ಹೈದರಾಬಾದ್: ಕ್ರಿಕೆಟ್‌ನಲ್ಲಿ ಬ್ಯಾಟರ್ಗಳು ರನ್ಗಳಿಸಿ ಅಥವಾ ಯಾವುದಾದರೂ ರೆಕಾರ್ಡ್ ಮುರಿದು ದಾಖಲೆ ಬರೆದಿರುವುದನ್ನು ನೋಡಿದ್ದೇವೆ. ಆದರೆ ವಿಶ್ವ ಕಂಡ ಶ್ರೇಷ್ಠ ಬ್ಯಾಟರ್ಗಳು ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತೀ ಹೆಚ್ಚು ಬಾರಿ ರನೌಟ್ ಆಗಿ ದಾಖಲೆ ಮಾಡಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ತಲಾ 3 ಆಟಗಾರರು ಈ ಪಟ್ಟಿಯಲ್ಲಿದ್ದಾರೆ. ಶ್ರೀಲಂಕಾ ಮತ್ತು ಆಸ್ಟ್ರೇಲಿಯಾದ ಇಬ್ಬರು ದಿಗ್ಗಜರು ಕೂಡಾ ಇದರಲ್ಲಿದ್ದಾರೆ.
ಹೆಚ್ಚು ಬಾರಿ ರನೌಟ್ ಆದ ಆಟಗಾರರು:
1. ರಾಹುಲ್ ದ್ರಾವಿಡ್ (ಭಾರತ): ರಾಹುಲ್ ದ್ರಾವಿಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಬಾರಿ ರನೌಟ್ ಆದ ದಾಖಲೆ ಹೊಂದಿದ್ದಾರೆ. ಭಾರತದ ಮಾಜಿ ನಾಯಕ ಎಲ್ಲ ಸ್ವರೂಪದಲ್ಲಿ ಒಟ್ಟು 53 ಬಾರಿ ರನೌಟ್ ಆಗಿದ್ದಾರೆ. ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ (ODI) 40 ಬಾರಿ, ಟೆಸ್ಟ್ ಕ್ರಿಕೆಟ್‌ನಲ್ಲಿ 13 ಬಾರಿ ರನೌಟ್ ಆಗಿದ್ದಾರೆ.
2. ಮಹೇಲಾ ಜಯವರ್ಧನೆ (ಶ್ರೀಲಂಕಾ): ಮಾಜಿ ಬಲಗೈ ಬ್ಯಾಟರ್ ಮಹೇಲಾ ಜಯವರ್ಧನೆ ಏಕದಿನ ಕ್ರಿಕೆಟ್‌ನಲ್ಲಿ 39 ಬಾರಿ ರನೌಟ್ ಆಗಿದ್ದರು. ಟೆಸ್ಟ್ ಪಂದ್ಯಗಳಲ್ಲಿ 7 ಮತ್ತು ಟಿ20Iಗಳಲ್ಲಿ 5 ಬಾರಿ ರನೌಟ್ ಆಗಿದ್ದರು. ಒಟ್ಟಾರೆ 51 ಬಾರಿ ಈ ರೀತಿ ಔಟಾಗಿದ್ದಾರೆ.
3. ಮರ್ವನ್ ಅಟಪಟ್ಟು: ಶ್ರೀಲಂಕಾದ ಆರಂಭಿಕ ಬ್ಯಾಟರ್ ಅಟಪಟ್ಟು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಬಾರಿ ರನೌಟ್ ಆಗಿರುವ ದಾಖಲೆ ಹೊಂದಿದ್ದಾರೆ. ಇವರು ಒಟ್ಟು 48 ಬಾರಿ ರನೌಟ್‌ಗಳನ್ನು ಎದುರಿಸಿದ್ದು, ಏಕದಿನದಲ್ಲಿ 41 ಮತ್ತು ಟೆಸ್ಟ್ ಪಂದ್ಯಗಳಲ್ಲಿ 7 ಬಾರಿ ಈ ರೀತಿ ಸಂಭವಿಸಿದೆ.
4. ರಿಕಿ ಪಾಂಟಿಂಗ್: ಆಸ್ಟ್ರೇಲಿಯಾದ ಮಾಜಿ ನಾಯಕ ಒಟ್ಟು 47 ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರನೌಟ್ ಆಗಿದ್ದು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಬಲಗೈ ಬ್ಯಾಟರ್ ಏಕದಿನ ಕ್ರಿಕೆಟ್‌ನಲ್ಲಿ 31, ಟೆಸ್ಟ್‌ನಲ್ಲಿ 15 ಮತ್ತು ಟಿ20ಯಲ್ಲಿ 1 ಬಾರಿ ರನೌಟ್ ಆಗಿರುವುದು ಗಮನಾರ್ಹ.
5. ಇಂಜಮಾಮ್-ಉಲ್-ಹಕ್: ಪಾಕಿಸ್ತಾನದ ಬ್ಯಾಟರ್ ಇಂಜಮಾಮ್-ಉಲ್-ಹಕ್ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಇವರು ಏಕದಿನದಲ್ಲಿ 40 ಮತ್ತು ಟೆಸ್ಟ್‌ನಲ್ಲಿ 6 ಬಾರಿ ರನೌಟ್ ಆಗಿದ್ದಾರೆ. ಒಟ್ಟಾರೆ 46 ಬಾರಿ ಇದು ಸಂಭವಿಸಿದೆ.
