ಸಕಲೇಶಪುರ: ತಾಲೂಕಿನ ಕೆಲವಳ್ಳಿ ಗ್ರಾಮದ ಕಾಫಿ ಬೆಳೆಗಾರ ಕೆ.ಎಂ ಜಗದೀಶ್ ಹಾಗೂ ಕೆ.ಜೆ. ಮೀನಾಕ್ಷಿ ಅವರ ಪುತ್ರಿ ಕೆ.ಜೆ. ಜಾಗೃತಿ, ವಿಜ್ಞಾನ ವಿಭಾಗದಲ್ಲಿ 591 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ 6ನೇ ರ‍್ಯಾಂಕ್ ಗಳಿಸಿದ್ದಾರೆ.
ಉಡುಪಿ ಜಿಲ್ಲೆ ಕಾರ್ಕಳದ ಜ್ಞಾನಸುಧಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು, ಶೇ.98.5 ಫಲಿತಾಂಶ ಪಡೆದಿದ್ದಾರೆ. ಈ ಸಾಧನೆ ಕುರಿತು ಮಾತನಾಡಿರುವ ಜಾಗೃತಿ, ಪರೀಕ್ಷೆಗೆ ಆತಂಕದಿಂದ ಓದುವುದು ಬೇಡ. ಸಾಮಾನ್ಯವಾಗಿ ಓದಿದರೆ ಉತ್ತಮ ಅಂಕ ಪಡೆಯಲು ಸಾಧ್ಯ ಎಂದರು.