ಹಾಸನ : ಕಾಡಾನೆಯನ್ನು ಕೊಂದು ಬಳಿಕ ದಂತವನ್ನು ಬೇರ್ಪಡಿಸಿ, ಮಾರಾಟ ಮಾಡಲು ಯತ್ನಿಸಿದ ಐವರನ್ನು ಪೊಲೀಸ್ ಹಾಗೂ ಅರಣ್ಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಮಾಡಿ ಬಂಧಿಸಿದ್ದಾರೆ.
ಹಾಸನದ ವೀರಾಪುರದ ಚಂದ್ರೇಗೌಡ(48) ನಾಗರಾಜ್(42) ತಿಲಕ್ (39), ತಮ್ಮಯ್ಯ ಹಾಗೂ ಪಾಪಯ್ಯ ಬಂಧಿತ ಆರೋಪಿಗಳಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಗ್ರಾಮದ 8ಕ್ಕೂ ಅಧಿಕ ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದೆ.
ಕೃಷಿಗೆ ಕಾಡಾನೆಗಳ ಉಪಟಳ ತಪ್ಪಿಸಲು ಆರೋಪಿಗಳು ಆನೆಯನ್ನು ಕೊಲ್ಲಲು ಯೋಜನೆ ರೂಪಿಸಿದ್ದರು. ಅದರಂತೆ ವಿದ್ಯುತ್ ತಂತಿಯಿಂದ ಜಮೀನಿಗೆ ಬೇಲಿ ಮಾಡಿದ್ದರು. ವಿದ್ಯತ್ ತಂತಿಗೆ ಆನೆ ತಗುಲಿ ಮೃತ ಪಟ್ಟಿತ್ತು. ಆರೋಪಿಗಳು ಆನೆಯ ದಂತವನ್ನು ಬೇರ್ಪಡಿಸಿ ರಾತ್ರೋರಾತ್ರಿ ಜಮೀನಿನಲ್ಲಿ ಹೂತು ಹಾಕಿದ್ದರು.
ದಂತವನ್ನು ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಮಾರಾಟ ಮಾಡಲು ಯತ್ನ ಮಾಡುತ್ತಿದ್ದಾಗ ಬೆಂಗಳೂರು ಪೊಲೀಸರು ಹಾಗೂ ಹಾಸನ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ಹಾಸನದ ವೀರಾಪುರ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ಅರಣ್ಯಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಹೂತು ಹಾಕಲಾಗಿದ್ದ ಆನೆಯ ಮೃತದೇಹವನ್ನ ಜೆಸಿಬಿ ಮೂಲಕ ಹೊರ ತೆಗೆಯಲಾಗಿದೆ.
ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಂದ ಇನ್ನಷ್ಟು ಮಾಹಿತಿಕಲೆ ಹಾಕುತ್ತಿದ್ದು, ಸದ್ಯ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಇದನ್ನೂ ಓದಿ: ಊಟದಲ್ಲಿ ಹೆಚ್ಚಿನ ಮಾಂಸದ ತುಂಡುಗಳನ್ನು ಬಡಿಸಿಲ್ಲ ಎಂದು ಮನಸ್ತಾಪ, ಸ್ನೇಹಿತನ ಕೊಲೆ