ಹಾಸನ: ಸಿದ್ದಗಂಗಾ ಮಠ, ತುಮಕೂರಿನ ಸೌಹಾರ್ದ ಪತ್ತಿನ ಸಹಕಾರ ನಿಯಮಿತಿ ಮತ್ತು ಸ್ನೇಹಿತರ ಸಹಕಾರದಲ್ಲಿ ಇತ್ತಿಚಿಗೆ ಮಳೆಯಿಂದ ಹಾನಿಗೊಳಗಾದ ಸಂತ್ರಸ್ತರ ನೆರವಿಗಾಗಿ ದಿನನಿತ್ಯ ಬಳಸುವ ಕುಕ್ಕರ್, ಇತರೆ ಪದಾರ್ಥ ಹಾಗೂ ಆರ್ಥಿಕ ಸಹಕಾರವನ್ನು ಜಿಲ್ಲಾಧಿಕಾರಿ ಅಕ್ರಂಪಾಷ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‌ಗೌಡ ಎದುರು ಹಸ್ತಾಂತರಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಅಕ್ರಂಪಾಷ ಸುದ್ದಿಗಾರರೊಂದಿಗೆ ಮಾತನಾಡಿ, ವಿವಿಧ ಸಂಘ-ಸಂಸ್ಥೆಯಿಂದ ಹಲವಾರು ರೀತಿ ಸಹಾಯಸ್ತ ಹರಿದು ಬರುತ್ತಿದೆ. ಜೊತೆಗೆ ಹಲವಾರು ಸಹಕಾರಿ ಸಂಘಗಳು, ಮಠಗಳು, ನಾಗರಿಕರು ಎಲ್ಲಾ ಸಂತ್ರಸ್ತರಿಗೆ ನೆರವು ನೀಡಲು ಮುಂದಾಗಿದ್ದಾರೆ. ಅಗತ್ಯವಾಗಿ ಬೇಕಾಗಿರುವ ಅಕ್ಕಿ, ಬೆಳೆ, ಪಾತ್ರೆ, ಸೇರಿದಂತೆ ದೈನಂದಿನ ವಸ್ತುಗಳ ಎಲ್ಲಾ ಕಿಟ್ಟುಗಳನ್ನು ಎಲ್ಲರ ಸಹಕಾರದಲ್ಲಿ ಕೊಡಲಾಗಿದೆ ಎಂದರು.
ಬುಧವಾರ ತುಮಕೂರಿನ ಸಿದ್ದಗಂಗಾ ಮಠದಿಂದ ಮತ್ತು ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದಿಂದ ಸಂತ್ರಸ್ತರಿಗೆ ನೆರವು ಕೊಡಲು ಆಗಮಿಸಿದ್ದರು. ಜೀವನಕ್ಕೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಹಾಸನ ಜಿಲ್ಲೆಯಲ್ಲಿ ಮಳೆಯಿಂದ ಮನೆ ಹಾನಿ ಆಗಿರುವವರಿಗೆ ಪರಿಹಾರ ಕೊಡಲಾಗುತ್ತಿದೆ. ಮನೆಗಳ ಡ್ಯಾಮೇಜ್ ಆಗಿರುವ ಕಡೆ ಪರಿಶೀಲಿಸಿ ಪರಿಹಾರ ಕೊಡಲಾಗುವುದು ಎಂದು ಹೇಳಿದರು.
ಸನ್ ರೈಸ್ ಸೌಹಾರ್ದ ಪತ್ತಿನ ಸಹಕಾರ ನಿಯಮಿತ ಬ್ಯಾಂಕ್ ಸಿಇಓ ಆರ್. ಮಲ್ಲೇಶ್, ಕುಮಾರ್, ಶಶಿಧರ್ ಹಾಗೂ ಸಿದ್ದಗಂಗಾ ಮಠದವರು ಈ ಸಂದರ್ಭದಲ್ಲಿ ಹಾಜರಿದ್ದರು.