ETV Bharat / state

ನಾನಿರೋತನಕ ನಂದೇ ಹವಾ; ಸೋದರತ್ತೆಯ ಮುಂದೆ ಸೊಸೆಗೆ ಸೋಲು! - anchayat Election Result 2020

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕೇವಲ ಮೂರು ಮತಗಳ ಅಂತರದಿಂದ ಸೊಸೆಯನ್ನು ಮಣಿಸಿ ಸೋದರತ್ತೆ ಗೆಲುವು ಸಾಧಿಸಿರುವ ಕುತೂಹಲಕಾರಿ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

Grama Panchayat Election Result; Aunt Won Against Daughter-in-law
ಸಂಗ್ರಹ ಚಿತ್ರ
author img

By

Published : Dec 30, 2020, 4:55 PM IST

ಹಾಸನ: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಎದುರಾಳಿಯಾಗಿದ್ದ ಸೊಸೆಯನ್ನು ಮಣಿಸಿ ಸೋದರತ್ತೆ ಗೆಲುವು ಸಾಧಿಸಿದ್ದಾರೆ.

ಜಿದ್ದಾಜಿದ್ದಿಗೆ ಹೆಸರು ವಾಸಿಯಾಗಿದ್ದ ಹಾಸನ ತಾಲೂಕಿನ ಹೆರಗು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೈರಾಪುರ ಕ್ಷೇತ್ರದಿಂದ ಅತ್ತೆ ಸೊಂಬಮ್ಮ ಮತ್ತು ಸೊಸೆ ಪವಿತ್ರ ಎಂಬುವರು ಸ್ಪರ್ಧಿಸಿದ್ದರು. ಪೈಪೋಟಿಯ ನಡುವೆ ಕೊನೆಗೂ ಸೊಸೆಯನ್ನು ಮಣಿಸಿ ಅತ್ತೆ ಗೆಲುವಿನ ನಗೆ ಬೀರಿದ್ದಾರೆ.

ಓದಿ : ಕೊಪ್ಪಳ: ಒಂದು ಮತದ ಅಂತರದಿಂದ ಮಹಿಳಾ ಅಭ್ಯರ್ಥಿಗೆ ಗೆಲುವು

ಹೆರಗು ಕ್ಷೇತ್ರ ಮೊದಲಿನಿಂದಲೂ ಜೆಡಿಎಸ್ ಭದ್ರಕೋಟೆಯಾಗಿದ್ದು, ಈ ಬಾರಿಯೂ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.

Grama Panchayat Election Result; Aunt Won Against Daughter-in-law
ಅಭ್ಯರ್ಥಿಗಳ ಕರ ಪತ್ರ

ಕಾಂಗ್ರೆಸ್​ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿರುವ ಪವಿತ್ರ 273 ಮತಗಳನ್ನು ಪಡೆದರೆ, ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸೊಂಬಮ್ಮ 276 ಮತಗಳನ್ನ ಪಡೆದಿದ್ದಾರೆ. ಹೀಗಾಗಿ, ಕೇವಲ 3 ಮತಗಳ ಅಂತರದಿಂದ ಸೊಂಬಮ್ಮ ವಿಜಯದ ಮಾಲೆ ಮುಡಿಗೇರಿಸಿಕೊಂಡರು.

ಹೀಗಾಗಿ ಸೋದರತ್ತೆಯ ಮುಂದೆ ಸೊಸೆ ಸೋಲು ಅನುಭವಿಸಿದ್ದು ಅತ್ತೆ ನಾನಿರೋತನಕ ನನ್ನದೇ ಹವಾ ಎನ್ನುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.