ಹಾಸನ : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಲು ಹೋಗಿ ಪೋಸ್ಕೋ ಪ್ರಕರಣದ ಅಡಿ ಜೈಲುಪಾಲಾಗಿದ್ದ ಆರೋಪಿ ಅಲ್ಲಿಂದಲೇ ದೂರು ಕೊಟ್ಟವರ ಮೇಲೆ ಹಲ್ಲೆ ಮಾಡಿಸಿರುವ ಘಟನೆ ಅರಸೀಕೆರೆಯಲ್ಲಿ ನಡೆದಿದೆ. ಆನಂದ್ ಎಂಬಾತನೇ ದೂರು ಕೊಟ್ಟ ಮಹಿಳೆ ಮೇಲೆ ಹಲ್ಲೆ ಮಾಡಿಸಿದ ಆರೋಪಿ. ಇನ್ನು, ಹಲ್ಲೇ ಮಾಡಿದ ನವೀನ್ ಹಾಗೂ ಲೋಕೇಶ್ ಎಂಬುವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲು ಮಾಡಿದ್ದಾರೆ.
ಏನಿದು ಪ್ರಕರಣ?: ಅರಸೀಕೆರೆ ತಾಲೂಕಿನ ಮಲದೇವಿಹಳ್ಳಿ ಗ್ರಾಮದ ಮಂಜುಳಾ ಮತ್ತು ಜೈಲಿನಲ್ಲಿರುವ ಆರೋಪಿ ಆನಂದನಿಗೂ 6-7 ವರ್ಷಗಳಿಂದ ಅಕ್ರಮ ಸಂಬಂಧವಿತ್ತಂತೆ. ಮಂಜುಳಾಗೆ ಒಬ್ಬಳು ಅಪ್ರಾಪ್ತೆ ಮಗಳಿದ್ದು, ಆಕೆಯ ಮೇಲೆ ಆನಂದ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅತ್ಯಾಚಾರವೆಸಗಲು ಮುಂದಾಗಿದ್ದ. ಈ ವೇಳೆ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಪೋಸ್ಕೋ ಪ್ರಕರಣದ ಅಡಿ ದೂರು ದಾಖಲಾಗಿ ಆನಂದ್ ಜೈಲುಪಾಲಾಗಿದ್ದ.
ಜೈಲಿನಲ್ಲಿರುವ ಆನಂದ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಂಜುಳಾ ಕುಟುಂಬಕ್ಕೆ ಸಾಕಷ್ಟು ಆರ್ಥಿಕ ಸಹಾಯ ಮಾಡಿದ್ದ. ಹಾಗಾಗಿ, ಆ ದೃಷ್ಟಿಯಿಂದ ಪ್ರಕರಣವನ್ನು ವಾಪಸ್ ಪಡೆದು ರಾಜಿ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದ. ಆದರೆ, ಇದಕ್ಕೆ ಮಂಜುಳಾ ಒಪ್ಪಿಲ್ಲ. ಇದರಿಂದ ರೊಚ್ಚಿಗೆದ್ದ ಆನಂದ್, ಸ್ಥಳೀಯ ಪುಡಿರೌಡಿಗಳ ಸಹಾಯ ಪಡೆದು ಮಂಜುಳಾ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಓದಿ: BSYರನ್ನು ರಾಜ್ಯಾಧ್ಯಕ್ಷರಾಗಿ ಮಾಡಿದಾಗ ನೀವು ಯಾವ ವೇಷ ಹಾಕಿಕೊಂಡಿದ್ರಿ: ಈಶ್ವರಪ್ಪಗೆ ರೇಣುಕಾ ಟಾಂಗ್