ETV Bharat / state

ಕಂಗೆಟ್ಟ ಸಂತ್ರಸ್ತರ ಕೈಹಿಡಿದೆತ್ತಬೇಕು, ನಮ್ಮಂತೆ ನೀವೂ ನೆರೆ ಪೀಡಿತರಿಗೆ ನೆರವಾಗಿ..!

author img

By

Published : Aug 28, 2019, 1:48 PM IST

ಮುಳುಗುತ್ತಿರುವವನಿಗೆ ಒಂದ್‌ ಹುಲ್ಲು ಕಡ್ಡಿಯೂ ಆಸರೆಯಾಗುತ್ತೆ. ಹುಲ್ಲು ಕಡ್ಡಿಯೇ ಜೀವ ಉಳಿಸಬಹುದಾದ್ರೇ ಮನುಷ್ಯರು ಮನಸ್ಸು ಮಾಡಿದ್ರೇ ಯಾವುದೂ ಅಸಾಧ್ಯವೇ ಅಲ್ಲ. ನಿಜ. ಪ್ರವಾಹದಿಂದಾಗಿ ಲಕ್ಷಾಂತರ ಜನರ ಬದುಕೇ ಮುಳುಗಿದೆ. ಒಂದೇ ಒಂದು ಆಸರೆ ನೀಡುವ ಕೈಗಳು ಸಂತ್ರಸ್ತರಿಗೆ ಬೇಕಾಗಿವೆ. ಈವರೆಗೂ ಕರ್ನಾಟಕದಾದ್ಯಂತ ಸಾಕಷ್ಟು ನೆರವು ಸಂತ್ರಸ್ತರಿಗಾಗಿ ಹರಿದು ಬರ್ತಿದೆ. ಇದರ ಮಧ್ಯೆಯೇ ಈಟಿವಿ ಭಾರತ ಕೂಡ ಸಹೃದಯರು ಮತ್ತು ಸಂತ್ರಸ್ತರ ಮಧ್ಯೆ ಸೇತುವೆ ರೀತಿ ಕೆಲಸ ಮಾಡ್ತಿದೆ.

ನೆರೆ ಪೀಡಿತರಿಗೆ ನೆರವಾಗಿ

ಹಾಸನ / ಬಾಗಲಕೋಟೆ/ ಬೆಳಗಾವಿ: ಹಿಂದೆ ನೋಡಿಲ್ಲ, ಮುಂದೆ ನೋಡ್ತೀವೋ ಗೊತ್ತಿಲ್ಲ. ಕಂಡು ಕೇಳರಿಯದಂತಾ ಪ್ರಕೃತಿಯ ಕಡುಕೋಪವಿದು. ಕೇಡುಗಾಲ ಅಂತೀವಲ್ಲ, ಅದು ಇದೇನಾ.. ಹಿಂಗಾದ್ರೇ ಬದುಕೋದಾದ್ರೂ ಹೇಗೆ.. ಬರಬಾರದು. ಇನ್ನೊಮ್ಮೆ ಯಾವತ್ತೂ ಇಂತಹ ನೆರೆ ಬರಬಾರದು. ಯಾರ್‌ ಯಾಕ್‌ ಹೇಳ್ಬೇಕ್ರೀ, ಹುಟ್ಟಿದ ಮ್ಯಾಲೆ ಇಂತಹ ಪ್ರವಾಹ ಬಂದಿರೋದನ್ನ ನಾವ್‌ ನೋಡಿಲ್ಲ ಬಿಡ್ರೀ, ಅದೇನ್‌ ಸೆಳೆವು, ಅದೆಂಥಾ ರಭಸ. ಬೆಳೆದ್‌ ಬೆಳೆಗಳು ಕೊಚ್ಕೊಂಡ್‌ ಹೋದವು, ಎಲ್ಲಿ ನೋಡಿದ್ರೂ ನೀರು, ಜನ-ಜಾನುವಾರು ಊರಿಗೇ ಊರೇ ಮುಳುಗ್‌ತಿದ್ರೂ ಕುಡಿಯೋಕ್‌ ಹನಿ ನೀರು ಇರದ ಸ್ಥಿತಿ ಅದು.

