ETV Bharat / state

ಕೊಳ್ಳುವವರಿಲ್ಲದೆ ಬಣಗುಡುತ್ತಿದೆ ಹಾಸನದ ಗಣಪತಿ ಮಾರುಕಟ್ಟೆ: ಮತ್ತೆ ಸಂಕಷ್ಟಕ್ಕೆ ಸಿಲುಕಿದ ತಯಾರಕರು - ಹಾಸನ ಗಣೇಶ ಮಾರುಕಟ್ಟೆಯಲ್ಲಿ ಕೊಳ್ಳುವವರಿಲ್ಲದೆ ಸಂಕಷ್ಟ

ಹಾಸನ ನಗರದಲ್ಲಿ ಕೊರೊನಾದಿಂದ ಗಣೇಶ ಹಬ್ಬಕ್ಕೆ ಕರಿಛಾಯೆ ಆವರಿಸಿದೆ. ಮಾರುಕಟ್ಟೆಗಳಲ್ಲಿ ಗಣಪತಿ ಮೂರ್ತಿಗಳನ್ನು ಕೊಳ್ಳುವವರಿಲ್ಲದೆ ಬಣಗುಡುತ್ತಿವೆ. ಇದರಿಂದ ಮೂರ್ತಿ ತಯಾರಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Hassan Ganesha Market is empty without buyer
ಕೊಳ್ಳುವವರಿಲ್ಲದೆ ಬಣಗುಡುತ್ತಿದೆ ಗಣಪತಿ ಮಾರುಕಟ್ಟೆ
author img

By

Published : Sep 9, 2021, 3:59 PM IST

ಹಾಸನ: ನಗರದಲ್ಲಿ ಗೌರಿ-ಗಣೇಶ ಹಬ್ಬಕ್ಕೆ ಕರಿಛಾಯೆ ಆವರಿಸಿದೆ. ಗಣಪತಿ ತಯಾರಕರು ಮೂರ್ತಿಗಳನ್ನು ಕೊಳ್ಳುವವರಿಲ್ಲದೆ ಈ ಬಾರಿಯೂ ಸಂಕಷ್ಟ ಎದುರಿಸುತ್ತಿದ್ದಾರೆ.

ಕಳೆದೆರಡು ವರ್ಷಗಳಿಂದ ಕೊರೊನಾ ಎಲ್ಲಾ ಕ್ಷೇತ್ರದ ಮೇಲೂ ಪರಿಣಾಮ ಬೀರಿದೆ. ಅದರಲ್ಲೂ ಗಣೇಶ ವಿಗ್ರಹ ತಯಾರಿಕಾ ಕುಟುಂಬಗಳು ಸಾಕಷ್ಟು ಸಂಕಷ್ಟ ಎದುರಿಸುತ್ತಿವೆ. ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಹಲವು ಕುಟುಂಬಗಳು ಗಣೇಶ ಮೂರ್ತಿಗಳ ತಯಾರಿಕಾ ಕಾಯಕದಲ್ಲಿ ತೊಡಗಿಕೊಂಡಿವೆ.

ಕುಟುಂಬಗಳು ಕಳೆದ ಐದಾರು ತಿಂಗಳಿನಿಂದ ಮೂರ್ತಿಗಳನ್ನು ತಯಾರಿಸಿ ಅವುಗಳನ್ನು ಮಾರಾಟ ಮಾಡಿ ಲಾಭ ಗಳಿಸುವ ವೇಳೆ ಮತ್ತೆ ಕೊರೊನಾ ಬಿಕ್ಕಟ್ಟು ಎದುರಾಗಿದೆ. ಇದರಿಂದ ಸರಿಯಾದ ವ್ಯಾಪಾರವಿಲ್ಲದೆ ಸಂಕಷ್ಟಕ್ಕೆ ಸಿಲುಕಿವೆ.

ಸರ್ಕಾರಗಳು ಮತ್ತು ಸಚಿವರುಗಳು ತಮ್ಮ ಮನೆಯಲ್ಲಿ ಸಾವಿರಾರು ಜನರನ್ನು ಸೇರಿಸಿ ಖಾಸಗಿ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಮಾಡುತ್ತಾರೆ. ಆದರೆ ಗಣೇಶ ಹಬ್ಬದಂತಹ ಕಾರ್ಯಕ್ರಮಗಳಿಗೆ ಸರ್ಕಾರ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ನಾವು ಗಣಪತಿ ಮೂರ್ತಿಗಳನ್ನು ಮಾರಾಟ ಮಾಡಲು ಸಿದ್ಧರಿದ್ದೇವೆ. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಜಿಟಿ ಜಿಟಿ ಮಳೆಯಾಗುತ್ತಿದೆ. ಇದರಿಂದ ರಸ್ತೆಗಳು ಕೆಸರುಗದ್ದೆಯಂತಾಗಿವೆ. ಹೀಗಾಗಿ ಕೊಳ್ಳುವವರಿಲ್ಲದೆ ಹಾಕಿದ ಬಂಡವಾಳವೂ ಕೂಡ ಕೈ ತಪ್ಪಿಹೋಗುತ್ತಿದೆ. ಸರ್ಕಾರ ಹಬ್ಬ-ಹರಿದಿನಗಳ ಸಂದರ್ಭದಲ್ಲಿ ನಿಯಮಗಳನ್ನು ಸಡಿಲಗೊಳಿಸಿದರೆ ಸೂಕ್ತ ಎಂಬುದು ವ್ಯಾಪಾರಸ್ಥರ ಆಶಯವಾಗಿದೆ.

ಗಣೇಶ ಮೂರ್ತಿ ತಯಾರಕರು ಕಳೆದೆರಡು ವರ್ಷಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದುವರೆಗೂ ಸರ್ಕಾರ ಇವರಿಗೆ ಯಾವುದೇ ಪ್ಯಾಕೇಜ್ ಘೋಷಣೆ ಮಾಡಿಲ್ಲ. ಹಾಗಾಗಿ ತಯಾರಕರಿಗೆ ಅನುವಾಗುವಂತೆ ಅನುದಾನ ನೀಡಬೇಕು. ಇದರ ಜೊತೆಗೆ ಇನ್ನಾದರೂ ಸರ್ಕಾರ ಸಂಪ್ರದಾಯಿಕ ಹಬ್ಬಗಳಿಗೆ ನಿಯಮಗಳನ್ನು ರೂಪಿಸದೆ ಆಚರಿಸಲು ಅನುವು ಮಾಡಿಕೊಟ್ಟರೆ ಒಳಿತು ಎನ್ನುವುದು ವ್ಯಾಪಾರಿಗಳ ಆಗ್ರಹವಾಗಿದೆ.

ಓದಿ: ಗಣೇಶೋತ್ಸವ ಆಚರಣೆಗೆ ವಿನಾಯಿತಿ ಕೋರಿಕೆ: ಸಂಜೆ ಸಭೆ ನಡೆಸಿ ನಿರ್ಧಾರ ಪ್ರಕಟಿಸಲಿರುವ ಸಿಎಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.