ETV Bharat / entertainment

ಬರ್ತಡೇ ದಿನ ಕೈಯಲ್ಲಿ ರುಂಡ ಹಿಡಿದು ಬಂದ ಅನುಷ್ಕಾ ಶೆಟ್ಟಿ; 'ಘಾಟಿ' ಗ್ಲಿಂಪ್ಸ್​ ರಿಲೀಸ್​ ​ - GHAATI GLIMPSE

ಅನುಷ್ಕಾ ಶೆಟ್ಟಿ ಜನ್ಮದಿನ ಹಿನ್ನೆಲೆ ಅವರ ಮುಂದಿನ ಬಹುನಿರೀಕ್ಷಿತ 'ಘಾಟಿ' ಚಿತ್ರದ ಗ್ಲಿಂಪ್ಸ್ ಅನಾವರಣಗೊಂಡಿದೆ.

Anushka Shetty Ghaati Glimpse
ಅನುಷ್ಕಾ ಶೆಟ್ಟಿ 'ಘಾಟಿ' ಗ್ಲಿಂಪ್ಸ್​ (Photo: Film Poster)
author img

By ETV Bharat Entertainment Team

Published : Nov 7, 2024, 6:04 PM IST

ಮಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 43ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ದಕ್ಷಿಣ ಚಿತ್ರರಂಗದ ಖ್ಯಾತ ನಟಿಗೆ ಕುಟುಂಬಸ್ಥರು, ಸಿನಿ ಸ್ನೇಹಿತರು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ನಟಿಯ ಮುಂದಿನ ಬಹುನಿರೀಕ್ಷಿತ ಚಿತ್ರ ತಂಡದ ಕಡೆಯಿಂದಲೂ ಸ್ಪೆಷಲ್​ ವಿಶ್​​ ಬಂದಿದೆ. ಅಭಿಮಾನಿಗಳಿಗೆ ಬರ್ತಡೇ ಟ್ರೀಟ್​​ ಆಗಿ 'ಘಾಟಿ' ಗ್ಲಿಂಪ್ಸ್ ಅನಾವರಣಗೊಂಡಿದೆ.

ಅನುಷ್ಕಾ ಶೆಟ್ಟಿ ಅಭಿನಯದ ಮುಂದಿನ ಸಿನಿಮಾ 'ಘಾಟಿ'. ನಟಿಯ ಹುಟ್ಟುಹಬ್ಬ ಹಿನ್ನೆಲೆ, ಮೊದಲು ಪೋಸ್ಟರ್​ ಅನಾವರಣಗೊಂಡಿತ್ತು. ಇದೀಗ ಗ್ಲಿಂಪ್ಸ್​​ ರಿಲೀಸ್​ ಆಗಿದೆ. ಕ್ರಿಶ್ ಜಗರ್ಲಮುಡಿ ನಿರ್ದೇಶನದ ಘಾಟಿ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಸಖತ್ ರಗಡ್​ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಅನಾವರಣಗೊಂಡಿರುವ ಪೋಸ್ಟರ್, ಗ್ಲಿಂಪ್ಸ್​​ ಇದರ ಸುಳಿವು ಬಿಟ್ಟುಕೊಟ್ಟಿದೆ. 2010ರ ಸೂಪರ್​ ಹಿಟ್​ 'ವೇದಂ' ಸಿನಿಮಾ ಬಳಿಕ ಕ್ರಿಶ್ ಜಗರ್ಲಮುಡಿ ಮತ್ತು ಅನುಷ್ಕಾ ಶೆಟ್ಟಿ ಕಾಂಬಿನೇಶನ್​ನಲ್ಲಿ ಬರುತ್ತಿರುವ ಎರಡನೇ ಚಿತ್ರವಿದು. ಅಲ್ಲದೇ, ಯುವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಅನುಷ್ಕಾ ಅವರದ್ದು ನಾಲ್ಕನೇ ಚಿತ್ರ.