ಲಕ್ಷಾಂತರ ನಿರಾಶ್ರಿತರಿಗೆ ಬೇಕಿದೆ ಸಹೃದಯರ ನೆರವಿನ ಹಸ್ತ!

ನದಿ ಪಾತ್ರದ ಜನ ಕಂಡರಿಯದ ನೀರು ನೋಡಿದರು:

ಕೃಷ್ಣ ನದಿಯಿಂದ ಸಂತ್ರಸ್ತರಾದ ನದಿ ಪಾತ್ರದ ಪ್ರತಿಯೊಬ್ಬರೂ ಇದೇ ಮಾತ್‌ ಹೇಳ್ತಾರೆ. ಅಗಸ್ಟ್ ಮೊದಲ ವಾರ ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಗೆ ರಬಕವಿಯ ಕೃಷ್ಣ ನದಿ ಮೈದುಂಬಿ ಹರಿದಿತ್ತು. ನದಿ ಪಾತ್ರದ ಜನ ಕಂಡರಿಯದ ನೀರು ನೋಡಿದರು. ಬದುಕೇ ಮುಳುಗಿಹೋದ ಸ್ಥಿತಿ ಅದು. ಬಾಗಲಕೋಟೆ-ಬೆಳಗಾವಿ ಜಿಲ್ಲೆ ಸಂಪರ್ಕಿಸುವ ಮಹಿಷವಾಡಗಿ ಮತ್ತು ತಮದ್ದಡಿ ನಡುವಿನ ಸೇತುವೆನೇ ಮುಳುಗ್ಹೋಗಿತ್ತು. ಊರ ಮಧ್ಯೆ ಜನ ಒಂದ್‌ ಕಡೆಯಿಂದ ಇನ್ನೊಂದ್‌ ಕಡೆಗೆ ಹೋಗೋದಕ್ಕೂ ದೋಣಿ ಅವಲಂಬಿಸುವ ಸ್ಥಿತಿ. ಜೋರು ಪ್ರವಾಹ ಬಂದು ಎಲ್ಲಾ ಕೊಚ್ಕೊಂಡ್‌ ಹೋಗಿದೆ. ಅಳಿದುಳಿದ ಮನೆಗಳಲ್ಲಿ ಬದುಕು ಕಟ್ಕೊಳ್ಳೋದಕ್ಕೆ ಸಂತ್ರಸ್ತರು ಈಗ ಹೆಣಗಬೇಕು. ನಿರಾಶ್ರಿತರ ತಾಣಗಳಿಂದ ಮರಳಿ ತಮ್ಮೂರಿಗೆ ಬರ್ತಿದಾರೆ ನೆರೆ ಪೀಡಿತರು. ಬದುಕು ಸಹಜ ಸ್ಥಿತಿಗೆ ಬರಬೇಕು. ಅದಕ್ಕಾಗಿ ಇವರು ತಮ್ಮ ಮನೆಯಲ್ಲದೇ ಸುತ್ತಿನ ಪರಿಸರವನ್ನೂ ಶುಚಿಗೊಳಿಸಿಕೊಳ್ಳಬೇಕಿದೆ. ಇವರ ಈ ಸ್ಥಿತಿ ನೋಡಿದ್ರೇ ನೀಜಕ್ಕೂ ಮರುಕ ಹುಟ್ಟುತ್ತೆ.

