ಹಾಸನ: ಬ್ಯಾಂಕ್ಗೆ ಹಣ ಕಟ್ಟದೆ 27 ಸಾವಿರ ರೂ. ವಂಚನೆ ಮಾಡಿ, ಬಳಿಕ ಸಂಬಳ ಕೇಳಲು ಬಂದಾಗ ಖದೀಮ ಸಿಕ್ಕಿಬಿದ್ದಿರುವ ಘಟನೆ ಕಾಸ್ಮೋಪಾಲಿಟನ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಸೋಸಿಯೇಷನ್ನ ಬಾರ್ ವಿಭಾಗದಲ್ಲಿ ನಡೆದಿದೆ.
ಶಶಿಧರ್ ಹಣ ವಂಚಿಸಿದ ವ್ಯಕ್ತಿ. ನಗರದ ರಿಂಗ್ ರಸ್ತೆ, ಗುಂಡೇಗೌಡನಕೊಪ್ಪಲು ಬಳಿ ಇರುವ ಬಾರ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಈತನಿಗೆ ಮಾರ್ಚ್ 12ರಂದು ಬಾರಿನ ಹಣವನ್ನು ಬ್ಯಾಂಕ್ಗೆ ಕಟ್ಟಲು 30,260 ರೂ. ನೀಡಲಾಗಿತ್ತು. ಆದರೆ ಆತ ಕೇವಲ 3,260 ರೂ.ಗಳನ್ನು ಮಾತ್ರ ಬ್ಯಾಂಕ್ಗೆ ಕಟ್ಟಿ ಉಳಿದ ಹಣವನ್ನು ವಂಚನೆ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಮತ್ತೊಂದು ಬ್ಯಾಂಕ್ನ ಚಲನ್ ಬರೆದು ಮೋಸ ಮಾಡಿದ್ದಾನೆ. ಇನ್ನು ಬ್ಯಾಂಕ್ಗೆ ಜಮೆಯಾದ ಹಣದ ಬಗ್ಗೆ ಪರಿಶೀಲನೆ ನಡೆಸಿದಾಗ 27 ಸಾವಿರ ರೂ.ಗಳು ಕಡಿಮೆ ಇರುವುದು ಬೆಳಕಿಗೆ ಬಂದಿತ್ತು.
ಬಳಿಕ ಬ್ಯಾಂಕ್ನ ಸಿಸಿ ಕ್ಯಾಮರಾದಲ್ಲಿ ದೃಶ್ಯಗಳನ್ನು ಪರಿಶೀಲಿಸಿದಾಗ, ಶಶಿಧರ್ ಬ್ಯಾಂಕ್ನ ಚಲನ್ ತೆಗೆದುಕೊಂಡು ತಾನೇ ಬರೆಯುತ್ತಿರುವುದು ಕಂಡುಬಂದಿದೆ. ಶಶಿಧರ್ ಕಳೆದ ಮೂರು ತಿಂಗಳಿನಿಂದ ತಲೆಮರೆಸಿಕೊಂಡು ಬೇರೆ ಕಡೆ ಕೆಲಸ ಮಾಡುತ್ತಿದ್ದನಂತೆ. ಅಲ್ಲಿ ತಿಂಗಳ ಸಂಬಳ ಕೇಳಲು ಬಂದಾಗ ಈತ ಸಿಕ್ಕಿಬಿದ್ದಿದ್ದಾನೆ.
ತಕ್ಷಣ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಸದ್ಯ ಆತ ತಪ್ಪೊಪ್ಪಿಕೊಂಡಿದ್ದು, ಹಣವನ್ನು ಹಿಂದಿರುಗಿಸಿದ್ದಾನೆ ಎಂದು ಕಾಸ್ಮೋಪಾಲಿಟನ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಸೋಸಿಯೇಷನ್ನ ಬಾರ್ ವಿಭಾಗದ ಮ್ಯಾನೇಜರ್ ಮೂರ್ತಿ ತಿಳಿಸಿದ್ದಾರೆ.