ETV Bharat / state

ಬೇಕರಿಯಲ್ಲಿ ಸಿಲಿಂಡರ್ ಸ್ಫೋಟ: 15-20 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಭಸ್ಮ

ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಬೇಕರಿ ಕಟ್ಟಡ ಛಿದ್ರಗೊಂಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.

CYLINDER_BLAST
ಗ್ಯಾಸ್ ಸಿಲಿಂಡರ್ ಸ್ಪೋಟ
author img

By

Published : Feb 14, 2020, 3:25 PM IST

Updated : Feb 14, 2020, 3:45 PM IST

ಹಾಸನ/ ಸಕಲೇಶಪುರ: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಬೇಕರಿ ಕಟ್ಟಡ ಛಿದ್ರಗೊಂಡು 15-20 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.

ಸಕಲೇಶಪುರ ಪಟ್ಟಣದ ಹೃದಯ ಭಾಗದಲ್ಲಿರುವ ಪುರಸಭಾ ಕಚೇರಿಗೆ ಹೊಂದಿಕೊಂಡಂತಿರುವ ಐಯ್ಯಂಗಾರ್ ಬೇಕರಿಯಲ್ಲಿಂದು ಸಿಲಿಂಡರ್ ಸ್ಫೋಟಗೊಂಡ ಹಿನ್ನೆಲೆ ಬೇಕರಿ ಸಂಪೂರ್ಣ ಸುಟ್ಟು ಕರಕಲಾಗಿದೆ. ರಮೇಶ್ ಎಂಬುವರ ಮಾಲೀಕತ್ವದ ಈ ಬೇಕರಿಯಲ್ಲಿ ಸಿಲಿಂಡರ್ ಸೋರಿಕೆ ಆಗುತ್ತಿದ್ದರಿಂದ ಆ ಸೋರಿಕೆಯನ್ನು ತಡೆಗಟ್ಟಲು ಬೇಕರಿ ಮಾಲೀಕರು ಮತ್ತು ಕೆಲಸಗಾರರು ಪ್ರಯತ್ನಿಸಿದ್ದರು. ಆದ್ರೆ ಸೋರಿಕೆ ಹೆಚ್ಚಾಗಿ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಬೇಕರಿಯ ಕಟ್ಟಡ ಛಿದ್ರಗೊಂಡಿದ್ದು, ಪಕ್ಕದಲ್ಲಿದ್ದ ಸೂಪರ್ ಬಜಾರ್, ವಿಜಯ ಬ್ಯಾಂಕ್, ಶಿಲ್ಪ ಬೇಕರಿ ಹಾಗೂ ಪುರಸಭಾ ಕಚೇರಿಗೂ ಸಾಕಷ್ಟು ಪ್ರಮಾಣದ ಹಾನಿಯಾಗಿದೆ.

ಗ್ಯಾಸ್ ಸಿಲಿಂಡರ್ ಸ್ಪೋಟ

ರಮೇಶ್ ಒಡೆತನದ ಸಿಹಿ ತಯಾರಿಕಾ ಅಂಗಡಿಯಲ್ಲಿ ಸುಮಾರು 15 ಲಕ್ಷ ಮೌಲ್ಯದ ಯಂತ್ರೋಪಕರಣಗಳು ಸ್ಫೋಟಗೊಂಡಿದ್ದರಿಂದ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯವನ್ನ ಮಾಡಿದರು. ಸ್ಫೋಟಗೊಂಡ ಹಿನ್ನೆಲೆಯಲ್ಲಿ ಸಂಚಾರ ಕೂಡ ಅಸ್ತವ್ಯಸ್ತವಾಗಿತ್ತು. ಹಾಸನ-ಮಂಗಳೂರು ರಸ್ತೆಯಲ್ಲಿ ವಾಹನಗಳು ಕಿಲೋಮೀಟರ್​​ಗಟ್ಟಲೇ ನಿಂತ ಪರಿಣಾಮ ಸಂಚಾರ ದಟ್ಟಣೆ ಸರಿಪಡಿಸಲು ಸಂಚಾರಿ ಪೊಲೀಸರು ಹರಸಾಹಸಪಟ್ಟರು.

ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಕಲೇಶಪುರ ನಗರ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Last Updated : Feb 14, 2020, 3:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.