ಹಾಸನದಿಂದ ಉತ್ತರಕರ್ನಾಟಕದ ನೆರೆ ಪೀಡಿತರಿಗೆ ನೆರವು :

ಕರ್ನಾಟಕದ ಸಹೃದಯರು ಸಂತ್ರಸ್ತರಿಗೆ ನೆರವಾಗಿದಾರೆ. ಊಟ, ಬಟ್ಟೆ, ಹಾಸಿಗೆ, ಬಿಸ್ಕೇಟ್, ಜ್ಯೂಸ್ ಹೀಗೆ ಪ್ರತಿಯೊಂದು ದಿನ ನಿತ್ಯ ಬೇಕಾದ ಸಾಮಗ್ರಿಗಳನ್ನ ಖಾಸಗಿ ಕಂಪನಿಗಳು, ನಾನಾ ಸಂಘ-ಸಂಸ್ಥೆಗಳು, ಸಾರ್ವಜನಿಕರು ಪ್ರತಿಯೊಬ್ಬರೂ ಸಹಾಯದ ಹಸ್ತವನ್ನ ಸಂತ್ರಸ್ತರಿಗಾಗಿ ಚಾಚಿದಾರೆ. ಕೈಹಿಡಿದು ಅವರ ಬದುಕು ಮೇಲೆತ್ತಲು ಯತ್ನಿಸಿದಾರೆ. ಇದರ ಮಧ್ಯೆ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಮತ್ತು ಈಟಿವಿ ಭಾರತ ಸಹಯೋಗದೊಂದಿಗೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಲಯನ್ಸ್ ಸಂಸ್ಥೆ, ನಾಗರಿಕ ವೇದಿಕೆ, ಯುವ ಬ್ರಿಗೇಡ್, ಶಾಲಿನಿ ವಿದ್ಯಾಶಾಲೆ ಹಾಗೂ ಶ್ರೀಗಣಪತಿ ಸೇವಾ ಸಮಿತಿ ಪರಿಹಾರ ಕಿಟ್‌ಗಳನ್ನ ಸಂತ್ರಸ್ತರಿಗೆ ನೀಡಲು ಮುಂದಾಗಿತ್ತು. ಆ ಕಿಟ್‌ಗಳಿರುವ ವಾಹನ 3 ದಿನದ ಹಿಂದೆ ಶ್ರವಣಬೆಳಗೊಳದಿಂದ ಉತ್ತರಕರ್ನಾಟಕದ ನೆರೆ ಪೀಡಿತ ಪ್ರದೇಶದತ್ತ ಹೊರಟಿತ್ತು.

₹5 ಲಕ್ಷ ಮೌಲ್ಯದ ಔಷಧಿಗಳು, ನಿತ್ಯ ಬಳಕೆಯ ಸಾಮಗ್ರಿ:

ಅದೇ ವಾಹನ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಭದ್ರಗಿರಿ ಬೆಟ್ಟ, ಹಳ್ಳಿಂಗಳಿ, ತಮದ್ದಡಿ (ರಬಕವಿ-ಬನಹಟ್ಟಿ) ಮದನಮಟ್ಟಿಯ ಗ್ರಾಮಗಳಿಗೆ ತೆರೆಳಿತು. ಸಂತ್ರಸ್ತರಿಗೆ ಸಾಂತ್ವನ ಹೇಳಲಾಯ್ತು. ಜತೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಿ ಸುಮಾರು 5 ಲಕ್ಷಕ್ಕೂ ಅಧಿಕ ಮೌಲ್ಯದ ಉಚಿತ ಔಷಧಿಗಳು ಹಾಗೂ 10 ಲಕ್ಷದಷ್ಟು ಬೆಲೆಯ ಪಾತ್ರೆಗಳು, ಆಹಾರ ಧಾನ್ಯಗಳು ಮತ್ತು ಹೆಣ್ಣುಮಕ್ಕಳಿಗಾಗಿ ನ್ಯಾಪ್ಕಿನ್‌ಗಳನ್ನೂ ಕೂಡ ಸಂತ್ರಸ್ತರಿಗೆ ವಿತರಿಸಲಾಯ್ತು. ಪ್ರತಿ ಗ್ರಾಮದ ತಲಾ 100 ಕುಟುಂಬ ಗುರುತಿಸಿ 300 ಮನೆಗಳಿಗೆ ಕಿಟ್ ವಿತರಣೆ ಮಾಡ್ಲಾಯ್ತು.

