ಹಾಸನ: ಹಾಸನದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಹಾವಳಿ ಹೆಚ್ಚಾಗುತ್ತಿದೆ. ಇಂದು ಸಹ ಸಾವಿರ ಗಡಿ ದಾಟಿ ಪ್ರಕರಣಗಳು ದಾಖಲಾಗಿದೆ. ಇಂದು ಬೆಳಗ್ಗೆ 6-9 ಗಂಟೆಯ ತನಕ ವ್ಯಾಪಾರ ವಹಿವಾಟು ಜೋರಾಗಿತ್ತು. ಸಾಮಾಜಿಕ ಅಂತರ ಮರೆತು ಜನರು ಓಡಾಟ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಕೊರೊನಾ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಮೂರು ದಿನದ ನಂತರ ಮಾರುಕಟ್ಟೆ ಓಪನ್ ಆಗಿದ್ದರಿಂದ ಸರಿಯಾದ ಸಾಮಾಜಿಕ ಅಂತರವನ್ನು ಕಾಪಾಡದೇ ವ್ಯಾಪಾರ - ವಹಿವಾಟಿನಲ್ಲಿ ಜನರು ಬ್ಯುಸಿಯಾಗಿದ್ದರು.
ಈ ನಿಟ್ಟಿನಲ್ಲಿ ಹಾಸನ ನಗರ ಠಾಣೆಯ ಪೊಲೀಸರು ಭಿತ್ತಿ ಪತ್ರದ ಹಲಗೆಯನ್ನು ಹಿಡಿದು ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಹಾಸನದ ಎನ್.ಆರ್.ವೃತ್ತದಲ್ಲಿ ಪಿಎಸ್ಐ ಅಭಿಜಿತ್ ನೇತೃತ್ವದಲ್ಲಿ ವಿವಿಧ ಅರಿವು ಮೂಡಿಸು ಬರಹಗಳನ್ನು ಹಿಡಿದು ಜನಜಾಗೃತಿ ಮೂಡಿಸಿದರು. ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿ ಎಂದು ಕೈಯಲ್ಲಿ ಬೋರ್ಡ್ ಹಿಡಿದು ಜಾಗೃತಿ ಮೂಡಿಸಿದರು.
ಬಳಿಕ ಕೆಲವು ಪೊಲೀಸರು ಮಾಸ್ಕ್, ಸ್ಯಾನಿಟೈಸರ್ ಬಳಸುವ ಜೊತೆಗೆ ಸಾಮಾಜಿಕ ಅಂತರವನ್ನು ಕಾಪಾಡುವ ಪ್ರಾತ್ಯಕ್ಷಿಕೆಯ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ಮಾಡಿದರು.
ಇದನ್ನೂ ಓದಿ: ಜಾರಕಿಹೊಳಿ ಸಿಡಿ ಕೇಸ್ : ನ್ಯಾಯಸಮ್ಮತ ತನಿಖೆಯಾಗಬೇಕು ಎಂದ ಹೈಕೋರ್ಟ್