ETV Bharat / state

ಸಾರ್ವಜನಿಕರಿಗೆ ದರ್ಶನ ನೀಡಿದ ಹಾಸನಾಂಬೆ - Hassanambe who gave the darshan to public

ಕಳೆದ 11 ದಿನದಿಂದ ಗಣ್ಯ ವ್ಯಕ್ತಿಗಳಿಗೆ ಮಾತ್ರ ದರ್ಶನ ನೀಡಿದ್ದ ಹಾಸನಾಂಬೆ ಇಂದು ಸಾರ್ವಜನಿಕರಿಗೆ ಕೊನೆಯ ದರ್ಶನ ನೀಡಿದ್ದಾಳೆ. ಬಲಿ ಪಾಡ್ಯಮಿಯ ದಿನ ಭಕ್ತರ ದಂಡೇ ಹರಿದುಬಂದಿತ್ತು. ಜನಜಂಗುಳಿಯ ನಡುವೆ ಸಿದ್ದೇಶ್ವರಸ್ವಾಮಿಯ ರಥೋತ್ಸವದೊಂದಿಗೆ ಚಂದ್ರಮಂಡಲೋತ್ಸವ ಅದ್ಧೂರಿಯಾಗಿ ಜರುಗಿತು. ರಥೋತ್ಸವವನ್ನ ಕಣ್ತುಂಬಿಕೊಂಡ ಭಕ್ತರು, ಜಯಘೋಷ ಕೂಗುತ್ತಾ ಭಕ್ತಿಯ ಪರಾಕಾಷ್ಠೆ ಮೆರೆದರು.

ಸಾರ್ವಜನಿಕರಿಗೆ ಇಂದು ದರ್ಶನವನ್ನು ನೀಡಿದ ಹಾಸನಾಂಬೆ

author img

By

Published : Nov 16, 2020, 5:14 PM IST

Updated : Nov 16, 2020, 5:45 PM IST

ಹಾಸನ: ವರ್ಷಕ್ಕೊಮ್ಮೆ ದರ್ಶನ ಕರುಣಿಸೋ, ಕೇಳಿದ್ದನ್ನು ದಯಪಾಲಿಸೋ ಹಾಸನದ ಅಧಿದೇವತೆ ಹಾಸನಾಂಬೆಯ ಸಾರ್ವಜನಿಕ ದರ್ಶನ ಇಂದು ಮುಕ್ತಾಯವಾಯ್ತು. ಕೊನೆಯ ದಿನ ಭಕ್ತಸಾಗರವೇ ಹರಿದು ಬಂದಿತ್ತು. ಬಹುಶಃ ಇವತ್ತು 50 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದ್ರು.

ಸಾರ್ವಜನಿಕರಿಗೆ ದರ್ಶನ ನೀಡಿದ ಹಾಸನಾಂಬೆ

ಹಾಸನಾಂಬೆ ದರ್ಶನ ಪಡೆಯಲು ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದು, ಕೋವಿಡ್-19ರ ನಡುವೆಯೂ ದೂರದಿಂದ ಬಂದಿರುವ ಭಕ್ತಾದಿಗಳಿಗೆ ನಿರಾಸೆ ಆಗಬಾರದು ಎಂಬ ಕಾರಣಕ್ಕೆ ಎಸ್ಪಿ ನಂದಿನಿ ಮನವಿ ಮೇರೆಗೆ ಅಮ್ಮನವರ ದರ್ಶನ ಪಡೆಯಲು ಅಹೋರಾತ್ರಿ ದೇಗುಲದ ಬಾಗಿಲು ತೆರೆದು ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದ್ರೆ ಜಿಲ್ಲಾಡಳಿತದ ಕೆಲವು ಕಟ್ಟುಪಾಡುಗಳಿಂದ ಗಣ್ಯರು ಕೂಡ ಆಗಮಿಸಿದ್ದರಿಂದ ಕೆಲಕಾಲ ಪೊಲೀಸರು ಮತ್ತು ಭಕ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಮಹಿಳೆಯರು, ಮಕ್ಕಳು, ವಿಶೇಷಚೇತನರು ಸೇರಿದಂತೆ ಸಹಸ್ರಾರು ಭಕ್ತರು ದರ್ಶನದಿಂದ ವಂಚಿತರಾಗಿ ಬೇಸರದಿಂದಲೇ ಮರಳಿದ್ರು.

ಸಾರ್ವಜನಿಕರಿಗೆ ಇಂದು ದರ್ಶನವನ್ನು ನೀಡಿದ ಹಾಸನಾಂಬೆ
ಸಾರ್ವಜನಿಕರಿಗೆ ಇಂದು ದರ್ಶನವನ್ನು ನೀಡಿದ ಹಾಸನಾಂಬೆ

ಬಲಿ ಪಾಡ್ಯಮಿ ಹಿನ್ನೆಲೆ ದೇಗುಲದ ಆವರಣದಲ್ಲಿ ಸಿದ್ದೇಶ್ವರಸ್ವಾಮಿಯ ಚಂದ್ರಮಂಡಲೋತ್ಸವ ಸಹಸ್ರರು ಭಕ್ತರುಗಳ ಸಮ್ಮುಖದಲ್ಲಿ ಜರುಗಿತು. ಜಿಲ್ಲಾಡಳಿತ ಕೇವಲ ಕೋವಿಡ್ -19 ಎಂಬ ಹೆಸರನ್ನು ಇಟ್ಟುಕೊಂಡು ಕೆಲವೇ ಸಾರ್ವಜನಿಕ ಭಕ್ತರಿಗೆ ಅವಕಾಶ ಮಾಡಿಕೊಡುತ್ತಿರುವುದು ಬೇಸರದ ಸಂಗತಿ. ಪ್ರತಿ ವರ್ಷ 6 ರಿಂದ 7 ಲಕ್ಷ ಮಂದಿ ದರ್ಶನ ಪಡೆಯುತ್ತಿದ್ದರು. ಆದರೆ ಈ ಬಾರಿಯ ಸಾಮಾಜಿಕ ಅಂತರ ಕಾಯ್ದುಕೊಂಡು ದರ್ಶನ ಮಾಡಿದರೂ 3 ಲಕ್ಷ ಮಂದಿ ದರ್ಶನ ಮಾಡಬಹುದಿತ್ತು. ಆದರೆ ಕೇವಲ ಗಣ್ಯರಿಗೆ ಮಾತ್ರ ಅವಕಾಶ ಕೊಟ್ಟು, ಸಾರ್ವಜನಿಕರಿಗೆ ಅವಕಾಶ ನೀಡದಿರುವುದು ಬೇಸರದ ಸಂಗತಿ ಎಂಬುದು ಕೆಲವು ಭಕ್ತರ ಮಾತಾಗಿತ್ತು.

Last Updated : Nov 16, 2020, 5:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.