ETV Bharat / state

ತೂಕ, ಬೆಲೆಯಲ್ಲಿ ವ್ಯಾಪಾರಸ್ಥರು ಮಾಡುತ್ತಿದ್ದ ಮೋಸ ಕೃತ್ಯದ ಪ್ರಾತ್ಯಕ್ಷಿಕೆ ನೀಡಿದ ಅಧಿಕಾರಿಗಳು - janaspandana program

ಇಂದು ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಆಯೋಜನೆ ಮಾಡಲಾಗಿದ್ದ ವಸ್ತು ಪ್ರದರ್ಶನದಲ್ಲಿ ಅಧಿಕಾರಿಯೊಬ್ಬರು ಗ್ರಾಹಕರಿಗೆ ವ್ಯಾಪಾರಸ್ಥರು ಯಾವ ರೀತಿ ಮೋಸ ಮಾಡುತ್ತಾರೆ ಎಂಬುದನ್ನು ಜಿಲ್ಲಾ ಉಸ್ತುವಾರಿ ಸಚಿವರ ಎದುರಲ್ಲಿಯೇ ತೋರಿಸಿದರು.

janaspandana program
ವಸ್ತು ಪ್ರದರ್ಶನ
author img

By

Published : Feb 25, 2021, 2:17 PM IST

ಹಾಸನ/ಬೇಲೂರು: ದಿನಸಿ ಅಂಗಡಿಗಳು ಮತ್ತು ನ್ಯಾಯ ಬೆಲೆ ಅಂಗಡಿಗಳು ತೂಕದಲ್ಲಿ ಗ್ರಾಹಕರಿಗೆ ಸಾಕಷ್ಟು ಮೋಸ ಮಾಡುತ್ತಿವೆ ಎಂದು ಆರೋಪ ಮಾಡಿ ಸ್ಥಳದಲ್ಲಿಯೇ ಆಹಾರ ಇಲಾಖೆಯ ಅಧಿಕಾರಿ ಮಂಜುನಾಥ್ ಪ್ರಾತ್ಯಕ್ಷಿಕೆ ಮೂಲಕ ಹೇಗೆಲ್ಲ ಮೋಸ ನಡೆಯುತ್ತದೆ ಎಂದು ತೋರಿಸಿದರು.

ಇಂದು ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಆಯೋಜನೆ ಮಾಡಲಾಗಿದ್ದ ವಸ್ತು ಪ್ರದರ್ಶನದಲ್ಲಿ ಅಧಿಕಾರಿಯೊಬ್ಬರು ಗ್ರಾಹಕರಿಗೆ ವ್ಯಾಪಾರಸ್ಥರು ಯಾವ ರೀತಿ ಮೋಸ ಮಾಡುತ್ತಾರೆ ಎಂಬುದನ್ನು ಜಿಲ್ಲಾ ಉಸ್ತುವಾರಿ ಸಚಿವರ ಎದುರಲ್ಲಿಯೇ ತೋರಿಸಿದರು.

ವಸ್ತು ಪ್ರದರ್ಶನ

ಬೇಲೂರು ತಾಲೂಕಿನ ಹಲವೆಡೆ ನಾವು ಈಗಾಗಲೇ ದಾಳಿ ನಡೆಸಿ ದಿನಸಿ ಅಂಗಡಿಯ ಮಾಲೀಕರಿಗೆ ದಂಡ ವಿಧಿಸಿದ್ದೇವೆ. ಅಲ್ಲದೇ ಗ್ರಾಹಕರಿಗೆ ವಂಚನೆ ಮಾಡುತ್ತಿದ್ದ ಕೆಲವು ಅಡುಗೆ ಎಣ್ಣೆ ಕಂಪನಿಯ ಮೇಲೂ ಕೂಡ ನೋಟಿಸ್ ನೀಡಿದ್ದೇವೆ. ಕಂಪನಿಯಿಂದ ನಿಗದಿಪಡಿಸಿದ ಬೆಲೆಯ ಮೇಲೆ ಮತ್ತೊಂದು ಸ್ಟೀಕರ್ ಅಂಟಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ತೂಕದ ಬಟ್ಟಿನಲ್ಲಿ ಕೂಡ ವ್ಯತ್ಯಾಸ ಕಂಡು ಬರುತ್ತಿದ್ದು, ಕೆಜಿಗೆ 50 ಗ್ರಾಂ, 100 ಗ್ರಾಂ ತೂಕದಲ್ಲಿ ವ್ಯತ್ಯಾಸ ಬರುವಂತೆ ಅಡ್ಜೆಸ್ಟ್​​​ಮೆಂಟ್ ಮಾಡಿದ್ದರು. ಇಂತಹ ಕೃತ್ಯವನ್ನ ಎಸಗಿದವರ ಮೇಲೆ ಕಾನೂನೂ ಕ್ರಮ ಜರುಗಿಸಲಾಗಿದೆ. ಅವರಿಗೆ ಈಗಾಗಲೇ ದಂಡ ವಿಧಿಸಿದೆ ಎಂದು ಜನಸ್ಪಂದನ ಕಾರ್ಯಕ್ರಮದ ವಸ್ತುಪ್ರದರ್ಶನದಲ್ಲಿ ಅವರು ಸಚಿವರಿಗೆ ತಿಳಿಸಿದರು.

’ಇಲ್ಲಪ್ಪ ನನಗೆ ಆಗಲ್ಲ’: ಇನ್ನು ವಸ್ತುಪ್ರದರ್ಶನದಲ್ಲಿ ಪಾದರಕ್ಷೆ ಅಂಗಡಿಗೆ ಭೇಟಿ ನೀಡಿದ ಸಚಿವ ಗೋಪಾಲಯ್ಯಗೆ ಏನ್​ ಸಾರ್​ ಚಪ್ಪಲಿ ತೆಗೆದುಕೊಳ್ಳುತ್ತೀರಾ ಎಂದು ಶಾಸಕ ಲಿಂಗೇಶ್ ಕಿಚಾಯಿಸಿದಾಗ, ನನಗೆ ಆಗಲ್ಲಪ್ಪ ನನ್ನ ಕಾಲಿನ ಅಳತೆಗೆ ಇಲ್ಲಿರುವ ಚಪ್ಪಲಿ ಆಗೋಲ್ಲ. ಬೇಕಾದ್ರೆ ಹೇಳು ನಿನಗೆ ತೆಗೆದುಕೊಡುವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.