ಹಾಸನ: ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿದೆ. ಆದರೆ ರೈತರಿಗೆ ಗೊಬ್ಬರ ಕೊಳ್ಳಲು ಅವಕಾಶವಿಲ್ಲ. ಜಿಲ್ಲಾಡಳಿತದ ಈ ನಿಯಮದ ವಿರುದ್ಧ ರೈತನೋರ್ವ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಮದ್ಯದ ಮಾರಾಟಕ್ಕೆ ಅನುಮತಿ ನೀಡಿ, ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡದಿರುವುದು ಎಷ್ಟು ಸರಿ? ರೈತರಿಗೆ ಮುಖ್ಯವಾಗಿ ಬೇಕಾಗಿರುವ ಗೊಬ್ಬರ, ಬಿತ್ತನೆ ಬೀಜದ ಅಂಗಡಿಗಳ ಬಾಗಿಲು ಮುಚ್ಚಲಾಗಿದೆ. ಆದರೆ ವೈನ್ ಶಾಪ್ಗಳನ್ನು ರಾಜಾರೋಷವಾಗಿ ತೆರೆಯಲು ಅವಕಾಶ ನೀಡಲಾಗಿದೆ ಎಂದು ಚನ್ನರಾಯಪಟ್ಟಣದ ರೈತ ಸತ್ತೀಗೌಡ ಎಂಬುವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ನಿಮ್ಮದು ಅದೆಂಥ ಸರ್ಕಾರ, ನಿಮಗೆ ಮಾನ ಮರ್ಯಾದೆ ಇಲ್ವಾ? ಮುಂಗಾರು ಸಮಯದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಿ, ಕೃಷಿ ಸಾಮಗ್ರಿಗಳ ಅಂಗಡಿ ಮುಚ್ಚಿಸಿದ್ದೀರಲ್ಲ, ನಿಮಗೆ ನಾಚಿಕೆಯಾಗಬೇಕು ರೈತ ಸತ್ತೀಗೌಡ ಆಕ್ರೋಶ ಹೊರಹಾಕಿದ್ದಾರೆ.