ರಾಜ್ಯದ 324ಕ್ಕೂ ಅಧಿಕ ಹಳ್ಳಿಗಳು ಪ್ರವಾಹ ಪೀಡಿತವಾಗಿವೆ. ತಾತ್ಕಾಲಿಕ ಬದುಕೀಗ ನಡೆಯುತ್ತಿದೆ. ಆದರೆ, ನೆರೆ ಪೀಡಿತ ಪ್ರದೇಶಗಳಲ್ಲಿ ಮೂಲಸೌಕರ್ಯ ಜತೆಗೆ ತಕ್ಷಣವೇ ಪರಿಹಾರ ವಿತರಿಸುವ ಕಾರ್ಯವನ್ನ ಸಮರೋಪಾದಿಯಲ್ಲಿ ಸರ್ಕಾರ ಮಾಡಬೇಕಿದೆ.

Intro:ಬಾಗಲಕೋಟೆ/ ಬೆಳಗಾವಿ: ಹಿಂದೆ ನಮ್ ಕಡಿ ಮಳಿ ಆಗೈತ್ರಿ. ಆದ್ರೆ ನನ್ನ ಜೀವನದಾಗ ಇಂತ ನೀರ್ ನೋಡಿಲ್ರೀ.. ಮಳಿ-ಬೆಳಿ ಇಲ್ದೆ ಕುಡಿಯೋಕ್ ನೀರ್ ಬೇಕು ಅಂತಾರೀ 4 ಮೈಲಿ ನಡೆದು ನೀರ ತರ್ತಿದ್ದೋ. ಈಗ 4 ದಿನ ಮಳಿ ಬಂದ್...ರೀ, ಹೊಲ, ಗದ್ದೆ ತೋಟ, ಕಬ್ಬಾ ಎಲ್ಲಾ ಹೋತ್ರೀ....ಮನೆಯಾಗ್ ಇದ್ದ ಪಾತ್ರೆ, ಪಗಡೆ, ಬೇಳಿ, ಕಾಳು, ಹಿಟ್ಟ, ಕಾರ, ಎಲ್ಲಾ ಕಲಾಸ್ ಆತ್ರಿ....ಮೈಮ್ಯಾಗ್ ಇದೊಂದು ಬಟ್ಟೆ ಬಿಟ್ ಏನೀಲ್ರೀ....ನಮ್ಮತ್ರ.

ಮಳೆ ನಿಂತು ಹೋದ ಮೇಲೆ...

