ETV Bharat / state

ಹಾಸನದಲ್ಲಿ ಚಿರತೆಗಳ ಕೊಂದು ಉಗುರು, ಮೂಳೆ ಮಾರಾಟ: 8 ಮಂದಿ ಆರೋಪಿಗಳ ಬಂಧನ

ಪ್ರತ್ಯೇಕ ಪ್ರಕರಣಗಳಲ್ಲಿ ಚಿರತೆ ಕೊಂದು ಉಗುರು ಹಾಗೂ ಮೂಳೆ ಮಾರಾಟ ಮಾಡಲು ಯತ್ನಿಸಿದ 8 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

SP BYTE
ಚಿರತೆ ಉಗುರು ಮತ್ತು ಮೂಳೆ ಮಾರಾಟ ಪ್ರಕರಣ
author img

By

Published : Dec 3, 2022, 11:05 PM IST

Updated : Dec 4, 2022, 8:10 AM IST

ಹಾಸನ: ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಚಿರತೆಗಳನ್ನು ಕೊಂದು, ಉಗುರು ಮತ್ತು ಮೂಳೆ ಮಾರಾಟ ಮಾಡಲು ಯತ್ನಿಸಿದ 8 ಮಂದಿ ಆರೋಪಿಗಳನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ. ಬೇಲೂರು ಹಾಗೂ ಆಲೂರು ಅರಣ್ಯ ವಲಯ ಪ್ರದೇಶದಲ್ಲಿ ಈ ಪ್ರಕರಣಗಳು ನಡೆದಿವೆ.

ಮೊದಲ ಪ್ರಕರಣ: ಹಳೇಬೀಡು ಹೋಬಳಿಯ ಕೋಮಾರನಹಳ್ಳಿಯಲ್ಲಿ ಸುಮಾರು 3ರಿಂದ 4 ವರ್ಷ ಪ್ರಾಯದ ಹೆಣ್ಣು ಚಿರತೆಯನ್ನು ಚಾನುವಾರು ಹಿಡಿಯಲು ಬಂದಿತ್ತೆಂದು ಉರುಳು ಹಾಕಿ ಕೊಲ್ಲಲಾಗಿತ್ತು. ಬಳಿಕ ಮೂಳೆ ಹಾಗೂ ಉಗುರು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಆರೋಪಿಗಳನ್ನು ಬಂಧಿಸಲಾಗಿದೆ. ರವಿ, ಮೋಹನ್​ ಹಾಗೂ ಮಾರಾಟಕ್ಕೆ ಸಹಾಯ ಮಾಡಿದ ಎಟಿಎಂ ಸೆಕ್ಯೂರಿಟಿ ಗಾರ್ಡ್​ ಆಗಿದ್ದ ಸ್ವಾಮಿ ಎಂಬುವರೆ ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿ ರವಿ ಹಾಗೂ ಮೋಹನ್​ ಚಿರತೆ ಕೊಂದು ತಿಪ್ಪೆಯಲ್ಲಿ ಹೂತು ಹಾಕಿದ್ದರು. ಚಿರತೆ ಕೊಂದ ಬಳಿಕ ಏನು ಮಾಡಬೇಕೆಂದು ತೋಚದೇ, ಎಟಿಎಂ ಸೆಕ್ಯೂರಿಟಿ ಗಾರ್ಡ್ ಸ್ವಾಮಿ ಎಂಬಾತನ ಸಹಾಯ ಪಡೆದಿದ್ದರು. ಉಗುರುಗಳನ್ನು ತೆಗೆದುಕೊಂಡ ನಂತರ ಮೃತದೇಹವನ್ನು ಕೋಮಾರನಹಳ್ಳಿಯಲ್ಲಿನ ತಿಪ್ಪೆಗುಂಡಿಯಲ್ಲಿ ಹೂತು ಹಾಕಲಾಗಿತ್ತು. ಬಳಿಕ ಅದರ ಕೆಲ ಮೂಳೆ ಮತ್ತು ಉಗುರುಗಳನ್ನು ಮಾರಾಟ ಮಾಡಲು ಬಂದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಮಾರಾಟ ಮಾಡಲು ಸೆಕ್ಯೂರಿಟಿ ಗಾರ್ಡ್ ಸಹಾಯ ಮಾಡಿದ್ದ.

ಹಾಸನದಲ್ಲಿ ಚಿರತೆಗಳ ಕೊಂದು ಉಗುರು, ಮೂಳೆ ಮಾರಾಟ

ಎರಡನೇ ಪ್ರಕರಣ: ಆಲೂರು ಅರಣ್ಯ ವಲಯದ ಮಾದಿಹಳ್ಳಿ ಗ್ರಾಮದಲ್ಲಿ 7ರಿಂದ 8 ವಯಸ್ಸಿನ ಗಂಡು ಚಿರತೆಯನ್ನು ಕೊಂದು ಉಗುರುಗಳಿಗೋಸ್ಕರ ನಾಲ್ಕು ಪಾದಗಳನ್ನು ಕಟ್​ ಮಾಡಿ ಕೊಂಡೊಯ್ಯಲಾಗಿತ್ತು. ಇದರಲ್ಲಿ ಮಂಜೇಗೌಡ, ಮೋಹನ್, ಕಾಂತರಾಜು ರೇಣುಕಾ ಕುಮಾರ್ ಹಾಗೂ ಕಾಂತರಾಜು ಎಂಬುವ​ರನ್ನು ಬಂಧಿಸಲಾಗಿದೆ.

ಈ ಐವರು ಆರೋಪಿಗಳು ಹಾಸನ ಸಮೀಪದ ದೇವರಾಯಪಟ್ಟಣದ ಬೈಪಾಸ್ ಬಳಿ ಓಮಿನಿ ಕಾರು ಮತ್ತು ಬೈಕ್​ಗಳನ್ನು ನಿಲ್ಲಿಸಿಕೊಂಡು ಚಿರತೆಯ ನಾಲ್ಕು ಪಾದ ಮತ್ತು 18 ಉಗುರುಗಳನ್ನು ಮಾರಾಟ ಮಾಡುತ್ತಿದ್ದ ವೇಳೆ ಬಂಧಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ಚಿರತೆಯ ಉಗುರು ಮತ್ತು ಪಾದಗಳನ್ನು ವಶಕ್ಕೆ ಪಡೆಯಲಾಗಿದೆ.

ಸದ್ಯ ಎರಡೂ ಪ್ರಕರಣಗಳಲ್ಲಿ 8 ಮಂದಿ ಆರೋಪಿಗಳನ್ನು ಬಂಧಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ಬಂಧಿತರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ: ಚಾಮರಾಜನಗರ: ಮೂವರು ಬೇಟೆಗಾರರ ಬಂಧನ, 18 ಚಿರತೆ ಉಗುರು, 8 ಹಲ್ಲು ವಶ

Last Updated : Dec 4, 2022, 8:10 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.