ETV Bharat / state

ಅರಸೀಕೆರೆ: ನಗರಸಭೆ ಸಿಬ್ಬಂದಿಯಿಂದಲೇ ಮಹತ್ವದ ದಾಖಲೆ ಕಳ್ಳತನ ಯತ್ನ

author img

By

Published : Aug 28, 2021, 5:46 PM IST

ಮಹತ್ವದ ದಾಖಲೆಗಳನ್ನು ನಗರಸಭೆಯ ಸಿಬ್ಬಂದಿಯೇ ಕದಿಯಲು ಯತ್ನಿಸಿರುವ ಘಟನೆ ನಡೆದಿದ್ದು, ಪ್ರಭಾರಿ ವ್ಯವಸ್ಥಾಪಕ ಕೃಷ್ಣೇಗೌಡ ನಗರಸಭೆಯ ದ್ವಿತೀಯ ದರ್ಜೆ ಸಹಾಯಕ ಪ್ರವೀಣ್ ವಿರುದ್ಧ ದೂರು ದಾಖಲಾಗಿದೆ.

document-theft-by-arasekere-municipality-staff
ಅರಸೀಕೆರೆ ನಗರಸಭೆಯಲ್ಲಿ ಸಿಬ್ಬಂದಿಯಿಂದಲೇ ಮಹತ್ವದ ದಾಖಲೆ ಕಳ್ಳತನ

ಹಾಸನ: ನ್ಯಾಯಾಲಯಕ್ಕೆ ನೀಡಬೇಕಾಗಿದ್ದ ಪ್ರಮುಖ ಕಡತಗಳನ್ನು ಕಚೇರಿಯಿಂದ ಮನೆಗೆ ಕದ್ದೊಯ್ಯುವ ವೇಳೆ ಅಧಿಕಾರಿ ಸಿಕ್ಕಿಬಿದ್ದಿರುವ ಘಟನೆ ಅರಸೀಕೆರೆ ನಗರಸಭೆಯಲ್ಲಿ ನಡೆದಿದೆ. ನಗರಸಭೆಯ ಪ್ರಭಾರಿ ವ್ಯವಸ್ಥಾಪಕ ಕೃಷ್ಣೇಗೌಡ ನಗರಸಭೆಯ ದ್ವಿತೀಯ ದರ್ಜೆ ಸಹಾಯಕ ಪ್ರವೀಣ್ ಮೂಲಕ ಕೆಲವು ಕಡತಗಳನ್ನು ಕಳ್ಳತನ ಮಾಡಿಸಿ ಸಾಗಿಸುವ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಮತ್ತು ಅಧ್ಯಕ್ಷರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಅರಸೀಕೆರೆ ನಗರಸಭೆಯಲ್ಲಿ ಸಿಬ್ಬಂದಿಯಿಂದಲೇ ಮಹತ್ವದ ದಾಖಲೆ ಕಳ್ಳತನ ಯತ್ನ

ಇತ್ತೀಚೆಗಷ್ಟೆ ಜೆಡಿಎಸ್ ಪಕ್ಷವನ್ನು ತೊರೆದು ಆಪರೇಷನ್ ಕಮಲದ ಮೂಲಕ ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸಿದ್ದರು. ಇದರಲ್ಲಿ ಕೆಲವು ಸದಸ್ಯರ ಪ್ರಮುಖ ಕಡತಗಳನ್ನು ಕೆಲ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯಕ್ಕೆ ಸಲ್ಲಿಸಬೇಕಿತ್ತು. ಇಂತಹ ದಾಖಲೆಗಳನ್ನು ದ್ವಿತೀಯ ದರ್ಜೆ ಸಹಾಯಕ ಪ್ರವೀಣ್ ಕಚೇರಿಯ ಬೀರುವಿನಿಂದ ಕಳ್ಳತನ ಮಾಡಲು ಯತ್ನಿಸಿ ವಿಫಲನಾಗಿದ್ದು, ಸದ್ಯ ಈತನ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಓದಿ: ಹಾವೇರಿ: ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.