ಹೌದು, ಇದು ನಮ್ಮ ಮಾತುಗಳಲ್ಲ. ಕೃಷ್ಣ ನದಿಯಿಂದ ಸಂತ್ರಸ್ಥರಾದ ನದಿಪಾತ್ರದ ನೊಂದ ಕುಟುಂಬದವರ ಮನದಾಳದಿಂದ ಬಂದ ಆರ್ತನಾದದ ಮಾತುಗಳು. ಆಗಸ್ಟ್ ಮೊದಲ ವಾರದಲ್ಲಿ ಮಹಾರಾಷ್ಟ್ರದಲ್ಲಿ ಸುರಿದಿದ್ದ ಭಾರಿ ಮಳೆಗೆ ರಬಕವಿಯ ಕೃಷ್ಣ ನದಿ ಮೈದುಂಬಿ ಹರಿದಿತ್ತು. ಇದ್ರ ಪರಿಣಾಮ ನದಿ ಪಾತ್ರದ ಜನ್ರು ಕಂಡರಿಯದ ನೀರನ್ನ ನೋಡಿದ್ದು, ಬದುಕು ಮೂರಾಬಟ್ಟೆ ಯಾಗಿದೆ. ಬಾಗಲಕೋಟೆ ಮತ್ತು ಬೆಳಗಾಂ ಜಿಲ್ಲೆಯ ಸಂಪರ್ಕ ಸೇತುವೆ ಯಾಗಿದ್ದ ಮಹೀಷವಾಡಗಿ ಮತ್ತು ತಮದ್ದಡಿ ನಡುವಿನ ಸೇತುವೆ ಮುಳುಗಿದ್ದು, ಜನ-ಜಾನುವಾರುಗಳನ್ನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ದೋಣಿಯನ್ನ ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯ ತುಂಬ ನಿಂತಿದ್ದ ನೀರನ್ನ ಹೊರ ಹಾಕುವ ಕೆಲಸವನ್ನ ಮಾಡ್ತಿದ್ದಾರೆ. ಸಾಂಕ್ರಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆಯಾಗಿ ಗ್ರಾಮದಲ್ಲಿ ಔಷಧಿಯನ್ನ ಸಿಂಪಡಣೆ ಮಾಡಲಾಗಿದೆ. ನಿರಾಶ್ರಿತರ ತಾಣದಲ್ಲಿದ್ದ ಕುಟುಂಬದ ಸದಸ್ಯರುಗಳು ಈಗ ವಾಪಸ್ ಗ್ರಾಮಗಳಿಗೆ ಬಂದು ಮನೆಯನ್ನ ಸ್ವಚ್ಚಗೊಳಿಸಿಕೊಳ್ಳುವುದರಲ್ಲಿ ತಲ್ಲಿನರಾಗಿದ್ದು, ಪ್ರವಾಹದಿಂದ ಒದಗಿಬಂದ ಕಷ್ಟವನ್ನ ಹೇಳುತ್ತಿದ್ದಾಗ ದುಃಖ ಉಮ್ಮಳಿಸಿ ಬರತೊಡಗಿತು.

ನೊಂದ ಕುಟುಂಬಕ್ಕೆ ಮಿಡಿದ ಮಕ್ಕಳ ಸಾಹಿತ್ಯ ಪರಿಷತ್ ನೇತೃತ್ವದ ತಂಡ:

ಆಗಸ್ಟ್ ನಲ್ಲಿ ಅಬ್ಬರಿಸಿದ ಮಳೆಯಿಂದ ಬದುಕು ಕಳೆದುಕೊಂಡ ನಿರಾಶ್ರಿತರಿಗೆ ರಾಜ್ಯದ ಮೂಲೆ ಮೂಲೆಗಳಿಂದ ಸಂತ್ರಸ್ಥರಿಗೆ ಊಟ, ಬಟ್ಟೆ, ಬಿಸ್ಕತ್, ಜ್ಯೂಸ್ ಸೇರಿದಂತೆ ನಾನಾ ರೀತಿಯಲ್ಲಿ ಪರಿಹಾರ ಸಾಮಗ್ರಿಗಳನ್ನ ಸಾರ್ವಜನಿಕರು, ಖಾಸಗಿ ಕಂಪನಿಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ ಸಾಕಷ್ಟು ಮಂದಿ ನೆರೆ ಸಂತ್ರಸ್ಥರಿಗೆ ಸಹಾಯಹಸ್ತ ನೀಡಿದ್ದಾರೆ. ಅದ್ರಂತೆ ಮಳೆ ನಿಂತು ಹೋದ ಮೇಲೆ ಆ ಭಾಗದ ಜನರಿಗೆ ಬೇಕಾಗಿರುವುದು ಕೆಲ ಮೂಲಭೂತ ಸೌಕರ್ಯಗಳು. ಹಾಗಾಗಿ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಮತ್ತು ಈಟಿವಿ ನ್ಯೂಸ್ ಸಹಯೋಗದಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಲಯನ್ಸ್ ಸಂಸ್ಥೆ, ನಾಗರೀಕ ವೇದಿಕೆ, ಯುವ ಬ್ರಿಗೇಡ್, ಶಾಲಿನಿ ವಿದ್ಯಾಶಾಲೆ, ಶ್ರೀಗಣಪತಿ ಸೇವಾ ಸಮಿತಿ, ಸೇರಿದಂತೆ ಹಲವು ಮಂದಿ ಸಂಗ್ರಹಿಸಿದ ಸಾಮಗ್ರಿಗಳನ್ನ ಹೊತ್ತು ಹೊರಟ ವಾಹನಕ್ಕೆ ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ 3ದಿನಗಳ ಹಿಂದೆ ಚಾಲನೆ ನೀಡಿದ್ರು.

