಿ ಬಂದ ಬಳಿಕ ಏನೆಲ್ಲಾ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದನ್ನು ಕಡತ ತೆಗೆದು ನೋಡಲಿ ಎಂದು ರೇವಣ್ಣ ಹೇಳಿದರು.

ರಣಘಟ್ಟ ಯೋಜನೆಯನ್ನ ಅನುಮೋದನೆ ಮಾಡಿಸಿಕೊಂಡು ಬರುವ ಸಂದರ್ಭದಲ್ಲಿ ಯಾರು ಕೈ ಕಾಲು ಹಿಡಿದು ಮಾಡಿಸಿಕೊಂಡು ಬಂದಿದ್ದಾರೆ ಎಂಬುದು ಜಿಲ್ಲೆಯ ಜನಕ್ಕೆ ಗೊತ್ತು. ಇದೆಲ್ಲವನ್ನ ಮೇಲಿರುವ ದೇವರೊಬ್ಬ ನೋಡಿಕೊಳ್ಳುತ್ತಾನೆ. ಸುಖ ಸುಮ್ಮನೆ ಆರೋಪ ಮಾಡಿ ತೇಜೋವಧೆ ಮಾಡಬಾರದು ಎಂದರು.

ದೇವೇಗೌಡರು ಸಾಕಿದ ಗಿಣಿಗಳು ಇವತ್ತು ಬೇರೆ ಕಡೆ ಹೋಗಿವೆ- ಹೆಚ್​ ಡಿ ರೇವಣ್ಣ.. ಜೆಡಿಎಸ್ ಪಕ್ಷವನ್ನು ಯಾರು ನಾಶ ಮಾಡಲು ಸಾಧ್ಯವಿಲ್ಲ, ದೇವೇಗೌಡರು 15-20 ವರ್ಷ ಸಾಕಿ ಬೆಳೆಸಿದ ಗಿಣಿಗಳು ಇವತ್ತು ಬೇರೆ ಕಡೆಗೆ ಹೋಗಿವೆ. ದೇವೇಗೌಡರಿಗೆ ಮೋಸ ಮಾಡಿ, ಹೋಗಿದ್ದಾರಲ್ಲ ಅವರಿಗೆ ಚನ್ನಕೇಶವ ದೇವರೇ ಒಂದಲ್ಲ ಒಂದು ದಿನ ಶಿಕ್ಷೆ ಕೊಡುತ್ತಾನೆ. ಅರಸೀಕೆರೆ ಶಾಸಕನನ್ನ ಗಿಣಿ ಸಾಕಿದ ಹಾಗೆ ಸಾಕಿದೆ. ಆದರೆ ಆತ ಮೋಸ ಮಾಡಿ ಹೋಗಿದ್ದಾನೆ ಎಂದು ಶಿವಲಿಂಗೇಗೌಡರ ವಿರುದ್ಧ ಹೆಚ್​ ಡಿ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಈಗ ಶಿರಸಿ ವರೆಗೆ ಹೋಗಿ ರಾಜೀನಾಮೆ ಕೊಡಕ್ಕೆ ಹೋಗಿದ್ದಾನೆ. ಕೊಡುವುದಾದರೆ ಎರಡು ವರ್ಷದ ಮೊದಲೇ ರಾಜಿನಾಮೆ ಕೊಡಬೇಕಿತ್ತು. ಇವತ್ತು ಕುರುಬ ಸಮಾಜದವರು ಲಿಂಗಾಯಿತರು ಮತ್ತು ಒಕ್ಕಲಿಗರು ನಮಗೆ ವೋಟ್ ಕೊಡಲ್ಲ ಅಂತ ಕಾಂಗ್ರೆಸ್ಸಿಗೆ ಹೋಗುತ್ತಿದ್ದೇನೆ ಎನ್ನುತ್ತಿದ್ದಾರಲ್ಲ. 15 ವರ್ಷ ಅವರು ವೋಟ್ ಹಾಕಿಲ್ವಾ? ಎಂದು ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡ ವಿರುದ್ಧ ಹರಿಹಾಯ್ದರು, ಇನ್ನು ರಾಜ್ಯದಲ್ಲಿ ಮೋದಿ ಬಸ್ಸುಗಳು ಎಲ್ಲಾ ಪಕ್ಷದವರನ್ನ ಹತ್ತಿ ಹತ್ತಿ ಎಂದು ಬೇಡುತ್ತಿದ್ದಾರೆ ಆದರೆ ಹಳೆ ಬಸ್ಸು ಅಂತ ಯಾರು ಬಸ್ ಹತ್ತಿ ಹೋಗ್ತಾ ಇಲ್ಲ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ:ಗುರುವಾರ ಇಲ್ಲವೇ ಶುಕ್ರವಾರ ಹಾಸನದ ಟಿಕೆಟ್ ಫೈನಲ್‌ : ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ

Last Updated : Apr 4, 2023, 10:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.