ETV Bharat / state

4 ಬಾರಿ ಸಿಎಂ ಆಗಿದ್ರೂ ಹಾಸನ ಜಿಲ್ಲೆ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು?- ಬಿಎಸ್‌ವೈಗೆ ಹೆಚ್‌ಡಿಡಿ ಪ್ರಶ್ನೆ

ನಾನು ಅಸೂಯೆ ಪಡಲ್ಲ. ಅವರ ಹಣೆಬರಹ ಇದ್ದರೆ ಇನ್ನೊಂದು ಟರ್ಮ್ ಆಗಲಿ. ಆದರೆ, ನನ್ನ ಜೀವಿತದ ಕೊನೆಯ ಒಳಗೆ ಯಡಿಯೂರಪ್ಪನವರೇ, ವಿಮಾನ ನಿಲ್ದಾಣ ಓಪನ್ ಮಾಡಿ. ಇದುವರೆಗೆ ನನ್ನ ಜಿಲ್ಲೆಗೆ ಅವರು ಏನು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದನ್ನು ಅವರೇ ಯೋಚನೆ ಮಾಡಲಿ. ನಾನು ಈ ಎಲ್ಲಾ ವಿಷಯ ಚರ್ಚೆ ಮಾಡಲು ಕೃಷ್ಣಗೆ ಹೋಗಿ ಮನವಿ ಮಾಡುವೆ..

Former PM HD Devegowda
ವರಿಷ್ಠ ಹೆಚ್.ಡಿ. ದೇವೇಗೌಡ
author img

By

Published : Jan 24, 2021, 4:12 PM IST

ಹಾಸನ : ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿಯಾದರೂ ಹಾಸನ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಶಿವಮೊಗ್ಗ ಅಭಿವೃದ್ಧಿ ಮಾಡಿರುವ ಕುರಿತು ನನಗೆ ಅಸೂಯೆ ಇಲ್ಲ. ನನ್ನ ಜಿಲ್ಲೆಯನ್ನು ನೋಡಿ ಎಂದು ಕೇಳುತ್ತೇನೆ ಎಂದು ಜೆಡಿಎಸ್​ ವರಿಷ್ಠ ಹೆಚ್ ಡಿ ದೇವೇಗೌಡ ಹೇಳಿದರು.

ನಾಳೆ ಕೃಷ್ಣಾ ನಿವಾಸದಲ್ಲಿ ಯಡಿಯೂರಪ್ಪ ಅವರನ್ನ ಭೇಟಿಯಾಗ್ತೇನೆ. 2023ರವರೆಗೆ ಅವರೇ ಸಿಎಂ ಆಗಿರುತ್ತಾರೆ. ಆಗಲಿ ಎಂದು ಮೊದಲೇ ಹೇಳಿದ್ದೇನೆ. ನಮ್ಮಿಂದ ಇದಕ್ಕೆ ಯಾವುದೇ ತೊಂದರೆಯಾಗಲ್ಲ.

2023ರ ಬಳಿಕ ಯಾರನ್ನ ಸಿಎಂ ಮಾಡ್ತಾರೆ ಅನ್ನೋದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಸ್ಥಳೀಯ ಶಾಸಕರ ಯೋಜನೆಗೆ ನಾನು ವಿರೋಧಪಡಿಸುವುದಿಲ್ಲ. ಆದರೆ, ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ಅಡ್ಡಗಾಲಾಗಿರುವುದು ಸರಿಯಲ್ಲ ಎಂದರು.

ಹಾಸನ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಜೆಡಿಎಸ್‌ ವರಿಷ್ಠ ಹೆಚ್ ಡಿ ದೇವೇಗೌಡ ಹೇಳಿಕೆ

ಇಷ್ಟು ದಿನ ಹೆಚ್.ಡಿ. ರೇವಣ್ಣ, ಶಾಸಕ ಪ್ರೀತಂ ಜೆ. ಗೌಡ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಪ್ರಧಾನಿ, ನಾವು ಅಧಿಕಾರದಲ್ಲಿದ್ದಾಗ ಬೆಂಗಳೂರು ಸಿಟಿ ಅಷ್ಟೇ ಅಲ್ಲ, ಎಲ್ಲಾ ಸಿಟಿಯನ್ನು ಸಮಾನಾಂತರವಾಗಿ ನೋಡಿದ್ದೇವೆ. ಹಾಸನ ವಿಮಾನ ನಿಲ್ದಾಣ ಕಾಮಗಾರಿ ಅಭಿವೃದ್ಧಿ ಮಾಡಲು ಹೊರಟು ಅದು ಹಾಗೇ ಉಳಿದಿದೆ.

