ETV Bharat / state

ಹಾಸನಾಂಬೆ ದರ್ಶನಕ್ಕೆ ತೆರೆ: ಮುಂದಿನ ವರ್ಷದವರೆಗೆ ಗರ್ಭಗುಡಿ ಬಾಗಿಲು ಬಂದ್ - ಹಾಸನಾಂಬೆ ದರ್ಶನ ನ್ಯೂಸ್

ಇಂದು ಮಧ್ಯಾಹ್ನ 1 ಗಂಟೆ 5 ನಿಮಿಷಕ್ಕೆ ಜಿಲ್ಲಾಡಳಿತದ ಸಮ್ಮುಖದಲ್ಲಿ ಹಾಸನಾಂಬೆ ದೇವಿಯ ಗರ್ಭಗುಡಿಯ ಬಾಗಿಲು ಮುಚ್ಚಲಾಗಿದೆ. ಇನ್ನು ಮುಂದಿನ ವರ್ಷ ಸೆ.13 ರಿಂದ 27 ರವರೆಗೆ ಮತ್ತೆ ದೇವಿಯ ದರ್ಶನ ಭಾಗ್ಯ ಸಿಗಲಿದೆ.

hasanambe
hasanambe
author img

By

Published : Nov 6, 2021, 3:44 PM IST

ಹಾಸನ: ಕಳೆದ 10 ದಿನಗಳಿಂದ ಲಕ್ಷಾಂತರ ಭಕ್ತರಿಗೆ ದರ್ಶನ ಕರುಣಿಸಿದ ಜಿಲ್ಲೆಯ ಅಧಿದೇವತೆ ಹಾಸನಾಂಬೆಯ ದರ್ಶನಕ್ಕೆ ಇಂದು ತೆರೆ ಬಿದ್ದಿದೆ. ಮಧ್ಯಾಹ್ನ 1 ಗಂಟೆ 5 ನಿಮಿಷಕ್ಕೆ ಜಿಲ್ಲಾಡಳಿತದ ಸಮ್ಮುಖದಲ್ಲಿ ದೇವಿಯ ಗರ್ಭಗುಡಿಯ ಬಾಗಿಲು ಮುಚ್ಚಲಾಯಿತು.

ಇದಕ್ಕೂ ಮುನ್ನ ಹಾಸನಾಂಬೆ ದೇಗುಲದ ಒಳಗೆ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದ ಪುರೋಹಿತ ವರ್ಗ, ದೇವಿಗೆ ಹಾಕಲಾಗಿದ್ದ ಒಡವೆಗಳನ್ನು ತೆಗೆದು ಬಳಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ನಂತರ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್, ಎಸ್ಪಿ ಆರ್.ಶ್ರೀನಿವಾಸಗೌಡ, ಆಡಳಿತಾಧಿಕಾರಿ ಸಮ್ಮುಖದಲ್ಲಿ ದೇಗುಲದ ಬಾಗಿಲನ್ನು ಮುಚ್ಚಲಾಗಿದೆ.

ಹಾಸನಾಂಬೆ ದರ್ಶನಕ್ಕೆ ತೆರೆ
ಹಾಸನಾಂಬೆ ದರ್ಶನಕ್ಕೆ ತೆರೆ

ನಿರಂತರವಾಗಿ ಸುರಿದ ಮಳೆ, ಪುನೀತ್ ರಾಜಕುಮಾರ್ ಸಾವು ಹಾಗೂ ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ದರ್ಶನಕ್ಕೆ ಅವಕಾಶ ಎಂಬ ಜಿಲ್ಲಾಡಳಿತದ ನಿಯಮವಿದ್ದರಿಂದ ಈ ಬಾರಿ ಭಕ್ತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.

ಕಳೆದ 9 ದಿನಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ತಾಯಿ ಹಾಸನಾಂಬೆಯ ದರ್ಶನ ಪಡೆದಿದ್ದರು. 10ನೇ ದಿನವಾದ ಇಂದು ಗರ್ಭಗುಡಿ ಬಾಗಿಲು ಮುಚ್ಚಲಾಗಿದೆ. ಪ್ರಸಕ್ತ ವರ್ಷ ಅಕ್ಟೋಬರ್ 28 ರಂದು ದೇವಾಲಯ ತೆರೆಯಲಾಗಿತ್ತು. ಅಕ್ಟೋಬರ್ 28 ರಿಂದ ಈವರೆಗೆ ಲಕ್ಷಾಂತರ ಭಕ್ತರಿಂದ ದೇವಿ ದರ್ಶನ ಮಾಡಲಾಗಿದೆ.

ಹಾಸನಾಂಬೆ ದರ್ಶನಕ್ಕೆ ತೆರೆ
ಹಾಸನಾಂಬೆ ದರ್ಶನಕ್ಕೆ ತೆರೆ

ಮುಂದಿನ ವರ್ಷ ಹಾಸನಾಂಬೆ ದೇವಾಲಯ 15 ದಿನಗಳ ಕಾಲ ತೆರೆಯಲಿದ್ದು, 13 ದಿನ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಸಿಗಲಿದೆ. 2022, ಸೆ.13 ರಿಂದ 27 ರವರಗೆ ಹಾಸನಾಂಬೆ ದೇವಾಲಯದ ತೆರೆಯಲಿದೆ.

ಇದನ್ನೂ ಓದಿ: ಇಂದಿನಿಂದ ಪ್ರಸಿದ್ಧ ಹಾಸನಾಂಬೆ ದೇಗುಲ ಓಪನ್​... ಕೋವಿಡ್​ ಲಸಿಕೆ ಪಡೆದವರಿಗೆ ಮಾತ್ರ ದರ್ಶನ ಭಾಗ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.