ETV Bharat / state

ವಿವಿಧ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿದ ಎಪಿಎಂಸಿ ಅಧ್ಯಕ್ಷ - ಕೃಷಿ ಉತ್ಪನ್ನ ಮಾರುಕಟ್ಟೆ

ಹಾಸನ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕ್ಯಾಂಟೀನ್​ ಕಟ್ಟೆ ನಿರ್ಮಾಣವಾಗಲಿದ್ದು ಎಪಿಎಂಸಿ ಅಧ್ಯಕ್ಷ ಕೆ.ಎಸ್. ಮಂಜೇಗೌಡ ಇಂದು ಭೂಮಿ ಪೂಜೆ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.

Green signal to various works from APMC President
ಭೂಮಿ ಪೂಜೆ ನೆರವೇರಿಸಿದ ಎಪಿಎಂಸಿ ಅಧ್ಯಕ್ಷ
author img

By

Published : Aug 27, 2020, 6:23 PM IST

Updated : Aug 27, 2020, 8:28 PM IST

ಹಾಸನ : ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ 1 ಕೋಟಿ 30 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮೂರು ಕಡೆ ಕ್ಯಾಂಟೀನ್​ ಕಟ್ಟೆ ಹಾಗೂ ಇತರೆ ಕಾಮಗಾರಿಗಳ ಭೂಮಿ ಪೂಜೆಯನ್ನು ಎಪಿಎಂಸಿ ಅಧ್ಯಕ್ಷ ಕೆ.ಎಸ್. ಮಂಜೇಗೌಡ ನೆರವೇರಿಸಿದರು.​

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಳೆಯದಾಗಿರುವ ರಾಗಿ ಕಟ್ಟೆಯನ್ನು ಕೂಡ ನವೀಕರಣ ಮಾಡಲಾಗುವುದು. ಎಪಿಎಂಸಿ ಚುಣಾವಣೆಯಲ್ಲಿ ಗೆದ್ದು ಬಂದವರೆಲ್ಲರೂ ಸೇರಿ ಸಂಬಂಧಪಟ್ಟ ಅಧಿಕಾರಿಗಳ ಸಹಕಾರದಡಿ ಅಭಿವೃದ್ಧಿ ಕೆಲಸವನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಭೂಮಿ ಪೂಜೆ ನೆರವೇರಿಸಿದ ಎಪಿಎಂಸಿ ಅಧ್ಯಕ್ಷ

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಮಾರ್ಗದರ್ಶನದಲ್ಲಿ ಉತ್ತಮ ಕೆಲಸಗಳು ನಡೆಯುತ್ತಿವೆ. ನಮ್ಮ ಕಮಿಟಿ ಬಂದ ಮೇಲೆ ಅನುಮೋದನೆ ನೀಡಿರುವ ಮೊತ್ತದಲ್ಲಿ ಈಗಾಗಲೇ ಹಲವು ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ಹೇಳಿದರು.​

Last Updated : Aug 27, 2020, 8:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.