ETV Bharat / state

ಪಂಜಾಬ್ - ದೆಹಲಿಯಲ್ಲಿ ಕಾಂಗ್ರೆಸ್​​ಗೆ ಹಿನ್ನಡೆ: ಎಚ್.ಡಿ.ದೇವೇಗೌಡ - HD Deve Gowda

ಈ ಚುನಾವಣೆ ಫಲಿತಾಂಶ ಕಾಂಗ್ರೆಸ್ ಮೇಲೆ ಯಾವ ಪರಿಣಾಮ ಬೀರುತ್ತೋ ನೋಡೋಣ. ಕಾರಣ ಈಗಾಗಲೇ ದೆಹಲಿ ಮತ್ತು ಪಂಜಾಬ್ ನಿಂದ ಕಾಂಗ್ರೆಸ್​​ನ ಕುಸಿತ ಆರಂಭವಾಗಿದೆ. ಹಾಗಾಗಿ ಇಲ್ಲಿಯೂ ಏನಾಗುತ್ತೆ ಕಾದು ನೋಡೋಣ ಎಂದು ಎಚ್.ಡಿ.ದೇವೇಗೌಡ ಹೇಳಿದರು.

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಹೇಳಿಕೆ
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಹೇಳಿಕೆ
author img

By

Published : Oct 25, 2021, 8:48 PM IST

ಹಾಸನ: ಪಂಜಾಬ್ ಮತ್ತು ದೆಹಲಿಯಲ್ಲಿ ಕಾಂಗ್ರೆಸ್​ ಕುಸಿತ ಕಾಣುತ್ತಿದೆ. ರಾಜ್ಯದ ಉಪ ಚುನಾವಣೆಯಲ್ಲಿ ಜನರು ಪ್ರತಿಫಲ ಕೊಡುತ್ತಾರೆ ಎಂಬ ನಿರೀಕ್ಷೆ ಮಾಡಿದ್ದೇವೆ ಎಲ್ಲಾ ಭಗವಂತನ ಇಚ್ಚೆಯಂತೆಯೇ ನಡೆಯುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಹೇಳಿಕೆ

ಉಪಚುನಾವಣಾ ಪ್ರಚಾರ ಮುಗಿಸಿಕೊಂಡು ಹೆಲಿಕಾಪ್ಟರ್ ಮೂಲಕ ಹಾಸನಕ್ಕೆ ಆಗಮಿಸಿದ ಅವರು ಬಳಿಕ ಸಂಸದರ ನಿವಾಸದಲ್ಲಿ ಮಾತನಾಡಿದರು. ಕುಮಾರಸ್ವಾಮಿ ಸರ್ಕಾರ ಹೋದ ಮೇಲೆ ಹಲವು ಉಪ ಚುನಾವಣೆಗಳು ನಡೆದಿವೆ. ಈಗ ಹಾನಗಲ್ ಮತ್ತು ಸಿಂದಗಿಯಲ್ಲೂ ಉಪ ಚುನಾವಣೆ ನಡೆಯುತ್ತಿವೆ. ಸಿಂದಗಿಯಲ್ಲಿ ಎಂಸಿ ಮನಗುಳಿ ನಮ್ಮ ಪಕ್ಷದಲ್ಲಿಯೇ ಬೆಳೆದವರು. ನಾನು ನೀರಾವರಿಗೆ ಸಂಬಂಧಪಟ್ಟಂತೆ ಸಾಕಷ್ಟು ಕೆಲ್ಸ ಮಾಡಿದ್ದೇನೆ. ಇದರ ಪ್ರತಿಫಲವನ್ನು ಚುನಾವಣೆಯಲ್ಲಿ ಜನರು ಕೊಡುತ್ತಾರೆ ಎಂಬ ನಂಬಿಕೆ ಮತ್ತು ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾವು ಚುನಾವಣೆಯಲ್ಲಿ ದಿಢೀರ್​ನೇ ಅಲ್ಪಸಂಖ್ಯಾತ ಅಭ್ಯರ್ಥಿ ನಿಲ್ಲಿಸಲಿಲ್ಲ. ಸ್ಥಳೀಯ 9 ಲೋಕಲ್ ಲೀಡರ್ ಅಪೇಕ್ಷೆ ಮೇರೆಗೆ ಅಭ್ಯರ್ಥಿ ಹಾಕಿದ್ದೇವೆ. ಹೊರ ನೋಟಕ್ಕೆ ನಾವು ಚುನಾವಣೆಯಲ್ಲಿ ಮುಂದಿದ್ದೇವೆ. ಎರಡು ರಾಷ್ಟ್ರೀಯ ಪಕ್ಷಗಳು ಕೂಡ ಹೋರಾಟ ಮಾಡುತ್ತಿವೆ. ಇನ್ನು ಎರಡು ದಿನಗಳಲ್ಲಿ ಹಣ ಬಲ ಮತ್ತು ಅಧಿಕಾರ ಬಲ ಯಾವ ರೀತಿ ಕೆಲಸ ಮಾಡತ್ತೋ ಗೊತ್ತಿಲ್ಲ.

ಆದರೆ, ಈ ಚುನಾವಣೆ ಫಲಿತಾಂಶ ಕಾಂಗ್ರೆಸ್ ಮೇಲೆ ಯಾವ ಪರಿಣಾಮ ಬೀರುತ್ತೋ ನೋಡೋಣ. ಕಾರಣ ಈಗಾಗಲೇ ದೆಹಲಿ ಮತ್ತು ಪಂಜಾಬ್ ನಿಂದ ಕಾಂಗ್ರೆಸ್​​ನ ಕುಸಿತ ಆರಂಭವಾಗಿದೆ. ಹಾಗಾಗಿ ಇಲ್ಲಿಯೂ ಏನಾಗುತ್ತೆ ಕಾದು ನೋಡೋಣ. ನಾನು ಯಾರ ಮೇಲೂ ಆರೋಪ ಮಾಡೋದಿಲ್ಲ. ಯಾರ ಮೇಲೂ ದೂರೋದಿಲ್ಲ. ವಾಸ್ತವಾಂಶವನ್ನು ಹೇಳಿದ್ದೇನೆ ಅಷ್ಟೆ ಎಂದರು.

ಇನ್ನು ಹಾಸನಾಂಬೆಯ ದೇಗುಲ ವರ್ಷಕ್ಕೊಮ್ಮೆ ಮಾತ್ರ ತೆರೆಯೋದು. ತಾಯಿ ದರ್ಶನ ಮಾತ್ರ ನೀಡೋದು. ಕೋವಿಡ್ ಕಾರಣ ಆನ್ ಲೈನ್ ದರ್ಶನಕ್ಕೆ ಮಾತ್ರ ಅವಕಾಶ ನೀಡಿದ್ದಾರೆ. ಇದರ ಬಗ್ಗೆ ನಾನು ಜಿಲ್ಲಾಡಳಿತದೊಂದಿಗೆ ಚರ್ಚೆಮಾಡುತ್ತೇನೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.