ETV Bharat / state

ಕೋವಿಡ್​ ಕೌಂಟ್: ಹಾಸನ ಜಿಲ್ಲೆಯಲ್ಲಿ 187 ಪಾಸಿಟಿವ್​, 3 ಬಲಿ, 45 ಡಿಸ್ಚಾರ್ಚ್​ - ಹಾಸನ ಜಿಲ್ಲಾ ಕೊರೊನಾ ಸೋಂಕಿತರ ಸಂಖ್ಯೆ

ಹಾಸನ ಜಿಲ್ಲೆಯಲ್ಲಿ ಇಂದು 187 ಕೋವಿಡ್​ ಸೋಂಕಿತರು ಪತ್ತೆಯಾಗಿದ್ದು, 3 ಜನರು ಕೊರೊನಾಗೆ ಬಲಿಯಾಗಿದ್ದಾರೆ. 45 ಜನ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

haveri-corona-case-report
ಹಾಸನ ಜಿಲ್ಲಾ ಕೊರೊನಾ ವರದಿ
author img

By

Published : Aug 4, 2020, 9:26 PM IST

ಹಾಸನ: ಜಿಲ್ಲೆಯಲ್ಲಿ‌ ಇಂದು 187 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಮೂವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ತಿಳಿಸಿದ್ದಾರೆ.

ಆಲೂರು-2, ಬೇಲೂರು-12, ಹಾಸನ-116, ಅರಸೀಕೆರೆ-5, ಚನ್ನರಾಯಪಟ್ಟಣ-19, ಅರಕಲಗೂಡು-9, ಹೊಳೆನರಸೀಪುರ-17, ಸಕಲೇಶಪುರ-6, ಇತರೆ- 1 ಒಟ್ಟು 187 ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಇದುವರೆಗೂ ಜಿಲ್ಲೆಯಲ್ಲಿ ಒಟ್ಟು 2,735 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಇಂದು 45 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದು, ಒಟ್ಟು ಇದುವರೆಗೆ 1102 ಮಂದಿ ಬಿಡುಗಡೆಯಾಗಿದ್ದಾರೆ. 1,560 ಸಕ್ರಿಯ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ 73 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಹಾಸನ ಜಿಲ್ಲಾ ಕೊರೊನಾ ವರದಿ

ಕೊರೊನಾ ಉಲ್ಬಣವಾಗುತ್ತಿರುವ ಕಾರಣ ಯಾರಿಗಾದರೂ ಉಸಿರಾಟದಲ್ಲಿ ತೊಂದರೆ, ಜ್ವರ, ಶೀತ, ನೆಗಡಿ, ಕೆಮ್ಮು ಕಾಣಿಸಿಕೊಂಡರೆ ಹಿಮ್ಸ್, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಇತರೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆಗೆ ಒಳಪಡಬೇಕು. ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಕೆ ಮಾಡಿ, ಸಭೆ ಸಮಾರಂಭವನ್ನು ಆದಷ್ಟು ಕಡಿಮೆ ಮಾಡುವ ಮೂಲಕ ಕೋವಿಡ್​​ ಸೋಂಕು ತಡೆಗಟ್ಟುವಲ್ಲಿ ಸಹಕರಿಸಬೇಕೆಂದು ಜನರಿಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್​ ಮನವಿ ಮಾಡಿದರು.

ತಾಲೂಕುವಾರು ಕೋವಿಡ್ ಪ್ರಕರಣಗಳು:

ಆಲೂರು - 96, ಅರಕಲಗೂಡು 200, ಅರಸೀಕೆರೆ 422, ಬೆಲೂರು 175, ಚನ್ನರಾಯಪಟ್ಟಣ 454, ಹಾಸನ 1019, ಹೊಳೆನರಸೀಪುರದಲ್ಲಿ 266, ಸಕಲೇಶಪುರ 88, ಇತರೆ 15 ಪ್ರಕರಣಗಳು ಈವರೆಗೆ ವರದಿಯಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.