ಇಂದು ಅನಾವರಣಗೊಂಡಿರುವ ಗ್ಲಿಂಪ್ಸ್​ನಲ್ಲಿ ಅನುಷ್ಕಾರನ್ನು ಭಯಾನಕ ನೋಟದಲ್ಲಿ ತೋರಿಸಲಾಗಿದೆ. ರಕ್ತಸಿಕ್ತ ಅವತಾರದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ತಲೆ ಮತ್ತು ಕೈಗಳಲ್ಲಿ ರಕ್ತದ ಕಲೆಗಳಿದ್ದು, ನೋಟ ಬಹಳ ತೀವ್ರವಾಗಿದೆ. ಆಕ್ರೋಶಭರಿತ ಕಣ್ಣುಗಳು, ಅಂದ ಹೆಚ್ಚಿಸುವ ಕಾಡಿಗೆ, ಮೂಗುತಿಗಳು, ಬಿಂದಿ, ಕಾಲ್ಗಡ್ಗ 'ಘಾಟಿ' ಅನುಷ್ಕಾ ಶೆಟ್ಟಿಯ ತೀವ್ರತರನಾದ​ ರೂಪವನ್ನು ಗಮನ ಸೆಳೆಯುವಂತೆ ಮಾಡಿದೆ. ಧೂಮಪಾನ ಮಾಡುತ್ತಾ ನಟಿಯ ಎಂಟ್ರಿ ಸಕತ್ ಪವರ್​ಫುಲ್​​ ಆಗಿದೆ. ವ್ಯಕ್ತಿಯ ರುಂಡ ಕತ್ತರಿಸಿದ ಶೈಲಿ ಕೂಡಾ ಭಯಾನಕವಾಗಿ ಮೂಡಿಬಂದಿದೆ. ಈ ರಕ್ತಸಿಕ್ತ, ಕಚ್ಛಾ, ಮೊದಲ ನೋಟವು 'ಘಾಟಿ' ಒಂದು ಕ್ರೂರ, ಅಪಾಯಕಾರಿ ಜಗತ್ತನ್ನು ತೆರೆಮೇಲೆ ತೋರಿಸಲಿದೆ ಎಂಬ ಸುಳಿವನ್ನು ಬಿಟ್ಟುಕೊಟ್ಟಿದೆ. ಅಂತಹ ಕ್ರೂರ ಜಗತ್ತಿನಿಂದ ಬದುಕುಳಿಯಲು ಜನ ಇಚ್ಛಿಸುತ್ತಾರಾ? ಅನುಷ್ಕಾ ಶೆಟ್ಟಿ ಕಿಡಿಗೇಡಿಗಳಿಂದ ಜನರ ರಕ್ಷಣೆಗೆ ನಿಂತರೇ? ಅಥವಾ ಅವರ ಪಾತ್ರವೇ ಭಯಾನಕವಾದದ್ದಾ? ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಇದನ್ನೂ ಓದಿ: ಸಲ್ಮಾನ್​ ಬೆನ್ನಲ್ಲೇ ಸೂಪರ್​ ಸ್ಟಾರ್ ಶಾರುಖ್​ ಖಾನ್​ಗೂ ಕೊಲೆ ಬೆದರಿಕೆ: ಎಫ್​​ಐಆರ್​ ದಾಖಲು

'ಘಾಟಿ' ಆ್ಯಕ್ಷನ್​​ ಥ್ರಿಲ್ಲರ್ ಆಗಿ ಮೂಡಿಬರಲಿದೆ. ಪ್ರೇಕ್ಷಕರಿಗೆ ಭಯಾನಕ ಅಂಶಗಳ ಜೊತೆಗೆ ಭಾವನಾತ್ಮಕ ಪ್ರಯಾಣವೊಂದನ್ನು ಒದಗಿಸುವ ಭರವಸೆ ನೀಡಿದೆ. ಮನೋಜ್ ರೆಡ್ಡಿ ಕಾಟಸಾನಿ ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ನಾಗವೆಲ್ಲಿ ವಿದ್ಯಾ ಸಾಗರ್ ಸಂಗೀತ ಒದಗಿಸಲಿದ್ದಾರೆ. ತೋಟ ಥಾರಣಿ ಕಲಾ ನಿರ್ದೇಶಕರಾಗಿ ಚಿತ್ರತಂಡದ ಭಾಗವಾಗಿದ್ದಾರೆ. ಚಾಣಕ್ಯ ರೆಡ್ಡಿ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಸಾಯಿ ಮಾಧವ್ ಬುರ್ರಾ ಅವರ ಡೈಲಾಗ್ಸ್​​ ಇರಲಿದೆ. ಮುಖ್ಯವಾಗಿ, ಚಿಂತಕಿಂಡಿ ಶ್ರೀನಿವಾಸ್ ರಾವ್ ಸ್ಟೋರಿ ಟೀಂನಲ್ಲಿದ್ದಾರೆ.

ಇದನ್ನೂ ಓದಿ: ಅನಾರೋಗ್ಯ: ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಶಿವರಾಜ್​ಕುಮಾರ್​​

ಪ್ರಸ್ತುತ ಘಾಟಿ ಶೂಟಿಂಗ್​​ ಫೈನಲ್​ ಸ್ಟೇಜ್​ನಲ್ಲಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆ ಸೇರಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಬಿಗ್​ ಬಜೆಟ್​​ನಲ್ಲಿ ಮೂಡಿ ಬರುತ್ತಿರುವ ಘಾಟಿ ತಾಂತ್ರಿಕವಾಗಿ ಉನ್ನತ ಮಟ್ಟದಲ್ಲಿರಲಿದೆ. ಆ್ಯಕ್ಷನ್-ಪ್ಯಾಕ್ಡ್ ಅವತಾರದಲ್ಲಿ ಅನುಷ್ಕಾ ಶೆಟ್ಟಿ ಸ್ಕ್ರೀನ್​ಗೆ ಮರಳಲಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರಮಂದಿರ ಪ್ರವೇಶಿಸೋ ನಿಟ್ಟಿನಲ್ಲಿ ಘಾಟಿ ತಂಡ ಕೆಲಸ ಮಾಡುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.