ETV Bharat / state

ಸರ್ಕಾರ ಕೇವಲ ಲಾಕ್​​ಡೌನ್ ಮಾಡಿ ಜನರ ಕಣ್ಣೊರೆಸುತ್ತಿದೆ: ಕಾಂಗ್ರೆಸ್ ಮುಖಂಡ

author img

By

Published : Apr 16, 2020, 6:17 PM IST

ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಸಭೆ ನಡೆಸಿ ಯಾರಾದರೂ ಮಾಸ್ಕ್ ಇಲ್ಲದೇ ಹೊರಗೆ ಬಂದ್ರೆ ಅರೆಸ್ಟ್ ಮಾಡಿ ಅಂತಾ ಸೂಚಿಸಿದ್ದಾರೆ. ಆದರೆ ಎಷ್ಟು ಜನ ಪೊಲೀಸರು, ಸರ್ಕಾರಿ ನೌಕರರಿಗೆ ಮಾಸ್ಕ್ ವಿತರಣೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹೆಚ್.ಕೆ.ಮಹೇಶ್ ಪ್ರಶ್ನಿಸಿದ್ದಾರೆ.

Congress leader HK Mahesh
ಕಾಂಗ್ರೆಸ್ ಮುಖಂಡ ಹೆಚ್.ಕೆ. ಮಹೇಶ್

ಹಾಸನ: ಲಾಕ್​ಡೌನ್ ಆದೇಶದ ಮೂಲಕ ಜನರನ್ನು ಹೆದರಿಸಿ ಮನೆ ಒಳಗೆ ಕೂರಿಸಿರುವುದನ್ನು ಬಿಟ್ರೆ ಕೊರೊನಾ ನಿಭಾಯಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕಾಂಗ್ರೆಸ್ ಮುಖಂಡ ಹೆಚ್.ಕೆ.ಮಹೇಶ್ ಗಂಭೀರವಾಗಿ ಆರೋಪಿಸಿದರು.

ಸರ್ಕಾರ ಕೇವಲ ಲಾಕ್​​ಡೌನ್ ಮಾಡಿ ಜನರ ಕಣ್ಣೊರೆಸುತ್ತಿದೆ: ಕಾಂಗ್ರೆಸ್ ಮುಖಂಡ

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಎಂಬ ಸೂಕ್ಷ್ಮ ರೋಗಾಣುವಿನಿಂದ ದೇಶವೇ ಲಾಕ್​ಡೌನ್ ಆಗಿದೆ. ಜಿಲ್ಲೆಯಲ್ಲೂ ಕಾನೂನು ಜಾರಿಯಲ್ಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಸಭೆ ನಡೆಸಿ ಯಾರಾದರೂ ಮಾಸ್ಕ್ ಇಲ್ಲದೇ ಹೊರಗೆ ಬಂದ್ರೆ ಅರೆಸ್ಟ್ ಮಾಡಿ ಅಂತಾ ಸೂಚಿಸಿದ್ದಾರೆ. ಆದರೆ ಎಷ್ಟು ಜನ ಪೊಲೀಸರು, ಸರ್ಕಾರಿ ನೌಕರರಿಗೆ ಮಾಸ್ಕ್ ವಿತರಣೆ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದರು.

ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪತ್ತೆಯಾಗಿಲ್ಲ ಎನ್ನುತ್ತಿದ್ದಾರೆ. ಆದರೆ ಇದುವರೆಗೂ ಎಷ್ಟು ಜನರನ್ನ ಪರಿಕ್ಷೆಗೊಳಪಡಿಸಿದ್ದಾರೆ? ಸಾವಿರಾರು ಮಂದಿ ಹೊರಗಿನಿಂದ ಇಲ್ಲಿಗೆ ಬಂದಿದ್ದಾರೆ. ಜಿಲ್ಲೆಯಲ್ಲಿ ಲಕ್ಷಾಂತರ ಮಂದಿ ಜನರಿದ್ದಾರೆ. ಆದರೆ ನೂರಾರು ಸಂಖ್ಯೆಯಲ್ಲಿ ಮಾತ್ರ ಪರೀಕ್ಷೆ ಮಾಡಿದರೆ ತಿಳಿಯುತ್ತದೆಯೇ? ಜಿಲ್ಲಾಧಿಕಾರಿಗಳು ತಮ್ಮ ಕಚೇರಿಯಿಂದ ಯಾವ ತಾಲೂಕುಗಳಿಗೂ ಹೋಗಿ ಸಭೆ ಮಾಡದೇ ಜಿಲ್ಲಾಧಿಕಾರಿ ಕಚೇರಿಯಲ್ಲೇ ಸಭೆ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಇನ್ನು ಜಿಲ್ಲಾ ಉಸ್ತುವಾರಿ ಸಚಿವರು ವಾರಕ್ಕೊಮ್ಮೆ ಮಾತ್ರ ಜಿಲ್ಲೆಗೆ ಬಂದು ಸಭೆ ಮಾಡಿ ಹೋಗುತ್ತಾರೆ. ಕೇವಲ ಲಾಕ್​​ಡೌನ್ ಮಾಡಿ ಜನರ ಕಣ್ಣೊರೆಸುತ್ತಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರಿದ ಅವರು, ಜಿಲ್ಲೆಯ ಬಡವರು, ನಿರ್ಗತಿಕರಿಗೆ ಅಕ್ಕಿ ಒಂದನ್ನ ಕೊಟ್ಟರೆ ಸಾಕೇ? ಇಡೀ ದೇಶ ಕೊರೊನಾ ರೋಗದಿಂದ ಲಾಕ್​ಡೌನ್ ಆಗಿದ್ದು, ನಮ್ಮ ಜಿಲ್ಲೆಯಲ್ಲೂ ಸಹ ಇದೇ ಪರಿಸ್ಥಿತಿ ಇದೆ. ಈಗಾಗಲೇ ಎಲ್ಲಾ ಪಕ್ಷಗಳು ರಾಜ್ಯ ಸರ್ಕಾರಕ್ಕೆ ಸಹಕರ ನೀಡುವ ಮೂಲಕ ರಾಜಕೀಯ ಮರೆತು ಕೆಲಸ ಮಾಡುತ್ತಿದ್ದೇವೆ ಎಂದರು.

ಹಾಸನ ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನ ಕೋವಿಡ್-19 ಆಸ್ಪತ್ರೆಯನ್ನಾಗಿ ಮಾಡಿರುವುದು ಒಳ್ಳೆಯದು. ಸಾಮಾನ್ಯ ರೋಗಿಗಳಿಗೆ ಎಲ್ಲೂ ಚಿಕಿತ್ಸೆ ನೀಡುತ್ತಿಲ್ಲ, ಸರ್ಕಾರಿ ಆಸ್ಪತ್ರೆಗಳಿಂದ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುತ್ತಿದ್ದಾರೆ. ಅಲ್ಲೂ ಅವರನ್ನ ಮುಟ್ಟಿ ಸಹ ನೋಡಲ್ಲ. ಅವರ ಕಷ್ಟ ಕೇಳುವವರು ಯಾರು? ಸರ್ಕಾರಿ ಆಸ್ಪತ್ರೆಗೆ ಎಷ್ಟು ಸ್ಯಾನಿಟೈಸರ್ ಖರೀದಿಸಿದ್ದಾರೆ. ಎಷ್ಟು ಪಿಪಿಇ ಕಿಟ್ ಖರೀದಿಸಿದ್ದಾರೆ? ಎಷ್ಟು ಲಕ್ಷ ಖರ್ಚು ಆಗಿದೆ ಎಂಬ ಬಗ್ಗೆ ಸಚಿವರು ಬಹಿರಂಗವಾಗಿ ಉತ್ತರ ನೀಡಲು ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.