ETV Bharat / state

ಹಾಸನ: ಎಂಆರ್​ಪಿ ಮೇಲೆ ಶೇ. 14ರಿಂದ 30ರಷ್ಟು ದುಪ್ಪಟ್ಟು ದರಕ್ಕೆ ಮದ್ಯ ಮಾರಾಟ - Selling liquor at double price

ಹಾಸನದಲ್ಲಿ ಸೋಮವಾರ ವೈನ್ ‌ಶಾಪ್​ಗಳು ಹಾಗೂ ಎಂಎಸ್‌ಐಎಲ್ ಮಳಿಗೆಗಳಿಂದ 1,27,143 ಲೀಟರ್​​ ಮದ್ಯ ಹಾಗೂ 29,188 ಲೀಟರ್​ ಬಿಯರ್ ಮಾರಾಟವಾಗಿದ್ದು, 1.5 ಕೋಟಿ ರೂ. ಆದಾಯ ಬಂದಿದೆ. ಇನ್ನು ಕೆಲವು ಅಂಗಡಿಗಳ ಮಾಲೀಕರು ಎಂಆರ್‌ಪಿ ದರದ ಮೇಲೆ ಶೇ. 14ರಿಂದ ಶೇ. 30ರಷ್ಟು ದುಪ್ಪಟ್ಟು ದರ ಪಡೆದು ಮದ್ಯ ಮಾರಾಟ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ದುಪ್ಪಟ್ಟು ದರದಲ್ಲಿ ಮದ್ಯ ಮಾರಾಟ
ದುಪ್ಪಟ್ಟು ದುಪ್ಪಟ್ಟು ದರದಲ್ಲಿ ಮದ್ಯ ಮಾರಾಟದರದಲ್ಲಿ ಮದ್ಯ ಮಾರಾಟ
author img

By

Published : May 6, 2020, 5:01 PM IST

ಹಾಸನ: ಲಾಕ್‌ಡೌನ್‌ ಸಡಿಲಗೊಳಿಸಿ ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಟ್ಟ ಬೆನ್ನಲ್ಲೇ ಸೋಮವಾರ ಒಂದೇ ದಿನ ಜಿಲ್ಲೆಯಲ್ಲಿ ದಾಖಲೆಯ ಮದ್ಯ ಮಾರಾಟವಾಗಿದೆ. ಜಿಲ್ಲೆಯ ವೈನ್‌ ಶಾಪ್​ಗಳು ಹಾಗೂ ಎಂಎಸ್‌ಐಎಲ್ ಮಳಿಗೆಗಳಿಂದ 1,27,143 ಲೀಟರ್​​ ಮದ್ಯ ಹಾಗೂ 29,188 ಲೀಟರ್​ ಬಿಯರ್ ಬಿಕರಿಯಾಗಿದ್ದು, 1.5 ಕೋಟಿ ಆದಾಯ ಸಂಗ್ರಹವಾಗಿದೆ.

ದುಪ್ಪಟ್ಟು ದರದಲ್ಲಿ ಮದ್ಯ ಮಾರಾಟ ಆರೋಪ

ಜಿಲ್ಲಾ ವ್ಯಾಪ್ತಿಯಲ್ಲಿ 125 ವೈನ್‌ ಶಾಪ್ (ಸಿಎಲ್-2) ಹಾಗೂ 33 ಎಂಎಸ್‌ಐಎಲ್ (ಸಿಎಲ್- ಸಿ)ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದರ ಲಾಭ ಪಡೆದ ಕೆಲವು ಅಂಗಡಿಗಳ ಮಾಲೀಕರು ಎಂಆರ್‌ಪಿ ದರದ ಮೇಲೆ ಶೇ. 14ರಿಂದ ಶೇ. 30ರಷ್ಟು ದುಪ್ಪಟ್ಟು ದರ ಪಡೆದು ಮದ್ಯ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. 350 ರೂ. ಮದ್ಯವನ್ನು 400 ರೂ.ಗೆ, 145 ರೂ. ಬಿಯರ್ ಬಾಟಲ್‌ಅನ್ನು 175 ರೂ.ಗೆ, 180 ರೂ. ದರದ ಮದ್ಯವನ್ನು 220 ರೂ. ಮತ್ತು 50 ರೂ. ಮದ್ಯವನ್ನು 70 ರೂ.ಗೆ ಮಾರಾಟ ಮಾಡಲಾಗಿದೆ ಎನ್ನಲಾಗಿದೆ.

ಇದರ ನಡುವೆಯೂ ಮದ್ಯಪ್ರಿಯರು ದರವನ್ನೂ ಲೆಕ್ಕಿಸದೆ ನಿಗದಿತ ದರಕ್ಕಿಂತ ಹೆಚ್ಚು ಹಣ ಪಾವತಿಸಿ ಮದ್ಯ ಖರೀದಿಸಿದ್ದಾರೆ. ಈ ಬಗ್ಗೆ ಅಬಕಾರಿ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಮದ್ಯದಂಗಡಿ ಮಾಲೀಕರು ಹೆಚ್ಚು ಹಣ ಪಡೆದು ಮದ್ಯ ಮಾರಾಟ ಮಾಡಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ.

ಪ್ರಸ್ತುತ ಸರ್ಕಾರ ಎಂಆರ್‌ಪಿ ಮೇಲೆ ಶೇ. 6ರಷ್ಟು ಹೆಚ್ಚುವರಿ ದರ ಪಡೆಯುವಂತೆ ಆದೇಶಿಸಿದೆ. ಆ ದರಕ್ಕೆ ಅನುಗುಣವಾಗಿ ಮದ್ಯದಂಗಡಿ ಮಾಲೀಕರು ಮದ್ಯ ಮಾರಾಟ ಮಾಡಬೇಕು. ನಿಗದಿಗಿಂತ ಹೆಚ್ಚುವರಿ ದರ ಪಡೆದರೆ ಅಂತಹ ಮಳಿಗೆ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.