ETV Bharat / state

ಹಾಸನ: ರಸ್ತೆಗೆ ಕ್ಯಾನ್​ಗಳನ್ನು ಎಸೆದು, ಅಪಾರ ಪ್ರಮಾಣದ ಹಾಲು ಸುರಿದು ಪ್ರತಿಭಟಿಸಿದ ರೈತರು..

Farmers protest : ಹಡೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಾರ್ಯದರ್ಶಿ ವಿರುದ್ಧ ಶುಕ್ರವಾರ ರಾತ್ರಿ ಹಾಲು ಉತ್ಪಾದಕರು, ರೈತರು ರಸ್ತೆಗೆ ಹಾಲು ಸುರಿದು ಪ್ರತಿಭಟನೆ ನಡೆಸಿದರು.

Protest by farmers
ಹಾಸನ: ರಸ್ತೆ ಹಾಲು ಸುರಿದ ಪ್ರತಿಭಟನೆ ನಡೆಸಿದ ರೈತರು..
author img

By ETV Bharat Karnataka Team

Published : Nov 4, 2023, 8:14 AM IST

Updated : Nov 4, 2023, 11:07 AM IST

ರಸ್ತೆಗೆ ಹಾಲು ಸುರಿದು ಪ್ರತಿಭಟನೆ

ಶ್ರವಣಬೆಳಗೊಳ (ಹಾಸನ): ಹಡೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಹಾಲು ಉತ್ಪಾದಕರು, ರೈತರು ಸುಮಾರು 1,600 ಲೀಟರ್​ಗೂ ಹೆಚ್ಚು ಹಾಲು ನೆಲಕ್ಕೆ ಸುರಿದು ಸಂಘದ ಕಾರ್ಯದರ್ಶಿ ವಿರುದ್ಧ ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಿದರು.

23 ವರ್ಷಗಳ ಹಿಂದೆಯೇ ಆರಂಭಗೊಂಡಿರುವ ಈ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘಕ್ಕೆ ಹಲವು ವರ್ಷಗಳ ಕಾಲ ಹಡೇನಹಳ್ಳಿ ಗ್ರಾಮದ ಜಯಂತಿ ಎಂಬುವರು ಕಾರ್ಯದರ್ಶಿಯಾಗಿದ್ದರು. ಇತ್ತೀಚೆಗೆ ಹೊಸ ಆಡಳಿತ ಮಂಡಳಿ ರಚನೆಯಾಗಿದ್ದು, ಜಯಂತಿ ಅವರಿಗೆ ಖರ್ಚು ವೆಚ್ಚದ ವರದಿಯನ್ನು ಕೇಳಲಾಗಿದೆ. ಆದರೆ, ಕಾರ್ಯದರ್ಶಿ ಪ್ರತಿಕ್ರಿಯಿಸಲಿಲ್ಲ ಎಂದು ಸಂಘದ ಸದಸ್ಯರು, ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಕೊಟ್ಟಿದ್ದಾರೆ. ಲೆಕ್ಕ ಪತ್ರದಲ್ಲಿ ವ್ಯತ್ಯಾಸ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಆಡಳಿತ ಮಂಡಳಿಯಿಂದ ಅವರನ್ನು ಅಮಾನತು ಮಾಡಲು ಸಂಘದ ಅಧ್ಯಕ್ಷರು ಹಾಗೂ ನಿರ್ದೇಶಕರು ಶಿಫಾರಸು ಮಾಡಿದ್ದಾರೆ.

ರೈತರಿಂದ ರಸ್ತೆ ಹಾಲು ಸುರಿದು ಆಕ್ರೋಶ: ಕಳೆದ ಇಪ್ಪತ್ತು ದಿನಗಳಿಂದ ಆರೋಪ ಪ್ರತ್ಯಾರೋಪಗಳು ಕೇಳಿ ಬರುತ್ತಿದ್ದವು. ನಿನ್ನೆ (ಶುಕ್ರವಾರ) ಸಂಜೆ ಹಾಸನ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಗೊಂದಲ ಬಗೆಹರಿಯುವವರೆಗೂ ಹಾಲು ಸ್ವೀಕರಿಸದಂತೆ ನೋಟಿಸ್ ನೀಡಿರುವುದರಿಂದ ಬೇಸತ್ತ ರೈತರು ಹಾಲಿನ ಡೇರಿ ಮುಂದೆ ಪ್ರತಿಭಟನೆ ನಡೆಸಿ, ನೆಲಕ್ಕೆ ಅಪಾರ ಪ್ರಮಾಣದ ಹಾಲು ಸುರಿದು ಆಕ್ರೋಶ ವ್ಯಕ್ತಪಡಿಸಿದರು.

ಎರಡು‌ ದಿನಗಳಿಂದ ಉತ್ಪಾದಕರು, ರೈತರು ಪ್ರಧಾನ ಡೈರಿಗೆ ಹಾಲು ಕಳಿಸುತ್ತಿದ್ದರು. ಆದ್ರೆ ಹಾಲು ಪಡೆಯದಂತೆ ಪ್ರಧಾನ ಡೈರಿ ಮೇಲ್ವಿಚಾರಕಿ ಮಂಜುಶ್ರೀ ಅವರು ಸಂಘಕ್ಕೆ ಪತ್ರ ಬರೆದಿದ್ದರು. ಉತ್ಪಾದಕರಿಂದ ಹಾಲು ಪಡೆಯಲು ನಿರಾಕರಿಸಿದ ಹಿನ್ನೆಲೆ ಕಾರ್ಯದರ್ಶಿ, ಮೇಲ್ವಿಚಾರಕಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಹಾಲಿನ ಕ್ಯಾನ್‌ಗಳನ್ನು ಎಸೆದು ಕಿಡಿಕಾರಿದ ರೈತರು, ರಸ್ತೆಗೆ ಹಾಲು ಚೆಲ್ಲಿದರು. ಈ ವೇಳೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಶ್ರವಣಬೆಳಗೊಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಆಶಾ ಪ್ರತಿಕ್ರಿಯಿಸಿ, ''ಕಾರ್ಯದರ್ಶಿ ಅವರು ಲೆಕ್ಕಪತ್ರದ ಪುಸ್ತಕವನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಕಚೇರಿಗೆ ಪುಸ್ತಕ ತರುತ್ತಿಲ್ಲ. ಲೆಕ್ಕ ಕೂಡ ನೀಡಿಲ್ಲ'' ಎಂದು ತಿಳಿಸಿದರು.

ಒಕ್ಕೂಟದ ಮೇಲ್ವಿಚಾರಕರು ಸಮಸ್ಯೆ ಬಗೆಹರಿಯುವವರೆಗೆ ಪಕ್ಕದ ಗ್ರಾಮಗಳಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲನ್ನು ಹಾಕುವಂತೆ ನೋಟಿಸ್ ನೀಡಿರುವುದರಿಂದ ಪರಿಸ್ಥಿತಿ ಬಿಗಡಾಯಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ಪ್ಯಾಲೆಸ್ಟೈನ್​ ಪರ ಪ್ರತಿಭಟನೆಗೆ ಅನುಮತಿ ನಿರಾಕರಣೆ; ಸರ್ಕಾರದ ವಿರುದ್ಧ ಪ್ರಗತಿಪರರ ಅಭಿಯಾನ

Last Updated : Nov 4, 2023, 11:07 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.