ಹಾಸನ: ಅಕ್ರಮವಾಗಿ ಉಡುಪಿಯಿಂದ ಹಾಸನಕ್ಕೆ ಮಾದಕ ವಸ್ತು ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನು ಕೆಎಸ್ಆರ್ಟಿಸಿ ಬಸ್ ಮೂಲಕ ಉಡುಪಿಯಿಂದ ಹಾಸನಕ್ಕೆ ಸುಮಾರು ಎರಡು ಬಾಕ್ಸ್ಗಳಲ್ಲಿ ತಲಾ ನೂರು ಬಾಟಲ್ಗಳಂತೆ ಬ್ಯಾನ್ ಆಗಿರುವ ಔಷಧಿ ಬಾಟಲ್ಗಳನ್ನು ನೇರವಾಗಿ ಸ್ಥಳೀಯ ಮಾದಕ ವ್ಯಸನಿಗಳಿಗೆ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಹಾಸನ ನಗರ ವೃತ್ತ ನಿರೀಕ್ಷಕ ಕೃಷ್ಣರಾಜ ಮತ್ತು ಅವರ ತಂಡ ಬಸ್ ನಿಲ್ದಾಣದಲ್ಲಿ ಆರೋಪಿ ಸಚಿನ್ ಎಂಬುವನನ್ನು ವಶಕ್ಕೆ ಪಡೆದು ಮಾರಾಟ ಮಾಡಲು ತಂದಿದ್ದ ಔಷಧಿ ಬಾಟಲಿ (ನಿಷೇಧವಾಗಿರುವ)ಗಳನ್ನು ವಶಪಡಿಸಿಕೊಂಡಿದ್ದಾರೆ.
ಸಾರಿಗೆ ಬಸ್ನಲ್ಲಿ ನಿಷೇಧಿತ 2 ಬಾಕ್ಸ್ ಔಷಧಿ ಬಾಕ್ಸ್ ಪತ್ತೆ
ಹಾಸನ ಬಡಾವಣೆ ಪೊಲೀಸರು ಆತನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಯಾವುದೇ ಕಾರಣಕ್ಕೂ ಇಂತಹ ಆಘಾತಕಾರಿ ಸಂಗತಿಗಳನ್ನು ಮುಂದಿನ ದಿನಗಳಲ್ಲಿ ಮರುಕಳಿಸಲು ನಾವು ಬಿಡುವುದಿಲ್ಲ. ಡ್ರಗ್ಸ್ ಪೆಡ್ಲರ್ಗಳನ್ನು ಮಟ್ಟಹಾಕಲು ಸಾರ್ವಜನಿಕರು ನಮಗೆ ಸಹಕಾರ ನೀಡಬೇಕು. ಇಂತಹ ಪ್ರಕರಣಗಳಲ್ಲಿ ಯಾವುದೇ ಮುಲಾಜಿಲ್ಲದೆ ಅವರಿಗೆ ತಕ್ಕ ಶಿಕ್ಷೆ ನೀಡಲಾಗುವುದು ಎಂದು ಎಸ್ಪಿ ಆರ್ ಶ್ರೀನಿವಾಸ್ ಗೌಡ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.