ETV Bharat / state

ಎಣ್ಣೆ ಹೊಡಿಯೋಕೆ ಬಾಜಿಕಟ್ಟಿ ಪ್ರಾಣ ಕಳೆದುಕೊಂಡ ವ್ಯಕ್ತಿ: ಹೊಳೆನರಸೀಪುರದಲ್ಲಿ ಪ್ರಕರಣ

ಹೊಳೆನರಸೀಪುರ ತಾಲೂಕಿನ ಸಿಗರನಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ದೇವರಾಜ್ ಮತ್ತು ತಿಮ್ಮೇಗೌಡ ಎಂಬ ಇಬ್ಬರು ಅರ್ಧ ಗಂಟೆಯಲ್ಲಿ 90 ಎಂಲ್‌ನ 10 ಪ್ಯಾಕೆಟ್ ಮದ್ಯ ಕುಡಿಯುವ ಚಾಲೆಂಜ್ ಕಟ್ಟಿದ್ದರು. ಅದರಂತೆ ನಡೆದ ಚಾಲೆಂಜ್‌ನಲ್ಲಿ ಹೆಚ್ಚು ಮದ್ಯ ಸೇವಿಸಿದ್ದ ತಿಮ್ಮೇಗೌಡ(60) ಸಾವಿಗೀಡಾಗಿದ್ದಾನೆ.

Thimmegowda
ತಿಮ್ಮೇಗೌಡ
author img

By ETV Bharat Karnataka Team

Published : Sep 20, 2023, 4:44 PM IST

ಹಾಸನ: ಕುಸ್ತಿ ಪಂದ್ಯ, ಚುನಾವಣೆ,​ ಟಗರು ಕಾಳಗ ಹೀಗೆ ಬೇರೆ ಬೇರೆ ಸಂದರ್ಭದಲ್ಲಿ ಜನರು ಬಾಜಿ ಕಟ್ಟಿದ್ದನ್ನು ನೋಡಿದ್ದೇವೆ. ಆದ್ರೆ ಇಲ್ಲೋರ್ವ ವ್ಯಕ್ತಿ ಎಣ್ಣೆ ಹೊಡಿಯೋಕೆ ಬಾಜಿ ಕಟ್ಟಿ ಜೀಳ ಕಳೆದುಕೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಹೌದು, ಮದ್ಯ ಸೇವನೆ ವೇಳೆ ಬಾಜಿ ಕಟ್ಟಿದ ವ್ಯಕ್ತಿಯೊಬ್ಬನು ಅಳತೆ ಮೀರಿ ಕುಡಿದು ಪ್ರಾಣ ಕಳೆದುಕೊಂಡಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಸಿಗರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ರಕ್ತ ವಾಂತಿ ಮಾಡಿಕೊಂಡು ತಿಮ್ಮೇಗೌಡ ಸಾವು.. ಗ್ರಾಮದ ಬಸ್ ನಿಲ್ದಾಣದಲ್ಲಿ ದೇವರಾಜ್ ಮತ್ತು ತಿಮ್ಮೇಗೌಡ ಎಂಬ ಇಬ್ಬರು ಅರ್ಧ ಗಂಟೆಯಲ್ಲಿ 90 ಎಂಲ್‌ನ 10 ಪ್ಯಾಕೆಟ್ ಮದ್ಯ ಕುಡಿಯುವ ಚಾಲೆಂಜ್ ಕಟ್ಟಿದ್ದರು. ಅದರಂತೆ ನಡೆದ ಚಾಲೆಂಜ್‌ನಲ್ಲಿ ಹೆಚ್ಚು ಮದ್ಯ ಸೇವಿಸಿದ್ದ ತಿಮ್ಮೇಗೌಡ(60) ಸಾವಿಗೀಡಾಗಿದ್ದಾನೆ. ಮೂವತ್ತು ನಿಮಿಷದಲ್ಲಿ 90 ಎಂಲ್‌ನ ಹತ್ತು ಪ್ಯಾಕೇಟ್ ಮದ್ಯ ಕುಡಿಯುವ ಚಾಲೆಂಜ್ ಕಟ್ಟಿದ್ದ. ಇಬ್ಬರಿಗೂ ಕೃಷ್ಣೇಗೌಡ ಎಂಬಾತ ಮದ್ಯದ ಪ್ಯಾಕೆಟ್‌ಗಳನ್ನು ನೀಡಿದ್ದನು. ಈ ಚಾಲೆಂಜ್‌ ಗೆಲ್ಲಲು ಮದ್ಯ ಕುಡಿದು, ರಕ್ತ ವಾಂತಿ ಮಾಡಿಕೊಂಡು ತಿಮ್ಮೇಗೌಡ ಬಸ್ ನಿಲ್ದಾಣದಲ್ಲೇ ಬಿದ್ದಿದ್ದ. ತಿಮ್ಮೇಗೌಡ ಅಸ್ವಸ್ಥ ಆಗುತ್ತಲೇ ದೇವರಾಜು ಮತ್ತು ಕೃಷ್ಣೇಗೌಡ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.

ಕುಡಿದು ಸುಸ್ತಾಗಿ ಬಿದ್ದಿದ್ದ ತಿಮ್ಮೇಗೌಡನನ್ನು ಗ್ರಾಮಸ್ಥರು ಮನೆಗೆ ಕರೆತಂದು ಬಿಟ್ಟಿದ್ದರು. ಇನ್ನು ಹಬ್ಬಕ್ಕಾಗಿ ತಿಮ್ಮೇಗೌಡನ ಮನೆಯವರು ಸಂಬಂಧಿಕರ ಮನೆಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ತಿಮ್ಮೇಗೌಡ ಸಾವಿಗೀಡಾಗಿದ್ದಾನೆ.

ಬಾಜಿ ಕಟ್ಟಿದ ಘಟನೆ ಬಗ್ಗೆ ತಿಮ್ಮೇಗೌಡರ ಪುತ್ರಿ ದೂರು ನೀಡಿದ್ದು, ದೇವರಾಜು ಹಾಗೂ ಕೃಷ್ಣೇಗೌಡ ವಿರುದ್ಧ ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂಓದಿ: ಚಿಕ್ಕೋಡಿ: ಕೂದಲು ಆರಿಸುವ ವಿಚಾರಕ್ಕೆ ಗಲಾಟೆ.. ಬಾಲಕನ ಕೊಂದು ಬಾವಿಗೆಸೆದ ಕಿರಾತಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.