ETV Bharat / state

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಹಾಸನದಲ್ಲಿ 68 ಶುದ್ಧ ಗಂಗಾ ನೀರಿನ ಘಟಕ - dharmasthala-rural-development-project

ಹಾಸನ ಜಿಲ್ಲೆಯಲ್ಲಿ ಒಟ್ಟು 68 ಶುದ್ಧ ಗಂಗಾ ಘಟಕಗಳನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿಯಲ್ಲಿ ಸ್ಥಾಪಿಸಿದ್ದು, ಇವು ಜಿಲ್ಲೆಯ 12,600 ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುತ್ತಿದೆ.

ಶುದ್ಧ ಕುಡಿಯುವ ನೀರಿನ ಘಟಕ
author img

By

Published : Aug 1, 2019, 4:23 PM IST

Updated : Aug 1, 2019, 7:24 PM IST

ಹಾಸನ: ಜಿಲ್ಲೆಯ ಒಟ್ಟು 68 ಶುದ್ಧ ಗಂಗಾ ಘಟಕಗಳನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿಯಲ್ಲಿ ಸ್ಥಾಪಿಸಿದ್ದು, ಇದು ಜಿಲ್ಲೆಯ 12,600 ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುತ್ತಿದೆ.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಹಾಸನದಲ್ಲಿ ಶುದ್ಧ ಗಂಗಾ ನೀರಿನ ಘಟಕ

ಕುಡಿಯುವ ನೀರಿಗಾಗಿ ಈ ಘಟಕಗಳನ್ನು ಆಶ್ರಯಿಸಿರುವ ಸಾರ್ವಜನಿಕರು ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ನೀರಿನ ಘಟಕಗಳ ಮುಂದೆ ಸರತಿಯಲ್ಲಿ ನಿಂತು ಕುಡಿಯುವ ನೀರನ್ನು ಸಂಗ್ರಹ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿನ ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ ನೀರಿನ ಘಟಕಗಳಿಗೆ ಬೇಡಿಕೆ ಇದ್ದು, ಸರ್ಕಾರ ಈ ಬಗ್ಗೆ ಗಮನಹರಿಸಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ನಗರ ಪ್ರದೇಶ ಹೊರತುಪಡಿಸಿ ಕೆಲವು ಹಳ್ಳಿಗಳಿಗೆ ಕೊಳವೆ ಬಾವಿ ಹಾಗೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದರೂ ಸಹ ಅದು ಸಮರ್ಪಕವಾಗಿರಲಿಲ್ಲ. ಈಗ ಧರ್ಮಸ್ಥಳ ಅಭಿವೃದ್ಧಿ ಯೋಜನೆಯಲ್ಲಿ ಶುದ್ಧ ನೀರಿನ ಘಟಕ ಪ್ರಾರಂಭವಾದ ನಂತರ ಸಾರ್ವಜನಿಕರಲ್ಲಿ ಶುದ್ಧ ನೀರಿನ ಮಹತ್ವದ ಜೊತೆಗೆ ಆರೋಗ್ಯದ ಬಗ್ಗೆ ಕಾಳಜಿ, ಅರಿವು ಮೂಡಿಸಲಾಗುತ್ತಿದೆ.

ಸಮುದಾಯ ಅಭಿವೃದ್ಧಿ ವಿಭಾಗದ ಶುದ್ಧ ಗಂಗಾ ಯೋಜನಾ ಘಟಕದಲ್ಲಿ ಪ್ರತಿದಿನ 10 ಸಾವಿರ ಲೀಟರ್ ನೀರನ್ನು ಶುದ್ಧೀಕರಿಸಿದರೆ 5 ಸಾವಿರ ಲೀಟರ್ ಮಾತ್ರ ಕುಡಿಯಲು ಯೋಗ್ಯ ನೀರು ಪಡೆಯಬಹುದು. ಕುಡಿಯಲು ಯೋಗ್ಯವಲ್ಲದ ನೀರನ್ನು ದಿನನಿತ್ಯದ ಕೆಲಸಗಳಿಗೆ ಮತ್ತು ಜಮೀನುಗಳಿಗೆ ಬಳಸಬಹುದು. ಶುದ್ಧ ಗಂಗಾ ಯೋಜನೆ ವತಿಯಿಂದ ನೀರು ಶುದ್ಧೀಕರಣದ ಯಂತ್ರ ಸ್ಥಾಪಿಸಿ 2 ರೂಪಾಯಿಗೆ 20 ಲೀಟರ್ ನೀಡಲಾಗುತ್ತಿದೆ.

