ETV Bharat / state

ಅಂಬೇಡ್ಕರ್ ಬ್ಯಾನರ್​ ಹರಿದು ಹಾಕಿದ ಕಿಡಿಗೇಡಿಗಳ ಬಂಧನಕ್ಕೆ ಪ್ರತಿಭಟನೆ - ಸಚಿವ ಕೆ.ಗೋಪಾಲಯ್ಯ

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಧಾರವಾಹಿಗೆ ಸಂಬಂಧಪಟ್ಟ ಅಂಬೇಡ್ಕರ್ ಇರುವ ಬ್ಯಾನರ್​ ಹರಿದು ಹಾಕಿರುವ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಒತ್ತಾಯಿಸಿ, ದಲಿತ ಮುಖಂಡರು ಮತ್ತು ಜನಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.

Dalit leaders Protest In Hassan
ಅಂಬೇಡ್ಕರ್ ಬ್ಯಾನರ್​ ಹರಿದುಹಾಕಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಪ್ರತಿಭಟನೆ
author img

By

Published : Aug 12, 2020, 5:09 PM IST

ಹೊಳೆನರಸೀಪುರ (ಹಾಸನ): ಅಂಬೇಡ್ಕರ್ ಇರುವ ಬ್ಯಾನರ್​ ಹರಿದು ಹಾಕಿರುವ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಒತ್ತಾಯಿಸಿ ದಲಿತ ಮುಖಂಡರು ಮತ್ತು ಜನಪರ ಸಂಘಟನೆಗಳು ಜಿಲ್ಲಾ ಉಸ್ತುವಾರಿ ಸಚಿವ ರ ಮುಂದೆ ಪ್ರತಿಭಟನೆ ನಡೆಸಿದರು.

ಅಂಬೇಡ್ಕರ್ ಬ್ಯಾನರ್​ ಹರಿದುಹಾಕಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಪ್ರತಿಭಟನೆ

ಹೊಳೆನರಸೀಪುರ ಪುರಸಭೆಯಲ್ಲಿ ಹಮ್ಮಿಕೊಂಡಿದ್ದ ಕೋವಿಡ್-19 ಪರಿಶೀಲನಾ ಸಭೆಗೆ ಸಚಿವ ಕೆ.ಗೋಪಾಲಯ್ಯ ಹಾಜರಾಗುವ ವೇಳೆ ಪುರಸಭಾ ಮುಂಭಾಗ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು. ಖಾಸಗಿ ಮನರಂಜನಾ ವಾಹಿನಿಯಲ್ಲಿ ಮಹಾನಾಯಕ ಎಂಬ ಧಾರವಾಹಿ ಪ್ರಸಾರವಾಗುತ್ತಿದ್ದು, ಹೊಳೆನರಸೀಪುರ ಬಯಲು ರಂಗಮಂದಿರದ ಬಳಿ ಈ ಧಾರವಾಹಿಯ ಬ್ಯಾನರ್ ಒಂದನ್ನು ಹಾಕಲಾಗಿತ್ತು.

ಆದರೆ, ಮಂಗಳವಾರ ರಾತ್ರಿ ಕಿಡಿಗೇಡಿಗಳು ಕುಡಿದ ಅಮಲಿನಲ್ಲಿ ಬ್ಯಾನರ್​ನ್ನು ಹರಿದು ಹಾಕಿ ವಿಕೃತಿ ಮೆರೆದಿದ್ದಾರೆ. ಹೀಗಾಗಿ ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.