ETV Bharat / state

ಹಾಸನ ಡಿಸಿಸಿ ಬ್ಯಾಂಕ್​​ನ 4 ಕ್ಷೇತ್ರಗಳಿಗೆ ಇಂದು ಮತದಾನ: 15 ವರ್ಷದ ಬಳಿಕ ರಂಗೇರಿದ ಚುನಾವಣೆ

ಸಕಲೇಶಪುರದ ರೆಸಾರ್ಟ್‌ನಲ್ಲಿರುವ 28ಕ್ಕೂ ಅಧಿಕ ಮತದಾರರು ನೇರವಾಗಿ ಮತಗಟ್ಟೆಗೆ ಬರಲಿದ್ದಾರೆ. ಕಳೆದ 15 ವರ್ಷಗಳಿಂದ ಎಚ್‌ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ನೇಮಕ ಅವಿರೋಧವಾಗಿತ್ತು. ಆದರೆ, ಶಾಸಕ ಪ್ರೀತಂ ಜೆ. ಗೌಡ ತಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಆಯ್ಕೆ ಪ್ರಕ್ರಿಯೆ ಈ ಬಾರಿ ರಂಗೇರಿದೆ.

hassan dcc bank
ಹಾಸನ ಡಿಸಿಸಿ ಬ್ಯಾಂಕ್
author img

By

Published : Sep 25, 2020, 3:35 AM IST

ಹಾಸನ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಚುನಾವಣೆಯು ಶುಕ್ರವಾರ (ಸೆ. 25) ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ.

ಯಾವುದೇ ಆಮಿಷಕ್ಕೆ ಒಳಗಾಗದಂತೆ ತಡೆಯಲು ಜೆಡಿಎಸ್ ಅಭ್ಯರ್ಥಿಗಳು ಮತದಾರರನ್ನು ರೆಸಾರ್ಟ್‌ನಲ್ಲಿ ಇರಿಸಿದ್ದಾರೆ. ಶಾಂತಿಯುತವಾಗಿ ಮತದಾನ ನಡೆಸಲು ಜಿಲ್ಲಾಧಿಕಾರಿ ಆರ್. ಗಿರೀಶ್ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಸಕಲೇಶಪುರದ ರೆಸಾರ್ಟ್‌ನಲ್ಲಿರುವ 28ಕ್ಕೂ ಅಧಿಕ ಮತದಾರರು ನೇರವಾಗಿ ಮತಗಟ್ಟೆಗೆ ಬರಲಿದ್ದಾರೆ. ಕಳೆದ 15 ವರ್ಷಗಳಿಂದ ಎಚ್‌ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ನೇಮಕ ಅವಿರೋಧವಾಗಿ ನಡೆದುಕೊಂಡು ಬಂದಿತ್ತು. ಆದರೆ, ಈ ವರ್ಷ ಶಾಸಕ ಪ್ರೀತಂ ಜೆ. ಗೌಡ ಅವರು ತಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಆಯ್ಕೆ ಪ್ರಕ್ರಿಯೆ ಈ ಬಾರಿ ರಂಗೇರಿದೆ.

ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರಾಗಿ ಜೆಡಿಎಸ್ ಬೆಂಬಲಿತ 9 ಅಭ್ಯರ್ಥಿಗಳು ಅವಿರೋಧ ಆಯ್ಕೆ ಆಗಿದ್ದಾರೆ. ಉಳಿದ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. ಆ 4 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲು ಜೆಡಿಎಸ್ ಕಾರ್ಯತಂತ್ರ ಹೆಣೆದಿದೆ. ಮೊದಲ ಬಾರಿಗೆ ಬ್ಯಾಂಕ್ ಆಡಳಿತ ಮಂಡಳಿ ಪ್ರವೇಶಿಸಲು ಬಿಜೆಪಿ ಸಹ ಮುಂದಾಗಿದೆ.

ಎಚ್‌ಡಿಸಿಸಿ ಬ್ಯಾಂಕ್‌ನಲ್ಲಿ ಜೆಡಿಎಸ್ ಪ್ರಾಬಲ್ಯ ಹೆಚ್ಚಿದೆ. ಆದರೆ ಬಿಜೆಪಿಯ ಶಾಸಕ ಪ್ರೀತಂ ಜೆ. ಗೌಡ ಆಸಕ್ತಿ ತೋರಿರುವುದು ವಿಶೇಷ. ಜೆಡಿಎಸ್‌ನ ನಾಲ್ಕು ಅಭ್ಯರ್ಥಿಗಳು ಮತದಾರರನ್ನು ಒಂದು ವಾರದಿಂದ ರೆಸಾರ್ಟ್‌ನಲ್ಲಿ ಇರಿಸಿ ಯಾವುದೇ ಆಮಿಷಗಳಿಗೆ ಬಲಿಯಾಗದಂತೆ ನೋಡಿಕೊಂಡಿದ್ದಾರೆ.

