ಅರಕಲಗೂಡು: ರಾಜ್ಯ ಸರ್ಕಾರದ ಆದೇಶದಂತೆ ತಾಲ್ಲೂಕಿನ ಪ್ರತಿ ಹೋಬಳಿಯಲ್ಲೂ ರೈತರ ಜಮೀನಿನ ಬೆಳೆಯ ಬಗ್ಗೆ ಸಮೀಕ್ಷೆ ಮಾಡಿ ಮಾಹಿತಿ ಸಂಗ್ರಹಿಸಲು ಎಲ್ಲಾ ರಾಜಸ್ವ ನಿರೀಕ್ಷಕರು, ಗ್ರಾಮಲೆಕ್ಕಿಗರು ಮತ್ತು ಕಂದಾಯ ಇಲಾಖೆಗೆ ಸಂಬಂಧಿಸಿದ ಸಿಬ್ಬಂದಿ ವರ್ಗದವರಿಗೆ ನಿರ್ದೇಶಿಸಲಾಗಿದೆ.
ಈ ಬಗ್ಗೆ ಬೆಳೆ ಸಮೀಕ್ಷೆ ಪರಿಶೀಲನೆಗಾಗಿ ಇಂದು ತಹಶಿಲ್ದಾರ್ ಮಲ್ಲಿಪಟ್ಟಣ ಹೋಬಳಿಯ ಜೋಗಿ ಹೊಸಹಳ್ಳಿ ಮತ್ತು ಹೊಳಲಗೋಡು ಕಂದಾಯ ವೃತ್ತದ ಜಮೀನುಗಳಿಗೆ ಸ್ವತಃ ಭೇಟಿ ನೀಡಿ ಬೆಳೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಇದೇ ವೇಳೆ ಮಲ್ಲಿಪಟ್ಟಣ ಹೋಬಳಿಯ ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕರಾದ ಶಶಿಧರ್ ಮತ್ತು ಗ್ರಾಮಲೆಕ್ಕಿಗರು, ತಹಶಿಲ್ದಾರ್ ಅವರಿಗೆ ಜಮೀನನ ಮಾಹಿತಿ, ರೈತನ ಹೆಸರು, ಸರ್ವೇ ನಂಬರ್, ಹಾಗೂ ಜಮೀನಿನಲ್ಲಿ ಬೆಳೆದ ಬೆಳೆ ಇತ್ಯಾದಿ ವಿವರ ಒದಗಿಸಿದರು.
ಇದೇ ವೇಳೆ ಮಾತನಾಡಿದ ತಹಶಿಲ್ದಾರ್ ಪ್ರತಿಯೊಬ್ಬ ರೈತರು ತಮ್ಮ ಜಮೀನಿನ ವಿವರ, ಬೆಳೆ ಬೆಳೆಯ ವಿಧಾನ ಇತ್ಯಾದಿಗಳ ಬಗ್ಗೆ ವಿವರವನ್ನು ದಾಖಲಿಸಬೇಕು. ಇದರಿಂದ ಅನೇಕ ಅನುಕೂಲತೆಗಳಿವೆ ಎಂದು ತಿಳಿಸಿದರು.