6. ವಾಸಿಂ ಅಕ್ರಮ್ (ಪಾಕಿಸ್ತಾನ): ಮಾಜಿ ವೇಗದ ಬೌಲರ್ ವಾಸಿಂ ಅಕ್ರಮ್ ಏಕದಿನ ಸ್ವರೂಪದಲ್ಲಿ ಒಟ್ಟು 38 ಬಾರಿ ರನ್ಔಟ್ಗೆ ಬಲಿಯಾಗಿದ್ದರು. ಟೆಸ್ಟ್‌ನಲ್ಲೂ 7 ಬಾರಿ ಸೇರಿ ಒಟ್ಟಾರೆ 45 ಬಾರಿ ರನ್‌ಔಟ್ ಬಲೆಗೆ ಬಿದ್ದಿದ್ದರು.
7. ಮೊಹಮ್ಮದ್ ಯೂಸುಫ್: ಪಾಕಿಸ್ತಾನದ ಮತ್ತೊಬ್ಬ ಕ್ರಿಕೆಟಿಗ ಮೊಹಮ್ಮದ್ ಯೂಸುಫ್ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಒಟ್ಟು 44 ಬಾರಿ ರನೌಟ್ ಆಗಿದ್ದಾರೆ. ಇದರಲ್ಲಿ ODIಗಳಲ್ಲಿ ಅತೀ ಹೆಚ್ಚು 38 ಬಾರಿ ರನೌಟ್ ಮತ್ತು ಟೆಸ್ಟ್ ಪಂದ್ಯಗಳಲ್ಲಿ 6 ಬಾರಿ ರನೌಟ್ ಆಗಿದ್ದಾರೆ.
8. ಸಚಿನ್ ತೆಂಡೂಲ್ಕರ್: ವಿಶ್ವದ ಶ್ರೇಷ್ಠ ಬ್ಯಾಟರ್, ದಾಖಲೆಗಳ ಸರದಾರ ಸಚಿನ್ ತೆಂಡೂಲ್ಕರ್ ಕೂಡ ಈ ಪಟ್ಟಿಯಲ್ಲಿದ್ದಾರೆ. ಸಚಿನ್ ತಮ್ಮ ವೃತ್ತಿಜೀವನದಲ್ಲಿ ರನ್ ಕಸಿಯಲು ಯತ್ನಿಸಿ ಒಟ್ಟು 43 ಬಾರಿ ರನೌಟ್ ಆಗಿ ಪೆವಿಲಿಯನ್ ಸೇರಿದ್ದರು. ಏಕದಿನದಲ್ಲೇ 34 ಬಾರಿ ಹೀಗೆ ಓಟಾಗಿದ್ದರೆ, ಟೆಸ್ಟ್ ಪಂದ್ಯಗಳಲ್ಲಿ 9 ಬಾರಿ ರನೌಟ್ ಆಗಿದ್ದರು.
9. ಅಲನ್ ಬಾರ್ಡರ್: ಆಸ್ಟ್ರೇಲಿಯಾ ದಂತಕಥೆ ಅಲನ್ ಬಾರ್ಡರ್ ಇದರಲ್ಲಿ ಒಂಬತ್ತನೇ ಸ್ಥಾನಿ. ಬಾರ್ಡರ್ ಒಟ್ಟು 40 ಬಾರಿ ರನೌಟ್ ಆಗಿದ್ದರು. ಏಕದಿನ ಕ್ರಿಕೆಟ್‌ನಲ್ಲಿ 28 ಮತ್ತು ಟೆಸ್ಟ್ ಪಂದ್ಯಗಳಲ್ಲಿ 12 ಬಾರಿ ಈ ರೀತಿ ಔಟ್ ಆಗಿದ್ದರು.
10. ಮೊಹಮ್ಮದ್ ಅಜರುದ್ದೀನ್: ಭಾರತದ ಮಾಜಿ ಬಲಗೈ ಬ್ಯಾಟರ್ ಮೊಹಮ್ಮದ್ ಅಜರುದ್ದೀನ್ 39 ಬಾರಿ ರನೌಟ್ ಆಗಿ ಪೆವಿಲಿಯನ್ ಹಾದಿ ತುಳಿದಿದ್ದರು. ODIಗಳಲ್ಲಿ 32 ಮತ್ತು ಟೆಸ್ಟ್‌ನಲ್ಲಿ 7 ಬಾರಿ ರನ್ ಔಟ್ ಬಲೆಗೆ ಬಿದ್ದಿದ್ದರು.
ಇದನ್ನೂ ಓದಿ: IND vs SA 2nd T20: ಭಾರತ ವಿರುದ್ಧ ಎದ್ದುಬಿದ್ದು ಗೆದ್ದ ದಕ್ಷಿಣ ಆಫ್ರಿಕಾ; 17 ವರ್ಷದ ದಾಖಲೆ ಸೇಫ್!