ಸಹಕಾರಿ ಸಂಘಗಳ ಕ್ಷೇತ್ರದಿಂದ ಮಾಜಿ ನಿರ್ದೇಶಕ ಬಿದಿರಕರೆ ಜಯರಾಂ ವಿರುದ್ಧ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಪುಟ್ಟರಾಜೇಗೌಡ ಬಿಜೆಪಿ ಬೆಂಬಲಿತರಾಗಿ ಕಣಕ್ಕಿಳಿದಿದ್ದಾರೆ (45 ಮತ).

ಕ್ರೆಡಿಟ್ ಕೋ ಆಪರೇಟಿವ್ ಸಹಕಾರ ಸಂಘಗಳ ಕ್ಷೇತ್ರದಿಂದ ಮತ್ತೊಬ್ಬ ಮಾಜಿ ನಿರ್ದೇಶಕ ಗಿರೀಶ್ ಚನ್ನವೀರಪ್ಪ ಕಣದಲ್ಲಿದ್ದು, ಇವರ ವಿರುದ್ಧ ಬಿಜೆಪಿ ಬೆಂಬಲಿತರಾಗಿ ನಾಗೇಶ್ ಸ್ಪರ್ಧೆಯಲ್ಲಿದ್ದಾರೆ (42 ಮತ). ಹಾಸನ ಕೃಷಿ ಪತ್ತಿನ ಸಹಕಾರ ಸಂಘದಿಂದ ವಿಧಾನ ಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ ಸ್ಪರ್ಧಿಸಿದ್ದು, ಅವರ ವಿರುದ್ಧ ಬಿಜೆಪಿ ಅಧಿಕಾರದಲ್ಲಿರುವ ಉಗನೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ದೇವೇಂದ್ರ ಸ್ಪರ್ಧೆ ಮಾಡಿದ್ದಾರೆ (ಒಟ್ಟು ಮತ 45).

ಅರಸೀಕೆರೆ ವ್ಯವಸಾಯೋತ್ಪನ್ನ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಂಡಿಗೌಡ್ರ ರಾಜಣ್ಣ ಕಣದಲ್ಲಿದ್ದು, ಅವರ ವಿರುದ್ಧ ಬಿಜೆಪಿ ಬೆಂಬಲಿತರಾಗಿ ವಕೀಲ ಮೋಹನ್ ಕುಮಾರ್ ಸ್ಪರ್ಧೆ ಮಾಡಿದ್ದಾರೆ (ಮತ 28).

ದೇವೇಗೌಡರ ಕುಡಿ ಸೂರಜ್ ರಾಜಕೀಯಕ್ಕೆ:

ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಪುತ್ರ ಡಾ. ಸೂರಜ್ ರೇವಣ್ಣ ಹೊಳೆನರಸೀಪುರ ಕೃಷಿ ಪತ್ತಿನ ಸಹಕಾರ ಸಂಘದಿಂದ ಅವಿರೋಧವಾಗಿ ಆಯ್ಕೆಯಾಗಿ ರಾಜಕೀಯ ಅಖಾಡಕ್ಕೆ ಧುಮುಕಿದ್ದರು.

ಚನ್ನರಾಯಪಟ್ಟಣ ವಿಎಸ್‌ಎಸ್‌ಎನ್‌ನಿಂದ ಜೆಡಿಎಸ್ ಶಾಸಕ ಸಿ.ಎನ್. ಬಾಲಕೃಷ್ಣ, ಅರಕಲಗೂಡು ಹಾಲು ಉತ್ಪಾದಕರ ಸಹಕಾರ ಸಂಘದ ಕ್ಷೇತ್ರದಿಂದ ಹೊನ್ನವಳ್ಳಿ ಸತೀಶ್, ಬೇಲೂರು ವಿಎಸ್‌ಎಸ್‌ಎನ್‌ನಿಂದ ಎಂ.ಎ. ನಾಗರಾಜ್, ಟಿಎಪಿಸಿಎಂಸ್ ಕ್ಷೇತ್ರದಿಂದ ದುದ್ದ ಹೋಬಳಿ ಚನ್ನೇಗೌಡ, ಹಾಲು ಉತ್ಪಾದಕರ ಸಹಕಾರ ಸಂಘದ ಕ್ಷೇತ್ರದಿಂದ ಮಾಜಿ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್ ಮತ್ತು ಜಿಪಂ ಮಾಜಿ ಸದಸ್ಯ ಪಾಪಣ್ಣಿ (ದೇವೇಗೌಡ), ಗ್ರಾಹಕರ ಕ್ಷೇತ್ರದಿಂದ ಹೊನ್ನಶೆಟ್ಟಿಹಳ್ಳಿ ಪುಟ್ಟಸ್ವಾಮಿಗೌಡ, ಆಲೂರು, ಸಕಲೇಶಪುರ ವ್ಯವಸಾಯೋತ್ಪನ್ನ ಸಹಕಾರಿ ಕ್ಷೇತ್ರದಿಂದ ಜಗದೀಶ್ ಅವಿರೋಧ ಆಯ್ಕೆಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.