ಮೂರು ಗ್ರಾಮಗಳ 300 ಕುಟುಂಬಕ್ಕೆ ಕಿಟ್ ವಿತರಣೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಭದ್ರಗಿರಿ ಬೆಟ್ಟ, ಹಳ್ಳಿಂಗಳಿ, ತಮದ್ದಡಿ (ರಬಕವಿ-ಬನಹಟ್ಟಿ) ಮದನಮಟ್ಟಿಯ ಗ್ರಾಮಗಳಿಗೆ ತೆರೆಳಿದ ಮಕ್ಕಳ ಸಾಹಿತ್ಯ ಪರಿಷತ್ ನೇತೃತ್ವದ ತಂಡ ನೊಂದ ಕುಟುಂಬದ ಮನೆಗಳಿಗೆ ಸಾಂತ್ವಾನ ಹೇಳಿದ್ದು, ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನ ಮಾಡಿ ಸುಮಾರು 5 ಲಕ್ಷಕ್ಕೂ ಅಧಿಕ ಮೌಲ್ಯದ ಉಚಿತ ಔಷಧಿಗಳನ್ನ ಹಾಗೂ 10ಲಕ್ಷಕ್ಕೂ ಹೆಚ್ಚು ಮೌಲ್ಯದ ಆಹಾರವನ್ನ ತಯಾರಿಸಲು ಬೇಕಾದ ಪಾತ್ರೆಗಳು ಆಹಾರ ಧಾನ್ಯಗಳು ಮತ್ತು ಹೆಣ್ಣುಮಕ್ಕಳಿಗೆ ಬೇಕಾದ ನ್ಯಾಪ್ಕಿನ್ ಮುಂದಾದವುಗಳನ್ನ ತಮದ್ದಡ್ಡಿ, ಹಳ್ಳಂಗಳಿ, ಮತ್ತು ಬೆಳಗಾಂ ಜಿಲ್ಲೆಯ ಅಥಣಿ ತಾಲ್ಲೂಕಿನ ಕೃಷ್ಣನದಿ ತೀರದ ಮಹೇಷವಾಡಿಗಿ ಗ್ರಾಮದ ತಲಾ 100 ಕುಟುಂಬಗಳನ್ನ ಗುರುತಿಸಿ 300 ಮನೆಗಳಿಗೆ ಕಿಟ್ ವಿತರಣೆ ಮಾಡಲಾಯ್ತು. ಪ್ರವಾಹ ಬಂದ ಹಿನ್ನಲೆಯಲ್ಲಿ ಲಕ್ಷಾಂತರ ಮೌಲ್ಯದ ಬೆಳೆಹಾನಿಯಾಗಿದ್ದು, ಹಲವು ಹಳ್ಳಿಗಳು ಮುಳುಗಡೆಯಾಗಿದ್ದು, ಸದ್ಯ ಚೇತರಿಸಿಕೊಳ್ಳುತ್ತಿವೆ. ಇಂದು ಸರ್ಕಾರವಷ್ಟೆಯಲ್ಲದೇ ಖಾಸಗಿ ಕಂಪನಿಗಳು, ರಾಜ್ಯದ ನಾನಾ ಭಾಗದ ಜನ್ರು ತಮ್ಮ ಕೈಲಾದ ಸಹಾಯ ಮಾಡ್ತಿರೊದು ನಿಜಕ್ಕೂ ಶ್ಲಾಘನೀಯ.