ಬರವಿರುವ ತಾಲೂಕಿನಲ್ಲಿ ಹೆಚ್ಚಿದ ಬೇಡಿಕೆ: ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿರುವ ಅರಸೀಕೆರೆ ತಾಲೂಕಿನಲ್ಲಿ ಸಿಡಿಎಸ್ ಅಂಶವೂ ಕಂಡುಬರುತ್ತದೆ. ಇದನ್ನು ಇಲ್ಲಿನ 28 ಶುದ್ಧ ಗಂಗಾ ಯೋಜನಾ ಘಟಕಗಳಲ್ಲಿ ನೀರನ್ನು ಶುದ್ಧೀಕರಿಸಿ, ಸಾರ್ವಜನಿಕರಿಗೆ ನೀಡಲಾಗುತ್ತದೆ. ಪ್ರತಿನಿತ್ಯ 2.52 ಲಕ್ಷ ಲೀಟರ್ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದೆ.

Intro:ಹಾಸನ: ಎಲ್ಲ ಜಿಲ್ಲೆಯ ತಾಲೂಕುಗಳಲ್ಲಿ ಸೇರಿ 68 ಶುದ್ದಗಂಗಾ ಘಟಕಗಳನ್ನು ಗ್ರಾಮೀಣಾಭಿವೃದ್ಧಿ ಯೋಜನೆಯ ಸ್ಥಾಪಿಸಿದ್ದು, ಇದು ಜಿಲ್ಲೆಯ 12,600 ಕುಟುಂಬಕ್ಕೆ ಶುದ್ಧ ನೀರು ಒದಗಿಸುತ್ತಿದೆ ಎಂಬುದೇ ಹೆಗ್ಗಳಿಕೆ.

ಈ ಘಟಕಗಳನ್ನು ಆಶ್ರಯಿಸಿರುವ ಸಾರ್ವಜನಿಕರು ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ನೀರಿನ ಘಟಕಗಳ ಮುಂದೆ ಸರದಿಯಲ್ಲಿ ನಿಲ್ಲುವುದು ಸಾಮಾನ್ಯವಾಗಿದೆ. ಈ ಘಟನೆಗಳಿಗೆ ಪ್ರಸ್ತುತ ಭಾರಿ ಬೇಡಿಕೆ ಬಂದಿದ್ದು, ಜನರು ಒಂದು ಕ್ಯಾನ್ ನೀರು ತುಂಬಿಸಿಕೊಳ್ಳಲು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ ಮಲೆನಾಡಿನಲ್ಲಿದೆ ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಬೇಡಿಕೆ ಹೆಚ್ಚಿದೆ. ಹೀಗಾಗಿ ಇನ್ನೂ ಇನ್ನೂ ಹೆಚ್ಚು ಘಟಕಗಳಿಗೆ ಬೇಡಿಕೆ ಇದ್ದು, ಸರಕಾರ ಈ ಬಗ್ಗೆ ಗಮನಹರಿಸಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯ.

