ಹಾಸನ: ಪುಂಡಾನೆಗಳು ಕಾಣಿಸಿಕೊಂಡು ಮತ್ತೆ ಮಲೆನಾಡು ಜನರ ನಿದ್ದೆಗೆಡಿಸಿವೆ. ಆಲೂರು ತಾಲೂಕಿನ ಕುಂದ್ರಳ್ಳಿಯ ಕಾಫಿತೋಟದಲ್ಲಿ ಮರಿಗಳು ಸೇರಿ ಸುಮಾರು 18 ಕ್ಕೂ ಹೆಚ್ಚು ಆನೆಗಳು ಓಡಾಡಿದ್ದು, ಕಾಫಿ ಬೆಳೆ ನಾಶವಾಗಿದೆ.
ಆನೆಗಳು ಆಹಾರ ಮತ್ತು ನೀರನ್ನು ಅರಸಿ ನಾಡಿನೆಡೆಗೆ ಬರುತ್ತಿವೆ. ಯಸಳೂರು, ಕೆ.ಹೊಸಕೋಟೆ, ಮಗ್ಗೆ, ರಾಯರಕೊಪ್ಪಲು ಮುಂತಾದ ಕಡೆಯಲ್ಲಿ ಭತ್ತದ ಗದ್ದೆಗಳಿಗೂ ದಾಳಿ ನಡೆಸಿದ್ದು, ಬೆಳೆಹಾನಿಯಾಗಿದೆ. ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಪಟಾಕಿ ಸಿಡಿಸಿ ಆನೆಗಳನ್ನ ಓಡಿಸುವ ಯತ್ನ ಮಾಡಿದರು.