ಹಾಸನ: ಕಸ್ತೂರ ಬಾ ಕನ್ಯಾ ವಿದ್ಯಾಲಯ ಸಂಸ್ಥೆಯು ಸಂಸ್ಥಾಪಕಿ ಯಶೋಧಾ ದಾಸಪ್ಪ ಅವರ 115ನೇ ಜನ್ಮ ದಿನದ ನಿಮಿತ್ತ ಸಿಎಂ ಪರಿಹಾರ ದೇಣಿಗೆ ನೀಡಲಾಯಿತು.
ಕಸ್ತೂರ ಬಾ ಕನ್ಯಾ ವಿದ್ಯಾಲಯ ಸಂಸ್ಥೆಯ ಸಂಸ್ಥಾಪಕಿ ಯಶೋಧಾ ದಾಸಪ್ಪ ಅವರ 115ನೇ ಜನ್ಮ ದಿನದ ನಿಮಿತ್ತ 25,000 ರೂ. ಚೆಕ್ ಅನ್ನು ಸಂಸ್ಥೆ ಕಾರ್ಯದರ್ಶಿ ಹೆಚ್.ಎಂ. ಶಿವಣ್ಣ ಕೋವಿಡ್-19 ಸಿಎಂ ಪರಿಹಾರ ನಿಧಿಗೆ ತಲುಪಿಸಲು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ಹಸ್ತಾಂತರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಎಂ. ಶಿವಣ್ಣ ಅವರು, ಯಶೋಧಾ ದಾಸಪ್ಪ ಅವರು ಬದುಕಿದ್ದು, 75 ವರ್ಷಗಳು. ಅವರ ಜೀವಿತ ಅವಧಿಯಲ್ಲಿ ಅಪಾರ ಸಾಧನೆ ಮಾಡಿದರು. ರಾಜ್ಯದ ಪ್ರಥಮ ಮಹಿಳಾ ಮಂತ್ರಿಯಾಗಿದ್ದರು. ಕಸ್ತೂರಿ ಗಾಂಧಿ ಸ್ಮಾರಕ ಟ್ರಸ್ಟ್ ಮತ್ತು ಕಸ್ತೂರಿ ಕನ್ಯಾ ವಿದ್ಯಾಲಯದ ಸಂಸ್ಥಾಪಕರಾಗಿ ಮಹಿಳಾ ಮತ್ತು ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದರು ಎಂದರು.
ಗಾಂಧೀಜಿ ಅವರಿಗೆ ಪ್ರಿಯವಾದ ಮದ್ಯಪಾನ ನಿಷೇಧ, ಹರಿಜನೋದ್ಧಾರ, ಖಾದಿ ಗ್ರಾಮೋದ್ಯೋಗಕ್ಕಾಗಿ ದುಡಿದರು ಎಂದು ಹೇಳಿದರು.