ಬೈಟ್: ಸಂಜಯ್ ನಾಟಗೌಡ, ಭದ್ರಗಿರಿ ಟ್ರಸ್ಟ್ ಅಧ್ಯಕ್ಷ. (ಬಿಳಿ ಅಂಗಿ ಧರಿಸಿರುವವರು)

ಬೈಟ್: ಸತೀಶ್, ಸ್ಥಳೀಯರು, ರಭಕವಿ. (ನೀಲಿ ಬಣ್ಣದ ಅಂಗಿ ಧರಿಸಿರುವವರು)

100 ವರ್ಷಗಳಲ್ಲಿ ಇಂತಹುದೊಂದು ಪ್ರವಾಹ ಕಂಡಿಲ್ಲ.

1914ರಲ್ಲಿ ಇಂತಹದೊಂದು ಪ್ರವಾಹ ಬಂದಿತ್ತು ಅಂತ ನಮ್ಮೂರಿನ ಕಾಕಾರೊಬ್ಬರು ಹೇಳ್ತಾರೆ. ಅದಾದ ಬಳಿಕ ಇಂತಹ ಪ್ರವಾಹ ನೋಡಿದ್ದು ನಾವು ಇದೇ ಮೊದಲು. ನಮ್ಮ ಭಾಗದ ಮನೆಗೆ ಸಾಕಷ್ಟು ಹಾನಿಯಾಗಿದೆ. ಇದಲ್ಲದೇ 20-30 ಜಾನುವಾರುಗಳು ಸಾವಿಗೀಡಾಗಿದ್ದು, ಸರ್ಕಾರ ಸದ್ಯ ಸಣ್ಣದೊಂದು ಸ್ನಾನದ ಮನೆ ನಿರ್ಮಿಸಿಕೊಟ್ಟಿದೆ. ಆದ್ರೆ ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಸ್ನಾನ ಮಾಡೋದು ತುಂಬಾ ಕಷ್ಟವಾಗುತ್ತಿದೆ. ಮೊದಲು ಮಳೆಯಿಲ್ಲದೇ ಸಾಯುವ ಸ್ಥಿತಿ ಇತ್ತು. ಇವತ್ತು 4ದಿನದಲ್ಲಿ ಮಳೆ ಬಂದು ಮತ್ತೆ ಸಾಯುವ ಹಾಗಾಗಿದೆ. ಕುಡಿಯುವ ನೀರಿಗೂ ತೊಂದರೆಯಾಗಿದೆ. ಇಂತಹುದರಲ್ಲಿ ಹಾಸನದಿಂದ ನಮ್ಮ ಕಷ್ಟಕ್ಕೆ ಸ್ಪಂದಿಸಿರೋ ಎಲ್ಲ ನನ್ನ ಸಾಹುಕಾರರಿಗೆ ನಾವು ಚಿರಋಣಿಯಾಗಿರುತ್ತೇವೆ ಎನ್ನುತ್ತಾರೆ ಈ ಅಜ್ಜರೊಬ್ಬರು. ಅಲ್ಲದೇ ಈ ಭಾಗಕ್ಕೆ ಸಾಕಷ್ಟು ಪರಿಹಾರ ಸಾಮಗ್ರಿಗಳು ಬಂದಿರಬಹುದು. ಆದ್ರೆ ಕೆಲವೊಂದನ್ನ ಈ ಭಾಗದ ಜನ್ರು ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ಆದ್ರೆ ಮಕ್ಕಳ ಸಾಹಿತ್ಯ ಪರಿಷತ್ ಮತ್ತು ಈಟಿವಿ ಸಹಯೋಗದೊಂದಿಗೆ ಹಾಸನ ಜಿಲ್ಲೆಯ ನಾನಾ ಸಂಘಟನೆಗಳು ಮಳೆ ನಿಂತ ಮೇಲೆ ಕುಟುಂಬಗಳಿಗೆ ಬೇಕಾದಂತಹ ಅಡುಗೆ ಸಾಮಗ್ರಿಗಳಿಂದ ಹಿಡಿದು ಆರೋಗ್ಯ ತಪಾಸಣೆ ಮತ್ತು ಉಚಿತ ಔಷಧಿ ನೀಡುತ್ತಿರುವುದು ತುಂಬಾ ಉತ್ತಮ ಕೆಲಸ. ಮುಂದೆ ನಿಮ್ಮ ಸೇವೆ ಮುಂದುವರೆಯಲಿ ಎಂಬುದು ಈ ಭಾಗದ ಯುವತಿಯೋರ್ವಳ ಮಾತು.