ಅದನ್ನು ಕೂಡ ಮುಂದಿನ ದಿನಗಳಲ್ಲಿ ಕಾಮಗಾರಿ ಮಾಡಲು ಅನುವು ಮಾಡಿಕೊಡಬೇಕು. ಜೊತೆಗೆ ಬೇಲೂರಿನಿಂದ ಬಿಳಿಕೆರೆವರೆಗೆ ನಾಲ್ಕು ಪಥದ ರಸ್ತೆ ಕಾಮಗಾರಿ ಸೇರಿದಂತೆ ಕುಮಾರಸ್ವಾಮಿ-ಯಡಿಯೂರಪ್ಪ ಸರ್ಕಾರ ಮಾಡಿದಾಗ ಹಾಸನದಲ್ಲಿ ಐಐಟಿ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಅದು ಕೂಡ ಈಗ ಮರೀಚಿಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈಗಾಗಲೇ ಹಾಸನ ವಿಮಾನ ನಿಲ್ದಾಣಕ್ಕೆ 550 ಎಕರೆ ಭೂಮಿಯನ್ನು ವಶಕ್ಕೆ ಕೊಡಲಾಗಿದೆ. ಯಡಿಯೂರಪ್ಪನವರಿಗೆ ಗೌರವದಿಂದ ಕೇಳಿ ಕೊಳ್ಳುತ್ತೇನೆ. ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಕೂಡ ಬರುತ್ತಾರೆ. ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಹಾಸನದಿಂದ ರಫ್ತು ಮಾಡುವ ಸಲುವಾಗಿಯೇ ಹೆಚ್ಚು ಒತ್ತು ಕೊಟ್ಟು ಇಲ್ಲೊಂದು ವಿಮಾನ ನಿಲ್ದಾಣ ಆಗಬೇಕೆಂಬುದು ಆಸೆಯಿತ್ತು. ವೈಯಕ್ತಿಕವಾಗಿ ಏನು ಇಲ್ಲ. ಆದರೆ, ಜಿಲ್ಲೆಯ ಅಭಿವೃದ್ಧಿಗೆ ನಿಮ್ಮ ಕಾಲದಲ್ಲಿ ಗಮನ ಕೊಡಿ ಎಂದು ಮನವಿ ಮಾಡಿದರು.

ಓದಿ:'ಕಿಸಾನ್ ಸಂಸದ್ ಸಭೆಗೆ ಬರಲಾಗಲ್ಲ'.. ಪ್ರಶಾಂತ್ ಭೂಷಣ್​ಗೆ ಪತ್ರ ಬರೆದ ದೇವೇಗೌಡರು

ನನಗೆ ಇನ್ನೂ 4 ತಿಂಗಳು ಕಳೆದರೆ 88 ವರ್ಷ ಮುಗಿಯುತ್ತೆ. ಒಬ್ಬ ಮನುಷ್ಯ ಎಷ್ಟು ದಿನ ಇರಬಹುದು,ಅವರ ಅವಧಿ ಮುಗಿಯುವುದರೊಳಗೆ ನನಗೆ 90 ವರ್ಷ ಆಗಲಿದೆ. ಆನಂತರ ನನಗೆ ನಡೆಯಲು ಆಗುತ್ತೋ ಗೊತ್ತಿಲ್ಲ. ಯಡಿಯೂರಪ್ಪ ಪೂರ್ಣಾವಧಿಗೆ ಇರುತ್ತಾರೆ ಇಲ್ಲವೋ ಎಂಬುದು ಗೊತ್ತಿಲ್ಲ. ಆದರೆ, ಅವರ 2023ರವರೆಗೆ ಮುಖ್ಯಮಂತ್ರಿಯಾಗಿ ಅವರ ಪೂರ್ಣ ಅಧಿಕಾರದಲ್ಲಿರಲಿ ಎಂದು ಹೇಳುತ್ತೇನೆ.

ನಾನು ಅಸೂಯೆ ಪಡಲ್ಲ. ಅವರ ಹಣೆಬರಹ ಇದ್ದರೆ ಇನ್ನೊಂದು ಟರ್ಮ್ ಆಗಲಿ. ಆದರೆ, ನನ್ನ ಜೀವಿತದ ಕೊನೆಯ ಒಳಗೆ ಯಡಿಯೂರಪ್ಪನವರೇ, ವಿಮಾನ ನಿಲ್ದಾಣ ಓಪನ್ ಮಾಡಿ. ಇದುವರೆಗೆ ನನ್ನ ಜಿಲ್ಲೆಗೆ ಅವರು ಏನು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದನ್ನು ಅವರೇ ಯೋಚನೆ ಮಾಡಲಿ. ನಾನು ಈ ಎಲ್ಲಾ ವಿಷಯ ಚರ್ಚೆ ಮಾಡಲು ಕೃಷ್ಣಗೆ ಹೋಗಿ ಮನವಿ ಮಾಡುವೆ. ನಾನು ಸೇಡಿನಿಂದ ಯಾವುದೇ ವಿಚಾರವನ್ನು ಮಾತನಾಡುವುದಿಲ್ಲ, ಅಧಿಕಾರದಲ್ಲಿದ್ದ ಅವರನ್ನು ಕೇಳುವುದು ನಮ್ಮ ಧರ್ಮ, ಈ ಬಗ್ಗೆ ಕುಮಾರಸ್ವಾಮಿ, ರೇವಣ್ಣ ಎಲ್ಲಾ ಪತ್ರ ಬರೆದಿದ್ದೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.