ನಗರ ಹೊರತುಪಡಿಸಿ ಕೆಲವು ಹಳ್ಳಿಗಳಿಗೆ ಕೊಳವೆ ಬಾವಿ ಹಾಗೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದರೂ ಸಹ ಅದು ಸಮರ್ಪಕವಾಗಿಲ್ಲ. ಹೀಗಾಗಿ ನಗರದಲ್ಲಿ ಬಹುತೇಕ ಬಡಾವಣೆಗಳ ಜನತೆ ಕುಡಿಯುವ ನೀರಿಗೆ ಕೊಳವೆ ಬಾವಿಗಳನ್ನು ಅವಲಂಬಿಸಿದ್ದರೂ ಕುಡಿಯುವುದು ಯೋಗ್ಯವಲ್ಲದ ನೀರನ್ನೇ ಬಳಕೆ ಮಾಡುತ್ತಿದ್ದರು ಅಭಿವೃದ್ಧಿ ಯೋಜನೆ ಪ್ರಾರಂಭವಾದ ನಂತರ ಸಾರ್ವಜನಿಕರಲ್ಲಿ ಶುದ್ಧ ನೀರಿನ ಮಹತ್ವದ ಜತೆಗೆ ಆರೋಗ್ಯದ ಕಾಳಜಿ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

ಸಮುದಾಯ ಅಭಿವೃದ್ಧಿ ವಿಭಾಗ ಶುದ್ದಗಂಗಾ ಯೋಜನಾ ಘಟಕದಲ್ಲಿ ಪ್ರತಿದಿನ10 ಸಾವಿರ ನೀರನ್ನು ಶುದ್ಧೀಕರಿಸಿದರೆ 5 ಸಾವಿರ ಲೀಟರ್ ಮಾತ್ರ ಕುಡಿಯಲು ಯೋಗ್ಯ ನೀರು ಪಡೆಯಬಹುದು. ಯೋಗ್ಯವಲ್ಲದ ನೀರನ್ನು ದಿನನಿತ್ಯದ ಕೆಲಸಗಳಿಗೆ ಮತ್ತು ಜಮೀನುಗಳಿಗೆ ಬಳಸಬಹುದು ಅಲ್ಲದೆ ಒಂದು ಶುದ್ದಗಂಗಾ ನೀರಿನ ಘಟಕ ಸ್ಥಾಪಿಸಲು 10 ಲಕ್ಷ ರೂ. ಬೇಕಾಗುತ್ತದೆ. ಅದನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಮುದಾಯ ಅಭಿವೃದ್ಧಿ ವಿಭಾಗ ಶುದ್ದಗಂಗಾ ಯೋಜನೆ ವತಿಯಿಂದ ಯಂತ್ರ ಸ್ಥಾಪಿಸಿ 20 ಲೀಟರ್ ನೀರಿಗೆ 2 ರಂತೆ ನೀಡಲಾಗುತ್ತಿದೆ.

ಬರ ತಾಲೂಕಿನಲ್ಲಿ ಹೆಚ್ಚಿದ ಬೇಡಿಕೆ :

ಫ್ಲೋರೈಡ್ ಅಂಶ ಹೆಚ್ಚಿರುವ ಅರಸೀಕೆರೆ ತಾಲೂಕಿನಲ್ಲಿ ಒಂದು ಸಾವಿರದಿಂದ ಒಂದೂವರೆ ಸಾವಿರ ಜೆಡಿಎಸ್ ಅಂಶ ಕಂಡುಬರುತ್ತದೆ ಇದನ್ನು ಇಲ್ಲಿನ 28 ಸಿದ್ದಗಂಗಾ ಯೋಜನಾ ಘಟನೆಗಳನ್ನು ಶುದ್ಧೀಕರಿಸಿ ಪೂರೈಕೆ ಕಡಿಮೆ ಮಾಡಿ ಸಾರ್ವಜನಿಕರಿಗೆ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಎಷ್ಟು ತಾಲೂಕು ಸಮುದಾಯ ಅಭಿವೃದ್ಧಿ ವಿಭಾಗ ಸಿದ್ದಗಂಗಾ ಯೋಜನೆ 63 ಘಟಕಗಳನ್ನು ಹೊಂದಿದ್ದು, 12,600 ಕುಟುಂಬಗಳು ಈ ಘಟಕಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಪ್ರತಿನಿತ್ಯ 2.52 ಲಕ್ಷ ಲೀಟರ್ ನೀರು ಪೂರೈಕೆ ಆಗುತ್ತಿದೆ.

Body:೦

Conclusion:KN_HSN_01_CONGRESS_PROTEST_AVB
Last Updated : Aug 1, 2019, 7:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.