ಬೈಟ್: ಧರ್ಮಣ್ಣ ಶಿವಪ್ಪ ಗೋರುರ್, ಹಳ್ಳಂಗಳಿ.
ಬೈಟ್: ಗೌರಮ್ಮ, ಕಾಲೇಜು ಯುವತಿ, ಬಿಳಗಿ.

ಇನ್ನು ಬೆಳಗಾಂ ಮತ್ತು ಬಾಗಲಕೋಟೆ ಜಿಲ್ಲೆಯ ನಡುವಿನ ಸಂಪರ್ಕವನ್ನ ಕಲ್ಪಿಸುವ ತಮದ್ದಡ್ಡಿ ಮತ್ತು ಮಹಿಷವಾಡಗಿ ನಡುವಿನ ಸಂಪರ್ಕ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಜನ-ಜಾನುವಾರುಗಳನ್ನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವುದಕ್ಕೆ ಸದ್ಯ ಬೋಟ್ ವ್ಯವಸ್ಥೆ ಮಾಡಲಾಗಿದೆ.

ಒಟ್ಟಾರೆ ಕೃಷ್ಣ ನದಿಯ ತೀರದ ಗ್ರಾಮಗಳಷ್ಟೆಯಲ್ಲದೇ ರಾಜ್ಯದ 324ಕ್ಕೂ ಅಧಿಕ ಹಳ್ಳಿಗಳು ಪ್ರವಾಹ ಪೀಡಿತವಾಗಿದ್ದು, ನೊಂದ ಕುಟುಂಬಕ್ಕೆ ರಾಜ್ಯದ ಮೂಲೆ ಮೂಲೆಗಳಿಂದಲೂ ಪರಿಹಾರ ಕಾರ್ಯ ಭರದಿಂದ ಸಾಗಿದ್ದು, ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಮಕ್ಕಳ ಸಾಹಿತ್ಯ ಪರಿಷತ್ ಮತ್ತು ಈಟಿವಿ ಸಹಯೋಗದಲ್ಲಿ ವಿಭಿನ್ನವಾಗಿ ಪರಿಹಾರ ವಿತರಣೆ ಮತ್ತು ಆರೋಗ್ಯತಪಾಸಣೆ ಮಾಡಿ ಉಚಿತ ಔಷಧೋಪಚಾರ ಮಾಡಿದ್ದನ್ನ ಈ ಭಾಗದ ಜನ್ರಿಗೆ ಸಾಕಷ್ಟು ಉಪಯುಕ್ತವಾಗಿದೆ. ಮುಂದಿನ ದಿನದಲ್ಲಿ ಇಂತಹವರುಗಳ ಸಾಮಾಜಿಕ ಕಳಕಳಿಯ ಸೇವೆ ಮತ್ತಷ್ಟು ಮುಂದುವರೆಯಲಿ ಎಂಬುದು ನಮ್ಮ ಈಟಿವಿ ಭಾರತದ ಆಶಯ ಕೂಡಾ...

ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

Body:0

Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.