ಹಾಸನ: 9 ದಿನಗಳ ಕಾಲ ನಡೆಯುವ ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಜಿಲ್ಲಾಡಳಿತ ಈ ಬಾರಿ ಪ್ಯಾರಾ ಸೈಲಿಂಗ್ ಮತ್ತು ಪ್ಯಾರಾ ಮೋಟರಿಂಗ್ ಪ್ರದರ್ಶನ ಆಯೋಜಿಸಿದೆ.
ಮೈಸೂರಿನ ದಸರಾ ಮಾದರಿಯಲ್ಲಿಯೇ ಈ ಬಾರಿ ವಿವಿಧ ಕಲಾ ತಂಡಗಳಿಂದ ಕಲೆಗಳನ್ನ ಪ್ರದದರ್ಶನ ಮಾಡಿಸುವುದಷ್ಟೆ ಅಲ್ಲದೆ ಸಪ್ತಮಾತೃಕಾ ರಥವನ್ನು ನಿರ್ಮಾಣ ಮಾಡಿ ಜಿಲ್ಲಾದ್ಯಂತ ಸಂಚರಿಸುವ ವ್ಯವಸ್ಥೆ ಮತ್ತು ನಗರದಾದ್ಯಂತ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಇದರ ಜೊತೆಗೆ ಈ ಬಾರಿ ಪ್ಯಾರಾ ಸೈಲಿಂಗ್ ಮತ್ತು ಪ್ಯಾರಾ ಮೋಟರಿಂಗ್ ಪ್ರದರ್ಶನ ಕೂಡ ಆಯೋಜಿಸಿದ್ದು, ಈ ಬಾರಿಯ ಜಾತ್ರಾ ಮಹೋತ್ಸವ ಹೊಸತನಗಳಿಂದ ಕೂಡಿದೆ.
ಇಂದಿನಿಂದ ಪ್ರಾರಂಭವಾಗಿರುವ ಈ ಪ್ರದರ್ಶನ ಅಕ್ಟೋಬರ್ 29ರ ತನಕ ಇರಲಿದ್ದು, ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಹೊಸ ಮೆರುಗನ್ನು ತಂದುಕೊಡುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.