ಹಾಸನ: ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರ ಮತ್ತು ಜಿಪಂ ಅಧ್ಯಕ್ಷರ ನಡುವೆ ವಾಗ್ವಾದ ನಡೆದಿದ್ದು, ಆಕ್ರೋಶಗೊಂಡ ಅಧ್ಯಕ್ಷೆ ಶ್ವೇತಾ ದೇವರಾಜು ಸಭೆ ಇಷ್ಟವಿಲ್ಲದವರು ಹೊರ ಹೋಗಬಹುದು ಎಂದು ಕೆಲ ಸದಸ್ಯರಿಗೆ ತಾಕೀತು ಮಾಡಿದ ಪ್ರಸಂಗ ನಡೆಯಿತು.
ಹಾಸನ ಜಿಲ್ಲೆ ವಿಚಾರ ಬಹಳ ವಿಶೇಷವಾಗಿರುವ ವಿಚಾರವಾಗಿದೆ. ಮೂರು ಪಕ್ಷಗಳು ವಿಚಿತ್ರವಾಗಿ ವಿಚಾರವನ್ನು ಚರ್ಚೆ ಮಾಡುತ್ತದೆ. ಜಿಲ್ಲಾ ಪಂಚಾಯತ್ ಕ್ಷೇತ್ರವಾರು ಎಲ್ಲಾವನ್ನು ಕ್ರೂಢಿಕರಿಸಿ ಮಾಡಬೇಕು. ಒಬ್ಬೊಬ್ಬರೇ ವಿಷಯದ ಬಗ್ಗೆ ಗಮನಸೆಳೆದು ಮತ್ತೊಬ್ಬರಿಗೆ ಅವಕಾಶ ಕೊಡಬೇಕು ಎಂದು ಮತ್ತೋರ್ವ ಸದಸ್ಯರು ಹೇಳಿದರೆ. ಇನ್ನೋರ್ವ ಸದಸ್ಯರು ಎದ್ದು ನಿಂತು ನಾವು ಅಜೆಂಡ ಪ್ರಕಾರವಾಗಿಯೇ ವಿಷಯವನ್ನು ಚರ್ಚೆ ಮಾಡುತ್ತಿದ್ದೇವೆ. ಕೆಲ ಇಲಾಖೆ ಬಗ್ಗೆ ಮಾತನಾಡಲು ನಮಗೆ ಅವಕಾಶ ಕೊಡಲು ಅನುಮತಿಗಾಗಿ ಮೊದಲೆ ಪತ್ರವನ್ನು ನೀಡಬೇಕು, ಮೂರು ವರ್ಷದಿಂದ ನಮ್ಮ ಕ್ಷೇತ್ರದಲ್ಲಿ ಯಾವ ಕೆಲಸವಾಗಿರುವುದಿಲ್ಲ ಎಂದರು.
ಸದಸ್ಯರುಗಳಾದ ರತ್ನಮ್ಮ, ತೌಫಿಕ್ ಅಹಮದ್, ಪಟೇಲ್ ಶಿವಪ್ಪ, ಸೇರಿದಂತೆ ಇತರ ಸದಸ್ಯರು ಕೆಲ ವಿಷಯವನ್ನು ವಾಗ್ವಾದ ಮಾಡುವುದರ ಮೂಲಕ ಗಮನಸೆಳೆದರು.ಹಳ್ಳಿ ಮೈಸೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಚಂದ್ರಶೇಖರ್ ಅವರು ಅಧ್ಯಕ್ಷರು ಸಾರಿಗೆ ವೆಚ್ಚದಲ್ಲಿ ಹಲವಾರು ಕಡೆಗೆ ಭೇಟಿ ನೀಡಿ ಅದರ ಸಾರಿಗೆ ವೆಚ್ಚ ಪಡೆದಿದ್ದಾರೆ. ಆದರೆ ಅವರು ಯಾವ ಪ್ರದೇಶಕ್ಕೆ ಭೇಟಿ ನೀಡಿದ್ದಾರೆಯೋ ಆ ಸದಸ್ಯರಿಗೆ ಮಾಹಿತಿ ನೀಡಿಲ್ಲ. ಬದಲಿಗೆ ಅಲ್ಲಿಗೆ ಬಂದಿದ್ದಾರೋ ಇಲ್ಲವೋ ಗೊತ್ತಿಲ್ಲವೆಂದು ಅನುಮಾನ ವ್ಯಕ್ತಪಡಿಸಿದರು.
ಈ ಆರೋಪಕ್ಕೆ ಪ್ರತ್ಯುತ್ತರ ನೀಡಿದ ಜಿ.ಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ತಾವು ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿರುವ ಪ್ರದೇಶಗಳಲ್ಲಿ ಆಯಾ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಆದರೆ ನಾನು ಸಾರಿಗೆ ವೆಚ್ಚ ಪಡೆದಿಲ್ಲ. ಬೇಕಿದ್ದರೆ ಈ ಬಗ್ಗೆ ಒಂದು ತನಿಖೆ ನಡೆದು ನಿಮ್ಮ ಆರೋಪಗಳು ಸುಳ್ಳು ಎಂದು ಎಲ್ಲರಿಗೂ ಮನದಟ್ಟು ಆಗಲಿ ಎಂದು ತಿರುಗೇಟು ನೀಡಿದರು.